Breaking Posts

6/trending/recent
Type Here to Get Search Results !

8:10:45

ವಿಶ್ವಕರ್ಮ ಸಮಾಜ ಬಾಂಧವರ ಕಾಸರಗೋಡು ಮ್ಯಾರಥಾನ್ 2024 ಜನವರಿ 14 ರಂದು.

ವಿಶ್ವಕರ್ಮ ಸಮಾಜ ಬಾಂಧವರ ಕಾಸರಗೋಡು ಮ್ಯಾರಥಾನ್ 2024 ಜನವರಿ 14 ರಂದು.
ಕಾಸರಗೋಡು: ಪ್ರಪ್ರಥಮ ಬಾರಿಗೆ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ವಿಶ್ವಕರ್ಮ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ನಡೆಯಲಿರುವ 6 ಕಿಲೋ ಮೀಟರ್ ಮ್ಯಾರಥಾನ್ ಓಟ ಹಾಗೂ ನಡಿಗೆ ಸ್ಪರ್ಧೆಯು ಮಕರ ಸಂಕ್ರಮಣ ದಿನವಾದ 2024 ಜನವರಿ 14 ರಂದು ಕಾಸರಗೋಡಿನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ. ಈ ತಿಂಗಳ 22 ರಂದು ಕಾಸರಗೋಡಿನ ಮಧೂರಿನ ಶ್ರೀ ಕಾಳಿಕಾಂಬ ಮಠದಲ್ಲಿ ನಡೆಯಬೇಕಾಗಿದ್ದ ಈ ಸ್ಪರ್ಧೆಯು ಕಾರಣಾಂತರಗಳಿಂದ ಮುಂದೂಡಿ ಜನವರಿ 14 ರಂದು ನಡೆಸಲು ನಿರ್ಧರಿಸಿದ್ದೇವೆ ಎಂದು
ಮ್ಯಾರಥಾನ್ ಓಟಗಾರರಾದ
ಕೆ.ಎಲ್.ರಾಮಚಂದ್ರ ಆಚಾರ್ಯ ಕೊಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದ ಸಂಪೂರ್ಣ ವಿವರ ಮುಂದೆ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗೆ 9964348177 ಗೆ ಸಂಪರ್ಕಿಸಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.