ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ಕುಳೂರು ಎಸ್. ಸಿ ಪ್ರಿಯದರ್ಶಿನಿ ಕಾಲನಿಯಲ್ಲಿ ಪುಷ್ಪಾರ್ಚನೆ ಹಾಗೂ ಸ್ವಚ್ಛತಾ ಕಾರ್ಯಕ್ರಮ.
ಅಕ್ಟೋಬರ್ 02, 2023
0
ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ಕುಳೂರು ಎಸ್. ಸಿ ಪ್ರಿಯದರ್ಶಿನಿ ಕಾಲನಿಯಲ್ಲಿ ಪುಷ್ಪಾರ್ಚನೆ ಹಾಗೂ ಸ್ವಚ್ಛತಾ ಕಾರ್ಯಕ್ರಮ.
ಮಂಜೇಶ್ವರ: ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಬಿಜೆಪಿ ಮೀಂಜ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಕುಳೂರು ವಾರ್ಡಿನ ಪ್ರಿಯದರ್ಶಿನಿ ಎಸ್.ಸಿ ಕಾಲನಿಯಲ್ಲಿ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಎಂ.ಎಲ್ ಅಶ್ವಿನಿಯವರು ಪುಷ್ಪಾರ್ಚನೆ ಸಲ್ಲಿಸಿ, ಉದ್ಘಾಟಿಸಿ, ಮಾತನಾಡಿದರು. ಬಿಜೆಪಿ ಮೀಂಜ ಪಂಚಾಯತ್ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಭಟ್ ಹಾಗೂ ನೇತಾರಾದ ಕೆ. ನಾರಾಯಣ ನಾಯಕ್ ನಡುಹಿತ್ತಿಲು ಕುಳೂರು ಮತ್ತು ಕಾಲನಿಯ ಪ್ರಮುಖರು ಉಪಸ್ಥಿತರಿದ್ದರು. ಗಾಂಧಿ ಜಯಂತಿಯ ಅಂಗವಾಗಿ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನದಂಗವಾಗಿ "ಸ್ವಚ್ಛತೆಗಾಗಿ ಶ್ರಮದಾನ ಮಾಡೋಣ" ಎಂಬ ಕಾಯಕಲ್ಪದಡಿ ಕಾಲನಿ ಪರಿಸರದಲ್ಲಿ ಬೆಳೆದಿರುವ ಕಾಡುಪೊದೆಗಳನ್ನು ಹಾಗೂ ಹಬ್ಬಿರುವ ಮುಳ್ಳು ಗಿಡಗಳನ್ನು, ಹುಲ್ಲುಗಳನ್ನು ಸಂಸ್ಥೆಯ ಸದಸ್ಯರು ಕೀಳಿ, ಪರಿಸರವನ್ನು ಸ್ವಚ್ಛಗೊಳಿಸಲಾಯಿತು.




