Breaking Posts

6/trending/recent
Type Here to Get Search Results !

8:10:45

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ - ಪಡುಕುತ್ಯಾರು, ಉಡುಪಿಯಲ್ಲಿ ಆನೆಗುಂದಿ ಶ್ರಿಗಳವರ "ಚಾತುರ್ಮಾಸ್ಯ ಸೀಮೋಲ್ಲಂಘನ, ದ್ವಿಗಿಜಯ ಮಹೋತ್ಸವ ಸಮಾರೋಪ" ಸೆ. 29 ರಂದು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ - ಪಡುಕುತ್ಯಾರು, ಉಡುಪಿ ಜಿಲ್ಲೆ ಆನೆಗುಂದಿಶ್ರಿಗಳವರ ಚಾತುರ್ಮಾಸ್ಯ ಸೀಮೋಲ್ಲಂಘನ, ದ್ವಿಗಿಜಯ ಮಹೋತ್ಸವ ಸಮಾರೋಪ ಸೆ.29 ರಂದು.
ಉಡುಪಿ/ಪಡುಕುತ್ಯಾರು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯವು ಸೆ. 29 ರಂದು ಸಮಾಪ್ತಿಗೊಳ್ಳಲಿದ್ದು ಅಂದು ಸೀಮೋಲ್ಲಂಘನ, ದ್ವಿಗಿಜಯ ದಿಗ್ವಿಜಯ ಮೆರವಣಿಗೆಯ ಬಳಿಕ ಸಮಾರೋಪ ಸಮಾರಂಭವು ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ಘಂಟೆ 6 ರಿಂದ ವಿಶ್ವಕರ್ಮ ಯಜ್ಞ ಬಳಿಕ ಮಹಾಸಂಸ್ಥಾನದ ಬಳಿ ಮಠದ ಸಮೀಪದಲ್ಲಿ ಸಿಮೋಲ್ಲಂಘನ - ದಿಗ್ವಿಜಯ ಮೆರವಣಿಗೆಯ ಮೂಲಕ ಕಟಪಾಡಿಗೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಬೆಳಗುತ್ತಿಮಠ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನ, ಕಟಪಾಡಿ ವೇಣುಗಿರಿಶ್ರೀ ಕಾಳಿಕಾಂಬಾ ವಿಶ್ವಕಮೇಶ್ವರ ದೇವಸ್ಥಾನ, ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸಂದರ್ಶನ ಸೇವೆ ಸಮರ್ಪಣೆ ಮತ್ತು ಪೂಜೆ ನಂತರ ಕಾಪು ಶ್ರೀ ಕಾಳಿಕಾಂಬಾ ದೇವಳ - ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರ ದಾರಿಯಾಗಿ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಮಠಕ್ಕೆ ಜಗದ್ಗುರುಗಳವರು ಮೆರವಣಿಗೆಯಲ್ಲಿ ಪಡುಕುತ್ಯಾರು ಮಹಾಸಂಸ್ಥಾನಕ್ಕೆ ಪಾದಾರ್ಪಣೆಗೈಯಲ್ಲಿದ್ದಾರೆ. ನಂತರ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಶ್ರೀಗುರುಪಾದ ಪೂಜೆ ನಡೆಯಲಿದ್ದು, ಘಂಟೆ 11.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಸಮಾರೋಪ ಸಮಾರಂಭ ನಡೆಯಲಿದೆ. ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಶ್ರೀಮತ್ ಆನೆ
ಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ (ರಿ.) ಕಟಪಾಡಿ, ಇದರ ಅಧ್ಯಕ್ಷ ಹಾಗೂ ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ ಧರ್ಮದರ್ಶಿ ಆಗಿರುವ ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಸಭೆಯ ಅಧ್ಯಕ್ಷತೆ ವಹಿಸುವರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಮಹಾ ಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಅಂತರಾಷ್ಟ್ರೀಯ ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು (ಧರ್ಮಾಧಿಕಾರಿಗಳು ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನ ನಾಯಂಡರಹಳ್ಳಿ ಬೆಂಗಳೂರು), ವೇ.