ಯಾವುದೇ ಶೀರ್ಷಿಕೆಯಿಲ್ಲ
ಸೆಪ್ಟೆಂಬರ್ 10, 2023
0
ಸಿಪಿಐ ದೇಶೀಯ ಆಂದೋಲನ ಬಿಜೆಪಿ ಹಠಾವೋ ದೇಶ್ ಬಚಾವೋ
ಮಂಜೇಶ್ವರ: ಸಿಪಿಐ ಮಂಜೇಶ್ವರ ಲೋಕಲ್ ಸಮಿತಿ ನೇತೃತ್ವದಲ್ಲಿ ಇಂದು ಬೆಳಗ್ಗೆ "ಬಿಜೆಪಿ ಹಠಾವೋ ದೇಶ್ ಬಚಾವೋ" ಎಂಬ ಘೋಷಣೆಯೊಂದಿಗೆ ಕುಂಜತ್ತೂರಿನಿಂದ - ಮಂಜೇಶ್ವರ ತನಕ ಕಾಲ್ನಡೆ ಜಾಥಾ ನಡೆಯಿತು. ಜಾಥವನ್ನು ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಎಸ್.ರಾಮಚಂದ್ರ ಬಡಾಜೆ ಉದ್ಘಾಟಿಸಿದರು. ಮುಸ್ತಫಾ ಕಡಂಬಾರ್ ಅಧ್ಯಕ್ಷತೆ ವಹಿಸಿದರು. ಜಾಥಾ ಕ್ಯಾಪ್ಟನ್ ಶ್ರೀಧರ್ ಮಾಡ, ಪಕ್ಷದ ಲೋಕಲ್ ಸಮಿತಿ ಸದಸ್ಯರು, ಬ್ರಾಂಚ್ ಸಮಿತಿ ಕಾರ್ಯದರ್ಶಿಗಳು, ಪಕ್ಷದ ಸದಸ್ಯರು, ಮಹಿಳಾ ಸಂಘ ನೇತಾರೆಯರು, AIYF ಸದಸ್ಯರು, ಬಾಲವೇಧಿ ಸದಸ್ಯರು ಮೊದಲಾದವರು ಭಾಗವಹಿಸಿದರು. ಗಣೇಶ್ ಕುಂಜತ್ತೂರ್ ಸ್ವಾಗತಿಸಿ, ದಯಾಕರ ಮಾಡ ವಂದಿಸಿದರು.

