Breaking Posts

6/trending/recent
Type Here to Get Search Results !

8:10:45

ಉಪ ತಹಸೀಲ್ದಾರ್ ಮೇಲೆ ಹಲ್ಲೆ ಪ್ರಕರಣ: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮತ್ತು ಇತರ ನಾಲ್ವರಿಗೆ ಒಂದು ವರ್ಷ ಮೂರು ತಿಂಗಳು ಜೈಲು ಶಿಕ್ಷೆ.

ಉಪ ತಹಸೀಲ್ದಾರ್ ಮೇಲೆ ಹಲ್ಲೆ ಪ್ರಕರಣ: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮತ್ತು ಇತರ ನಾಲ್ವರಿಗೆ ಒಂದು ವರ್ಷ ಮೂರು ತಿಂಗಳು ಜೈಲು ಶಿಕ್ಷೆ.
ಕಾಸರಗೋಡು: ಚುನಾವಣಾ ವಿಚಾರಣೆ ವೇಳೆ ಉಪ ತಹಸೀಲ್ದಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ನಾಲ್ವರಿಗೆ ನ್ಯಾಯಾಲಯ ಒಂದು ವರ್ಷ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಎ.ಕೆ.ಎಂ ಅಶ್ರಫ್ ಅಲ್ಲದೆ, ಬಶೀರ್, ಅಬ್ದುಲ್ಲಾ ಮತ್ತು ಅಬ್ದುಲ್ ಖಾದರ್ ಅವರಿಗೆ ಒಂದು ವರ್ಷ ಮೂರು ತಿಂಗಳು ಜೈಲು ಶಿಕ್ಷೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನವೆಂಬರ್ 25, 2010 ರಂದು ಬೆಳಿಗ್ಗೆ ನಡೆದಿತ್ತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಚುನಾವಣಾ ವಿಚಾರಣೆ ವೇಳೆ ಅವ್ಯವಹಾರದ ಕಾರಣದಿಂದ ಮತದಾರರ ಅರ್ಜಿಯನ್ನು ಮುಂದೂಡಲಾಯಿತು. ಕಾಸರಗೋಡು ಉಪ ತಹಸೀಲ್ದಾರ್ ದಾಮೋದರನ್ ಮತ್ತಿತರರು ಚುನಾವಣಾ ಕರ್ತವ್ಯದ ಭಾಗವಾಗಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಅರ್ಜಿ ಮುಂದೂಡಿಕೆ ವಿಚಾರವಾಗಿ ಎ.ಕೆ.ಎಂ ಅಶ್ರಫ್ ಹಾಗೂ ಇತರ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಉಪ ತಹಸೀಲ್ದಾರ್ ಮೇಲೆ ಹಲ್ಲೆ ನಡೆಸಿ, ಅಡ್ಡಿಪಡಿಸಿ ಕುರ್ಚಿ ಎಸೆದ ಪ್ರಕರಣ ನಡೆದಿತ್ತು. ಎ.ಕೆ.ಎಂ ಅಶ್ರಫ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಎಂ. ಎಲ್. ಅಶ್ವಿನಿ.
ಮಂಜೇಶ್ವರ: ಚುನಾವಣಾ ವಿಚಾರಣೆ ವೇಳೆ ಉಪ ತಹಸೀಲ್ದಾರ್ ಮೇಲೆ ಹಲ್ಲೆ ನಡೆಸಿ ಜೈಲು ಶಿಕ್ಷೆಗೆ ಗುರಿಯಾಗಿರುವ ಎ.ಕೆ.ಎಂ ಅಶ್ರಫ್ ಮಂಜೇಶ್ವರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಎಂ. ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. 2010 ರಲ್ಲಿ, ಎ.ಕೆ.ಎಂ.ಅಶ್ರಫ್ ಮತ್ತವರ ತಂಡ ಮಂಜೇಶ್ವರ ಬ್ಲಾಕ್ ಪಂಚಾಯತ್ ಗೆ ತಲುಪಿ, ಅಂದು ಉಪ ತಹಸೀಲ್ದಾರ್ ಆಗಿದ್ದ ಎ. ದಾಮೋದರನ್ ರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಕಾಸರಗೋಡು ಮೆಜಿಸ್ಟ್ರೇಟ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಯಾವುದೇ ಜನಪರ ಹೋರಾಟ, ಆಂದೋಲನದ ಹೆಸರಿನಲ್ಲಿ ಶಿಕ್ಷೆ ನೀಡಿಲ್ಲ. ಮೈಸೂರಿನಲ್ಲಿ ಮತ ಹೊಂದಿರುವ ವ್ಯಕ್ತಿಯನ್ನು ಮಂಜೇಶ್ವರದಲ್ಲಿ ಮತದಾರರ ಪಟ್ಟಿಗೆ ಸೇರಿಸಲು ನಿರಾಕರಿಸಿದ್ದಕ್ಕೆ ಚುನಾವಣಾಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಚುನಾವಣೆ ಪ್ರಕ್ರಿಯೆಗೆ ಲೀಗ್ ಮುಖಂಡರು ಅಡ್ಡಿಪಡಿಸಲು ಯತ್ನಿಸಿರುವುದು ಗಂಭೀರ ವಿಚಾರ. ಮಂಜೇಶ್ವರ ಕ್ಷೇತ್ರದಲ್ಲಿ ಕಾಲಕಾಲಕ್ಕೆ ನಕಲಿ ಮತಗಳು ಮತ್ತು ಎರಡು ಮತಗಳನ್ನು ಬಳಸಿ ಮುಸ್ಲಿಂ ಲೀಗ್ ವಶಪಡಿಸಿಕೊಂಡಿವೆ. ಚುನಾವಣಾ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಹಾಗೂ ಬೂತ್‌ಗಳನ್ನು ಅತಿಕ್ರಮಣ ಮಾಡುವುದು ಹಲವು ಬಾರಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. 14 ವರ್ಷಗಳ ನಂತರ ತೀರ್ಪು ಬಂದಿದ್ದರೂ ಇದು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿರುವುದು ನಾನು ಸ್ವಾಗತಿಸುತ್ತೇನೆ ಎಂದು ಎಂ.ಎಲ್. ಅಶ್ವಿನಿ ಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಜೇಶ್ವರ ಶಾಸಕರಿಗೆ ರಾಜಕೀಯ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು - ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್.
ಮಂಜೇಶ್ವರ: ಜನಪ್ರತಿನಿದಿಯಾಗಿ ಜನರ ಸೇವೆ ಮಾಡಬೇಕಾದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸರಕಾರಿ ಉದ್ಯೋಗಸ್ಥರಿಗೆ ನಕಲಿ ಮತದಾರ ಚೀಟಿ ಮಾಡಿ ಕೊಡಲು ಒತ್ತಾಯಿಸಿ ಹಲ್ಲೆ ನಡೆಸಿರುವುದು ಖಂಡನಿಯ ವಿಚಾರವಾಗಿತ್ತು. ಕೋರ್ಟ್ ಆಜ್ಞೆಗೆ ತಲೆಬಾಗಿ ಶಾಸಕರು ನೈತಿಕತೆ ತೋರಿ ರಾಜೀನಾಮೆ ನೀಡಬೇಕು ಶಿಕ್ಷೆಗೆ ಒಳಗಾದ ಶಾಸಕರು ಮಂಜೇಶ್ವರಕ್ಕೆ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.