ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಬಡ ಕುಟುಂಬವೊಂದು ಚಿಕಿತ್ಸಾ ಸಹಾಯಕ್ಕಾಗಿ ದಾನಿಗಳ ನೆರವು ಯಾಚಿಸಿದೆ.
ಸೆಪ್ಟೆಂಬರ್ 08, 2023
0
ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಬಡ ಕುಟುಂಬವೊಂದು ಚಿಕಿತ್ಸಾ ಸಹಾಯಕ್ಕಾಗಿ ದಾನಿಗಳ ನೆರವು ಯಾಚಿಸಿದೆ.
ಮಂಜೇಶ್ವರ: ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಬಡ ಕುಟುಂಬವೊಂದು ಚಿಕಿತ್ಸಾ ಸಹಾಯಕ್ಕಾಗಿ ದಾನಿಗಳ ನೆರವು ಯಾಚಿಸಿದ್ದು, ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೊಳಪಟ್ಟ ಪ್ರತಾಪನಗರ ನಿವಾಸಿ ಪಿಗ್ಮಿ ಸಂಗ್ರಾಹಕ ಸುರೇಂದ್ರ ಆಚಾರ್ಯ (50) ಹೃದಯ ಸಂಬಂಧಿ ಕಾಯಿಲೆಯಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಶಸ್ತ್ರ ಚಿಕಿತ್ಸೆ ನಡೆಸಿದರೂ, ಲಕ್ಷಾಂತರ ರೂಪಾಯಿ ಚಿಕಿತ್ಸಾ ಮೊತ್ತವಾಗಿದ್ದು, ಅವರಿವರಿಂದ ಸಾಲಸೂಲ ಮಾಡಿ ಚಿಕಿತ್ಸೆಗೆ ಹಣ ಸಂದಾಯಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಚಿಕಿತ್ಸೆಗಾಗಿ ಮಾಡಿರುವ ಸಾಲದ ಹೊರೆಯ ಜತೆ ಮುಂದಿನ ಚಿಕಿತ್ಸೆಗೆ ಹಾಗೂ ಔಷಧಿಗೆ ಹಣದ ಅವಶ್ಯಕತೆ ಅನಿವಾರ್ಯವಾಗಿರುವ ಕಾರಣ ಮನೆ ಮಂದಿ ದಾನಿಗಳ ನೆರವು ಯಾಚಿಸುತ್ತಿದ್ದಾರೆ.
ಉಪ್ಪಳ ಬಳಿಯ ಮಂಗಲ್ಪಾಡಿ ಪ್ರತಾಪನಗರ ನಿವಾಸಿಯಾಗಿರುವ ಶಿಲ್ಪಿ ಆನಂದಾಚಾರ್ಯ - ದಿ. ರಮಾವತಿ ದಂಪತಿಯ ಪುತ್ರ ಸುರೇಂದ್ರ ಆಚಾರ್ಯರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯಾಗಿ, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಪಡೆದ ವ್ಯಕ್ತಿಯಾಗಿದ್ದರೆ. ಈ ಮೊದಲು ಚಿನ್ನದ ಕುಸುರಿ ಕೆಲಸ ಮಾಡುತ್ತಿದ್ದ ಸುರೇಂದ್ರ ಆಚಾರ್ಯರು ಬಳಿಕ ಉಪ್ಪಳ ಪೇಟೆಯ ಬಸ್ ತಂಗುದಾಣದ ಬಳಿ ಕಾರ್ಯಾಚರಿಸುವ ಕೆ.ಎಸ್. ಎಫ್. ಇ ಶಾಖೆಯಲ್ಲಿ ಕಳೆದ 15 ವರ್ಷಗಳಿಂದ ಪಿಗ್ಮಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಮಿಷನ್ ಆಧಾರದಲ್ಲಿ ಸಣ್ಣ ಸಂಬಳದಲ್ಲಿ ಪತ್ನಿ ಕಲಾವತಿ ಹಾಗೂ ತಂದೆಯ ಜೊತೆ ಜೀವನ ಸಾಗಿಸುತ್ತಿರುವ ಇವರು ಮೊನ್ನೆ ಸೆಪ್ಟೆಂಬರ್ 1 ರಂದು ಶುಕ್ರವಾರ ಸಂಜೆ 4 ರ ಸಮಯ ಎಂದಿನಂತೆ ಪಿಗ್ಮಿ ಸಂಗ್ರಹಣೆಗೆಂದು ತನ್ನ ದ್ವಿ - ಚಕ್ರ ವಾಹನದಲ್ಲಿ ಬಂದ್ಯೋಡ್ ಗೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎಡ ಕೈ ಸಿಡಿಯಲು ಪ್ರಾರಂಭವಾಯಿತು. ಕೂಡಲೇ ಸಾವರಿಸಿಕೊಂಡು ಹೇಗೋ.. ಉಪ್ಪಳದ ಖಾಸಗಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿದಾಗ ಹೃದಯ ಸಂಬಂಧಿ ಕಾಯಿಲೆ ಎಂದು ವೈದ್ಯರ ಗಮನಕ್ಕೆ ಬಂತು. ಕೂಡಲೇ ವೈದ್ಯರು ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ತಿಳಿಸಿದರೂ, ಆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲು ಹಣ ಅಧಿಕವಾಗುವ ಕಾರಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತೆರಳಲು ನಿರ್ಧರಿಸಿದರು. ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿ ರಾತ್ರಿ ವೇಳೆ ಹೃದಯ ಸಂಬಂಧಿ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ನಡೆಸಿ, ತೀವ್ರ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಇದೀಗ ಚೆತರಿಸುತ್ತಿದ್ದು, ಮುಂದಿನ ಚಿಕಿತ್ಸೆ ಔಷಧಿ ಮೂಲಕ ನಡೆಸಲಾಗುವುದು ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಅಲ್ಲದೇ 4 ತಿಂಗಳು ಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ದೇರಳಕಟ್ಟೆಯ ಆಸ್ಪತ್ರೆಯ ಒಟ್ಟು ಚಿಕಿತ್ಸೆ ಮೊತ್ತ 2.50 ಲಕ್ಷದಷ್ಟು ಆಗಿದ್ದು, ಬಿಲ್ ಪಾವತಿಸಲು ಅಷ್ಟು ಮೊತ್ತ ಇವರಲ್ಲಿ ಇಲ್ಲದ ವೇಳೆ ಅವರಿವರಿಂದ ಸಾಲ ಮಾಡಬೇಕಾಯಿತು. ಅಲ್ಲದೆ ಮುಂದಿನ ಚಿಕಿತ್ಸೆಗೆ ಹಾಗೂ ಔಷಧಿಗೆ, ಮನೆ ಖರ್ಚಿಗೆ ಲಕ್ಷಾಂತರ ರೂಪಾಯಿ ಬೇಕಾಗಬಹುದು ಎಂದು ಪತ್ನಿ ಕಲಾವತಿ ರೋಧಿಸುತ್ತಿದ್ದಾರೆ. ಕೇವಲ ಪಿಗ್ಮಿ ಸಂಗ್ರಹದ ಕಮಿಷನ್ ಮೊತ್ತದಲ್ಲಿ ಜೀವನ ಸಾಗಿಸುತ್ತಿದ್ದ ಸುರೇಂದ್ರರವರಿಗೆ ಇದೀಗ ಆಸ್ಪತ್ರೆ ಬಿಲ್, ಔಷಧಿ ಕರ್ಚು, ಮುಂದಿನ ಚಿಕಿತ್ಸೆ ಕರ್ಚಿಗೆ ಹಣವಿಲ್ಲದೆ ಕಂಗಾಲು ಆಗಿದ್ದಾರೆ. ಮುಂದಿನ ಚಿಕಿತ್ಸೆ ನೆರವಿಗಾಗಿ ಕೈ ಚಾಚಿದ ಇವರ ಕುಟುಂಬಕ್ಕೆ ಉದಾರ ದಾನಿಗಳಾದ ಹೃದಯವಂತರು, ವಿವಿಧ ಸಮಾಜಮುಖಿ ಸಂಘ ಸಂಸ್ಥೆಗಳು, ಮತ್ತು ತಾವೆಲ್ಲರೂ ಮನಬಿಚ್ಚಿ ಸಹಾಯ ನೀಡಿ ದುಃಖದ ಕಡಲಲ್ಲಿರುವ ಸುರೇಂದ್ರ ಆಚಾರ್ಯರನ್ನು ದಡ ಸೇರಿಸಬೇಕಾಗಿದೆ. ಸಹಾಯ ನಿಧಿ ನೀಡುವವರು ಸಹೋದರಿ ದಿವ್ಯರ ಬ್ಯಾಂಕ್ ಖಾತೆ ಸಂಖ್ಯೆ ಕೇರಳ ಗ್ರಾಮೀಣ ಬ್ಯಾಂಕ್ ಮಂಜೇಶ್ವರ ಶಾಖೆಯ ಖಾತೆ ಸಂಖ್ಯೆ 40459101018848, ( IFSC Code: KLGB80040459 ) ಗೆ ಸಂದಾಯಿಸಬಹುದಾಗಿದೆ. ಮತ್ತು ದಿವ್ಯರವರ ಗೂಗಲ್ ಪೇ ನಂಬರ್: 7356436281 ಗೆ ಕಳುಹಿಸಬಹುದಾಗಿದೆ. (ಅದೇ ನಂಬರ್ ವಾಟ್ಸಪ್ ಸಂಖ್ಯೆಗೆ ಮೊತ್ತ ರವಾನಿಸಿದ ಬಗ್ಗೆ ಸ್ಕ್ರೀನ್ ಶಾಟ್ ಕಳುಹಿಸಬೇಕಾಗಿ ವಿನಂತಿ.) ನೀವು ನೀಡುವ ಮೊತ್ತ ಸುರೇಂದ್ರ ಆಚಾರ್ಯರ ಬಾಳಿಗೆ ಬೆಳಕಾಗಬಹುದು.

