Breaking Posts

6/trending/recent
Type Here to Get Search Results !

8:10:45

ಪುತ್ತೂರು ಬೀರಮಲೆ ನಿವಾಸಿ ಚಿನ್ನದ ಕುಸುರಿ ಕೆಲಸಗಾರರಾಗಿದ್ದ ಬಾಲಕೃಷ್ಣ ಆಚಾರ್ಯ (64) ನಿಧನ.

ಪುತ್ತೂರು ಬೀರಮಲೆ ನಿವಾಸಿ ಚಿನ್ನದ ಕುಸುರಿ ಕೆಲಸಗಾರರಾಗಿದ್ದ ಬಾಲಕೃಷ್ಣ ಆಚಾರ್ಯ (64) ನಿಧನ.
ಪುತ್ತೂರು: ಬೀರಮಲೆ ನಿವಾಸಿ ದಿ. ನಾರಾಯಣ ಆಚಾರ್ಯರ ಪುತ್ರ ಚಿನ್ನದ ಕುಸುರಿ ಕೆಲಸಗಾರರಾಗಿದ್ದ ಬಾಲಕೃಷ್ಣ ಆಚಾರ್ಯ (64) ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ರಾತ್ರಿ ನಿಧನರಾದರು. ಮೃತರು ಪತ್ನಿ ಮಹೇಶ್ವರೀ, ಮಕ್ಕಳಾದ: ಗೌರಿ, ಮಚ್ಚೆಂದ್ರ ಆಚಾರ್ಯ (ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರಿ ಉದ್ಯೋಗಿ), ಸೋಮನಾಥ ಆಚಾರ್ಯ, ಅಳಿಯ: ದಿನೇಶ್ ಆಚಾರ್ಯ ಬೇಕೂರು, ಸಹೋದರ - ಸಹೋದರಿಯರಾದ: ಕೊಗ್ಗಪ್ಪ ಆಚಾರ್ಯ, ಮೋಹನ ಆಚಾರ್ಯ, ವಸಂತ ಆಚಾರ್ಯ, ಜಯಂತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಪುತ್ತೂರು ಕೋರ್ಟ್ ರೋಡ್ ನಲ್ಲಿರುವ ಮನು ಸ್ವ - ಸಹಾಯ ಸಂಘದ ಸದಸ್ಯರಾಗಿದ್ದಾರೆ. ಮೃತರ ನಿಧನಕ್ಕೆ ಮನು ಸ್ವ - ಸಹಾಯ ಸಂಘ ಕೋರ್ಟ್ ರೋಡ್ ಹಾಗೂ ಪುತ್ತೂರಿನ ವಿಶ್ವಕರ್ಮ ಸಮಾಜ ಭಾಂದವರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಅಪರಾಹ್ನ 12.00 ಗಂಟೆಯ ಒಳಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆ ಬಳಿ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.