ಅಗಲಿದ ಸಿ.ಪಿ.ಎಂ ಹಿರಿಯ ಮುಖಂಡ, ಕೆ.ಎಸ್. ಟಿ. ಎ ನೇತಾರ, ಸಿ.ಐ.ಟಿ.ಯು ಮಾಜಿ ಏರಿಯಾ ಕಾರ್ಯದರ್ಶಿ ಚಂದಪ್ಪ ಮಾಸ್ಟರ್ ಗೆ ಸರ್ವಪಕ್ಷ ಸಂತಾಪ ಸೂಚಕ ಸಭೆ.
ಸೆಪ್ಟೆಂಬರ್ 27, 2023
0
ಅಗಲಿದ ಸಿ.ಪಿ.ಎಂ ಹಿರಿಯ ಮುಖಂಡ, ಕೆ.ಎಸ್. ಟಿ. ಎ ನೇತಾರ, ಸಿ.ಐ.ಟಿ.ಯು ಮಾಜಿ ಏರಿಯಾ ಕಾರ್ಯದರ್ಶಿ ಚಂದಪ್ಪ ಮಾಸ್ಟರ್ ಗೆ ಸರ್ವಪಕ್ಷ ಸಂತಾಪ ಸೂಚಕ ಸಭೆ.
ಮಂಜೇಶ್ವರ: ಸಿ.ಪಿ.ಎಂ ಹಿರಿಯ ಮುಖಂಡ ಕೆ.ಎಸ್.ಟಿ.ಎ ನೇತಾರ ಸಿ.ಐ.ಟಿ.ಯು ಮಾಜಿ ಏರಿಯಾ ಕಾರ್ಯದರ್ಶಿಯಾಗಿದ್ದ ಚಂದಪ್ಪ ಮಾಸ್ಟರ್ ರಿಗೆ ಸರ್ವಪಕ್ಷ ಸಂತಾಪ ಸೂಚಕ ಸಭೆ ಹೊಸಂಗಡಿ ಎ.ಕೆ.ಜಿ ಮಂದಿರದಲ್ಲಿ ನಡೆಯಿತು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೆಟ್ ಮೆಂಬರ್ ಕೆ.ಆರ್ ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಚಂದಪ್ಪ ಮಾಸ್ಟರ್ ರ ಕುರಿತು ಸಿಪಿಐ ನೇತಾರ ಬಿ.ವಿ ರಾಜನ್ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರೀಶ್ಚಂದ್ರ ಮಂಜೇಶ್ವರ, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ, ಮುಸ್ಲಿಂ ಲೀಗ್ ನೇತಾರ ಅಬ್ದುಲ್ಲ ಕಜೆ, ಕೆ.ಎಸ್.ಟಿ.ಎ ಜಿಲ್ಲಾ ಅಧ್ಯಕ್ಷರಾದ ಶ್ಯಾಮ್ ಭಟ್ ಪೈವಳಿಕೆ, ಬೆನ್ನಿ ಮಾಸ್ಟರ್, ರೈತ ಸಂಘ ಜಿಲ್ಲಾ ಸಮಿತಿ ಸದಸ್ಯ ಶಂಕರ್ ರೈ ಮಾಸ್ಟರ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ, ಮಜಿಬೈಲು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಸಿಪಿಎಂ ಮಂಜೇಶ್ವರ ಏರಿಯಾ ಕಮಿಟಿ ಸದಸ್ಯರಾದ ಡಿ. ಕಮಲಾಕ್ಷ, ಕೆ. ಕಮಲಾಕ್ಷ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಸುಳ್ಯಮೆ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ ಯತೀಶ್ ಮೊದಲಾದವರು ಮಾತನಾಡಿ, ಸಂತಾಪ ಸೂಚಿಸಿದರು. ಪ್ರಶಾಂತ್ ಕನಿಲ ಸ್ವಾಗತಿಸಿದರು.









