Breaking Posts

6/trending/recent
Type Here to Get Search Results !

8:10:45

"ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2023" ಆಮಂತ್ರಣ ಪತ್ರಿಕೆ ಎಡನೀರು ಶ್ರೀ ಗಳಿಂದ ಮಂಗಳೂರಿನಲ್ಲಿ ಬಿಡುಗಡೆ.

"ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2023" ಆಮಂತ್ರಣ ಪತ್ರಿಕೆ ಬಿಡುಗಡೆ.
ಕಾಸರಗೋಡು: ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ಪಾಂಗೊಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಸಾಂಸ್ಕೃತಿಕ ಘಟಕ ಹಾಗೂ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ನುಳ್ಳಿಪ್ಪಾಡಿ ಆಶ್ರಯದಲ್ಲಿ ಈ ತಿಂಗಳ 15 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ "ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2023" ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಮಂಗಳೂರಿನಲ್ಲಿ ನಡೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರೀತ ಕೋಟ ಶಿವರಾಮ ಕಾರಂತ ಜಯಂತಿ ಪ್ರಯುಕ್ತ ಪ್ರದೀಪ್ ಕುಮಾರ್ ಕಲ್ಕೂರ ಸಾರತ್ಯದ ಕಲ್ಕೂರ ಪ್ರತಿಷ್ಠಾನ ಮಂಗಳೂರು ಆಯೋಜಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ದಸರಾ ಸಾಂಸ್ಕೃತಿಕೋತ್ಸವದ ರೂವಾರಿಯಾದ ಕನ್ನಡ ಭವನದ ವಾಮನ್ ರಾವ್ ಬೇಕಲ್ ಇವರೀಗೆ ನೀಡುವ ಮೂಲಕ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಬಿಡುಗಡೆ ಗೊಳಿಸಿ, ಶುಭಾಶೀರ್ವಚನವಿತ್ತರು. ಬಳಿಕ ಮಾತನಾಡಿದ ಶ್ರೀಗಳು "ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ಕಾಯಕ ನಿರಂತರವಾಗಿರಲಿ "ಎಂದು ಶುಭ ಹಾರೈಸಿದರು. ಪ್ರದೀಪ್ ಕುಮಾರ್ ಕಲ್ಕೂರ, ಡಾ ಹರಿಕೃಷ್ಣ ಪುನರೂರ್, ತಟ್ಟಂತ ಹೇಳಿ "ಖ್ಯಾತಿಯ ಡಾ ನಾ. ಸೋಮೇಶ್ವರ್, ಕ್ಯಾ. ಗಣೇಶ್ ಕಾರ್ಣಿಕ್, ಡಾ.ಎಂ.ಬಿ ಪುರಾಣಿಕ್, ಡಾ. ಪ್ರಭಾಕರ್ ಜೋಶಿ, ಶಾಸಕರಾದ ವೇದವ್ಯಾಸ್ ಕಾಮತ್, ರೊಯ್ ಕಷ್ಟಲಿನೋ, ಪತ್ತುಮುಡಿ ಸೂರ್ಯ ನಾರಾಯಣ್ ರಾವ್, ಅಚ್ಚುತ ಚೆವಾರ್, ಥೋಮಸ್ ಡಿ' ಸೋಜಾ, ರವಿ ನಾಯ್ಕಾಪು, ಎ. ಆರ್ ಸುಬ್ಬಯ್ಯ ಕಟ್ಟೆ, ಪ್ರೊ, ಎ ಶ್ರೀನಾಥ್, ಸಂಧ್ಯಾರಾಣಿ ಟೀಚರ್, ಶ್ರೀ ಹರಿ ಭಟ್ ಪೆಲ್ತಾಜೆ ಮುಂತಾದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.