ಬ್ರ ಶ್ರೀ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್‌ (ಪಂಡಿತ್)‌ ಹುಬ್ಬಳ್ಳಿ ಇವರ ಘನ ಉಪಸ್ಥಿತಿಯಲ್ಲಿ ನಡೆಯುವ ಧರ್ಮ ಸಭೆಯಲ್ಲಿ ಕರ್ನಾಟಕ ಸರಕಾರದ ವಿಶ್ರಾಂತ ಕಾರ್ಯದರ್ಶಿಗಳಾದ ಶ್ರೀ ಕೆ. ಎಸ್‌ ಪ್ರಭಾಕರ ಭಾ.ಆ. ಸೇ ಅವರು "ಚಾತುರ್ಮಾಸ್ಯ ವ್ರತ ಮಹತ್ವ ಎನ್ನುವ ದಿಕ್ಸೂಚಿ ಭಾಷಣ" ಮಾಡುವರು. ಮಹಾಸಂಸ್ಥಾನದ ವಿಶ್ವಕರ್ಮ ಧ್ವಜ ಸಮಿತಿ ಸಂಚಾಲಕ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು "ಸಮಾಜ ಐಕ್ಯತೆ – ಸಂಘಟನೆ ಪ್ರತೀಕ ವಿಶ್ವಕರ್ಮ ಧ್ವಜ" ಎನ್ನುವ ಬಗ್ಗೆ ಸಂದೇಶ ನೀಡುವರು. ಇದೇ ವೇಳೆ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ಚಿತ್ರ ವಿಮರ್ಶಕ) ವಿಜೇತರಾದ ಬಾಡೂರು ಎನ್‌. ಸುಬ್ರಹ್ಮಣ್ಯ (ಬಾನಾಸು) ಅವರಿಗೆ ಗೌರವಾಭಿನಂದನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಹಿಂದುಳಿದ ವಿಭಾಗ ಕಲ್ಯಾಣ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಶ್ರೀ ಶಿವಾರಾಜ್‌ ಎಸ್. ತಂಗಡಗಿ, ಮಾಜಿ ಸಚಿವ ವಿದಾನ ಪರಿಷತ್‌ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್, ಶ್ರೀ ಸುರೇಶ್‌ ಶೆಟ್ಟಿ ಗುರ್ಮೆ, ಶ್ರೀ ಯಶ್‌ ಪಾಲ್‌ ಸುವರ್ಣ, ಮಾಜಿ ಸಚಿವ ಶ್ರೀ ವಿನಯ್‌ ಕುಮಾರ್‌ ಸೊರಕೆ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಿಕಟ ಪೂರ್ವ ಅಧ್ಯಕ್ಷ ಶ್ರೀ ಬಾಬು ಪತ್ತಾರ ಹಾಗೂ ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಧರ್ಮದರ್ಶಿ, ಗೀತಾನಂದ ಫೌಂಡೇಶನ್‌ ಮಣೂರು ಪ್ರವರ್ತಕರಾದ ಶ್ರೀ ಆನಂದ ಸಿ.ಕುಂದರ್‌ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ವಿಶ್ವಕರ್ಮ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ. ಹರೀಶ್‌ ಆಚಾರ್ಯ ಜಲಕದಕಟ್ಟೆ, ಎಸ.ಕೆ.ಜಿ.ಐ ಕೋ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು, ವಿಶ್ವಕರ್ಮ ಒಕ್ಕೂಟ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಮಧು ಆಚಾರ್ಯ ಮೂಲ್ಕಿಶುಭಾಸಂಶನೆ ನಡೆಸುವರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜನಾರ್ಧನ ಆಚಾರ್ಯ ಕುತ್ಯಾರು ಗೌರವ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿದೆ. ಪ್ರತಿಷ್ಠಾನದ ಪ್ರಥಮ ವಿಶ್ವಸ್ಥರಾದ ಕಾಳಿಕಾಂಬಾ ದೇವಸ್ಥಾನಗಳ ಧರ್ಮದರ್ಶಿಗಳಾದ ಶ್ರೀ ಕೆ. ಕೇಶವ ಆಚಾರ್ಯ, ಮಂಗಳೂರು, ಶ್ರೀ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಶ್ರೀ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಕಾರ್ಕಳ, ಶ್ರೀ ಗಜಾನನ ಆರ್. ಆಚಾರ್ಯ, ಭಟ್ಕಳ, ಶ್ರೀ ಬಿ.ಎಂ.