ಮಂಜೇಶ್ವರ ತಾಲೂಕಿನಲ್ಲಿ 400 ಕ್ಕೂ ಹೆಚ್ಚು ಸರಕಾರಿ ನೌಕರರ ಸೀಟು ಖಾಲಿ: ನಾಗರೀಕರಿಂದ ಆಕ್ರೋಶ.
ಅಕ್ಟೋಬರ್ 12, 2023
0
ಮಂಜೇಶ್ವರ ತಾಲೂಕಿನಲ್ಲಿ 400 ಕ್ಕೂ ಹೆಚ್ಚು ಸರಕಾರಿ ನೌಕರರ ಸೀಟು ಖಾಲಿ: ನಾಗರೀಕರಿಂದ ಆಕ್ರೋಶ.
ಮಂಜೇಶ್ವರ: ಮಂಜೇಶ್ವರ ತಾಲೂಕಿನ ವಿವಿಧ ಸರಕಾರಿ ಕಚೇರಿಗಳಲ್ಲಿ 400 ಕ್ಕೂ ಹೆಚ್ಚು ಸರಕಾರಿ ನೌಕರರ ಸೀಟು ಖಾಲಿ ಇದ್ದು ಇದೀಗ ನಾಗರೀಕರು ಅಸಮಾಧನ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ - ಮಲಯಾಳಂ ಪರಿಜ್ಞಾನ ಹೊಂದಿರುವ ಗುಮಾಸ್ತರ 120 ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿದೆ. ಈ ಹುದ್ದೆಗೆ 2016 ರಲ್ಲಿ PSC ನೊಟೀಪಿಕೇಶನ್ ಕರೆದಿದ್ದರೂ ಈ ಹುದ್ದೆಗೆ 7 ವಷ೯ ಕಳೆದರೂ ನೇಮಕಾತಿ ನಡೆಸಲು ಸಾಧ್ಯವಾಗಿಲ್ಲ. ಇತ್ತಿಚ್ಚೆಗೆ ಶೋರ್ಟ್ ಲಿಸ್ಟ್ PSC ಪ್ರಸಿದ್ಧಿಕರಿಸಿದ್ದು, ಬದಿಯಡ್ಕ ಸಮೀಪದ ಕನ್ನಡಿಗರೋರ್ವರು ಟ್ರುಬ್ಯುನಲ್ ಗೆ ದಾವೆ ಹೂಡಿದ ಹಿನ್ನಲೆಯಲ್ಲಿ ಈ ನೇಮಕಾತಿ ಪ್ರಕ್ರಿಯೆಗೆ ಕೋರ್ಟು ತಡೆ ನೀಡಿದ ಹಿನ್ನಲೆಯಲ್ಲಿ ಈ ನೇಮಕಾತಿಯನ್ನು PSC ಗೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಮಂಜೇಶ್ವರ ತಾಲೂಕು ಕಚೇರಿಯ ಹೆಚ್ಚಿನ ಎಲ್ಲಾ ಕುರ್ಚಿಗಳು ಖಾಲಿಯಾಗಿದ್ದು ಕಚೇರಿ ದಿನನಿತ್ಯದ ಕೆಲಸ ಕಾಯಗಳು ವಿಳಂಭವಾಗುತ್ತಿದೆ. ಕನ್ನಡ - ಮಲಯಾಳಂ ಕ್ಲರ್ಕ್ ಸಹಿತ ಹಲವಾರು ಹುದ್ದೆಗಳು ಮಂಜೇಶ್ವರ, ಮಂಗಲ್ಪಾಡಿ, ವಕಾ೯ಡಿ, ಮಿಂಜ, ಪೈವಳಿಕೆ ಪಂಚಾಯತ್ ಗಳಲ್ಲಿ ಹಾಗೂ ಮಂಜೇಶ್ವರ ತಾಲೂಕು ಕಚೇರಿ, ವೀಂಜ. ಕೋಡ್ಲಮೊಗರು, ಬಡಾಜೆ ಸಹಿತ ವಿವಿಧ ಗ್ರಾಮ ಕಚೇರಿಗಳಲ್ಲಿ ಹಾಗೂ ಸರಕಾರಿ ಕಾಲೇಜು, ಸಬ್ ರಿಜಿಸ್ಟ್ರಾರ್ ಕಚೇರಿ ಸಹಿತ ವಿವಿದ ಕಚೇರಿಗಳಲ್ಲಿ ಸರಕಾರಿ ನೌಕರರ ಹುದ್ದೆಗಳು ಖಾಲಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹಾಗೂ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯ ಜನರ ಸಮಸ್ಯೆಯನ್ನು ಅರಿತು ಕೂಡಲೇ ಜಿಲ್ಲೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.
