ಅಗಲಿದ ಸತ್ಯನಾರಾಯಣ ಕಲ್ಲೂರಾಯರಿಗೆ ನುಡಿ ನಮನ.
ಸೆಪ್ಟೆಂಬರ್ 17, 2023
0
ಅಗಲಿದ ಸತ್ಯನಾರಾಯಣ ಕಲ್ಲೂರಾಯರಿಗೆ ನುಡಿ ನಮನ.
ಮಂಜೇಶ್ವರ: ಇತ್ತೀಚೆಗೆ ಅಗಲಿದ ಮೀಂಜ ಮಂಡಲ ಕಾಂಗ್ರೆಸ್ ಮಾಜೀ ಅಧ್ಯಕ್ಷ, ಪ್ರಗತಿಪರ ಕೃಷಿಕ, ಧಾರ್ಮಿಕ ಸಾಮಾಜಿಕ ಮುಂದಾಳು ಕೆ. ಸತ್ಯನಾರಾಯಣ ಕಲ್ಲೂರಾಯರಿಗೆ ನುಡಿನಮನ ಕಾರ್ಯಕ್ರಮ ಮೀಯಪದವಿನಲ್ಲಿ ಜರುಗಿತು. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಕಮಲಾಕ್ಷಿ. ಕೆ ಪುಷ್ಪಾರ್ಚನೆಗೈದರು. ಸಂಕಬೈಲು ಸತೀಶ ಅಡಪ್ಪ ಅಧ್ಯಕ್ಷತೆ ವಹಿಸಿದ್ದರು. ದಾಮೋದರ ಮಾಸ್ತರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸ್ಥಾಯೀ ಸಮಿತಿ ಮಾಜೀ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಕಾಂಗ್ರೆಸ್ ಮುಖಂಡರಾದ ಕಂಚಿಲ ಮೊಹಮ್ಮದ್, ಜಿ.ರಾಮ ಭಟ್, ಕಾಯಿಂಞ ಹಾಜೀ ತಲೇಕಳ, ಬಿ.ಕೆ.ಮೊಹಮ್ಮದ್,
ಶಾಫೀ ತಲೇಕಳ, ವಿನೋದ್ ಕುಮಾರ್, ಮೂಸಾ ಧರ್ಮನಗರ, ಪಳ್ಳಿಕುಂಞ ತಲೇಕಳ, ಹಮೀದ್ ಮೀಯಪದವು, ಜೋಕಿಂ ಮೊಂತೇರೋ ಮುಂತಾಧವರು ಉಪಸ್ಥಿತರಿದ್ದರು.