ಯದುನಂದನ ಆಚಾರ್ಯ ಬಂಗ್ರ ಮಂಜೇಶ್ವರ, ಶ್ರೀ ಮಧುಕರ ಚಂದ್ರಶೇಖರ ಆಚಾರ್ಯ, ಹೊನ್ನಾವರ ಗೋಕರ್ಣ, ಶ್ರೀ ನವೀನ್ ಆಚಾರ್ಯ ಪಡುಬಿದ್ರೆ ಕಟಪಾಡಿ, ಶ್ರೀ ಎ. ಶೇಖರ ಆಚಾರ್ಯ ಕಾಪು, ಶ್ರೀ ಕೆ. ಸುಧಾಕರ ಆಚಾರ್ಯ ಕೊಲಕಾಡಿ, ಶ್ರೀ ಪುರೋಹಿತ್ ಜಯಕರ ಆಚಾರ್ಯ ಮೂಡಬಿದ್ರೆ, ಶ್ರೀ ಕೆ. ಸುಂದರ ಆಚಾರ್ಯ ಕೋಟೆಕಾರು, ಶ್ರೀ ಜನಾರ್ದನ ಆಚಾರ್ಯ ಆರಿಕ್ಕಾಡಿ ಕುಂಬಳೆ, ನ್ಯಾಯವಾದಿ ಕೆ.ಪ್ರಭಾಕರ ಆಚಾರ್ಯ ಕೋಟೆಕಾರು, ಮಧೂರು, ಶ್ರೀ ಪುರುಷೋತ್ತಮ ಆಚಾರ್ಯ ಕಾಞಂಗಾಡು, ಶ್ರೀ ಸಿ.ಎ ಶ್ರೀಧರ ಆಚಾರ್ಯ ಪನ್ವೇಲ್, ಶ್ರೀ ಮನೋಹರ ಲಕ್ಕುಂಡಿ ಹುಬ್ಬಳ್ಳಿ, ಶ್ರೀ ಬಿ. ಜಗದೀಶ್ ಆಚಾರ್ಯ ಪಡುಪಣಂಬೂರು, ಶ್ರೀ ದತ್ತ ಎಂ ಆಚಾರ್ಯ ಅಂಕೋಲ, ಭಾಗವಹಿಸುವರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಗಂಗಾವತಿ ಅಧ್ಯಕ್ಷ ಶ್ರೀ ದಿನೇಶ್‌ ಆಚಾರ್ಯ ಪಡುಬಿದ್ರಿ, ಅಸೆಟ್ ಅಧ್ಯಕ್ಷ ಮತ್ತು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲಾ ಪಡುಕುತ್ಯಾರು ಪ್ರಧಾನ ಸಂಚಾಲಕ ಶ್ರೀ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ಗಣೇಶ್‌ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ) ಅಧ್ಯಕ್ಷ ಶ್ರೀ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷ ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರತಿಷ್ಠಾನದ ಬೆಂಗಳೂರು ವಲಯ ಸಮಿತಿ, ಮತ್ತು ಆನೆಗುಂದಿ ಶಾಖಾ ಮಠ ಸಮಿತಿ ಅಧ್ಯಕ್ಷ ಶ್ರೀ ಹರಿಶ್ಚಂದ್ರ ಎನ್. ಆಚಾರ್ಯ, ಬೆಂಗಳೂರು, ಪ್ರತಿಷ್ಠಾನದ ಕೊಯಂಬುತ್ತೂರು ವಲಯ ಸಮಿತಿ ಅಧ್ಯಕ್ಷ ಶ್ರೀ ಶುಭಕರ ಎನ್. ಆಚಾರ್ಯ, ಕೊಯಂಬತ್ತೂರು, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಶ್ರೀ ಸದಾನಂದ ಎಸ್. ಆಚಾರ್ಯ ಕಲ್ಯಾಣಪುರ, ದ.ಕ ವಿಶ್ವ ಬ್ರಾಹ್ಮಣ ಸಂಘ ಬೆಂಗಳೂರು ಅಧ್ಯಕ್ಷ ಶ್ರೀ ತುಕಾರಾಮ ಆಚಾರ್ಯ ಬೆಂಗಳೂರು, ವಿಶ್ವಕರ್ಮ ಸಮಾಜ ವೇದಿಕೆ ಬೆಂಗಳೂರು ಅಧ್ಯಕ್ಷ ಶ್ರೀ ನಲ್ಕ ತ್ರಿವಿಕ್ರಮ ಆಚಾರ್ಯ ಬೆಂಗಳೂರು ಭಾಗವಹಿಸುವರು. ನಂತರ ಚಾತುರ್ಮಾಸ್ಯದ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಅಭಿನಂದನೆ- ಕೃತಜ್ಞತಾ ಸಮರ್ಪಣೆ, ಅನುಗ್ರಹ ಮಂತ್ರಾಕ್ಷತೆ, ಮಹಾ ಸಂತರ್ಪಣೆ ನಡೆಯಲಿದೆ. ವಿಶ್ವ ಬ್ರಾಹ್ಮಣ ಕುಲಗುರುಗಳ ಚಾತುರ್ಮಾಸ್ಯ ಸೀಮೋಲ್ಲಂಘನ, ದ್ವಿಗಿಜಯ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಸಮಸ್ತ ಶಿಷ್ಯ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಸಿ ಜಗದ್ಗುರುಗಳವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಶ್ರೀ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ, ಅಧ್ಯಕ್ಷ ಶ್ರೀ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ ಬಿ ಆಚಾರ್‌ ಕಂಬಾರು ಹಾಗೂ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.