Breaking Posts

6/trending/recent
Type Here to Get Search Results !

8:10:45

ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಮಂಜೇಶ್ವರ, ಕುಂಬಳೆ, ಬದಿಯಡ್ಕ ವಲಯ ಸಮಿತಿಗಳ ಜಂಟಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ, "ರಾಷ್ಟೀಯ ಕಾರ್ಮಿಕ ದಿನ" ದ ಅಂಗವಾಗಿ ಕುಂಬಳೆಯಲ್ಲಿ "ಕಾರ್ಮಿಕರ ಬೃಹತ್ ಮೆರವಣಿಗೆ".

ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಮಂಜೇಶ್ವರ, ಕುಂಬಳೆ, ಬದಿಯಡ್ಕ ವಲಯ ಸಮಿತಿಗಳ ಜಂಟಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ, "ರಾಷ್ಟೀಯ ಕಾರ್ಮಿಕ ದಿನ" ದ ಅಂಗವಾಗಿ ಕುಂಬಳೆಯಲ್ಲಿ "ಕಾರ್ಮಿಕರ ಬೃಹತ್ ಮೆರವಣಿಗೆ".
ಮಂಜೇಶ್ವರ: ಭಾರತೀಯ ಮಜ್ಡೂರ್ ಸಂಘ ಮಂಜೇಶ್ವರ, ಕುಂಬಳೆ, ಬದಿಯಡ್ಕ, ವಲಯ ಸಮಿತಿಗಳ ನೇತ್ರತ್ವದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ "ರಾಷ್ಟೀಯ ಕಾರ್ಮಿಕ ದಿನ" ವನ್ನು ಕುಂಬಳೆಯಲ್ಲಿ
ಕಾರ್ಮಿಕರ ಬೃಹತ್ ಮೆರವಣಿಗೆಯೊಂದಿಗೆ ನಡೆಸಲಾಯಿತು.
ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿ.ಎಂ.ಎಸ್ ರಾಜ್ಯ ಕಾರ್ಯದರ್ಶಿ ನ್ಯಾ. ಪಿ. ಮುರಳೀಧರನ್ ಕೊಝಿಕ್ಕೋಡ್ ರವರು ಉದ್ಘಾಟಿಸಿದರು.
ವಿಶ್ವಕರ್ಮ ಜಯಂತಿ ದಿನ ರಾಷ್ಟೀಯ ಕಾರ್ಮಿಕ ದಿನವನ್ನಾಗಿ ಆಚರಿಸುವ ಉದ್ಧೇಶದ ಬಗ್ಗೆ ಸವಿವರವಾಗಿ ವಿವರಿಸಿದರು. ಭಾರತದ ಮೊತ್ತ ಮೊದಲ ಶಿಲ್ಪಿ ಎಂದೇ ಕರೆಯಲ್ಪಡುವ ವಿಶ್ವಕರ್ಮ ದೇವರ ಜಯಂತಿ ಉತ್ಸವನ್ನೇ ಕಾರ್ಮಿಕ ದಿನವನ್ನಾಗಿ ಘೋಷಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. ಪರಂಪರಾಗತಾ ಕೆಲಸವನ್ನು ಮಾಡುವ ಕಾರ್ಮಿಕರನ್ನು ಮೂಲೆಗುಂಪಾಗಿ ಮಾಡುತ್ತಿರುವ ಈ ಸಮಯದಲ್ಲಿ ಕೇಂದ್ರ ಸರಕಾರವು ವಿಶ್ವಕರ್ಮ ಯೋಜನೆಯೊಂದಿಗೆ ಈ ವಿಭಾಗದ ಕಾರ್ಮಿಕರ ಉನ್ನತಿಗೆ ಬೇಕಾಗಿ ಶ್ರಮಿಸುತ್ತಿರುವ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿ, ಅದೇ ರೀತಿ ಕಾರ್ಮಿಕರ ಯಾವುದೇ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಕೊಳ್ಳೆ ಹೊಡೆಯುತ್ತಿರುವ ಕೇರಳ ಸರಕಾರದ ಹಗರಣವನ್ನು ಒಂದೊಂದಾಗಿ ವಿವರಿಸುತ್ತಾ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಮಡಿಕೈ, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಶುಭಾಶಂಸನೆಗೈ ದರು. ಜಿಲ್ಲಾ ಕೋಶಾಧಿಕಾರಿ ಅನಿಲ್ ಬಿ. ನಾಯರ್, ಅಂಗನವಾಡಿ ವರ್ಕರ್ಸ್ ಮತ್ತು ಹೆಲ್ಪರ್ಸ್ ಸಂಘ ಜಿಲ್ಲಾ ಕಾರ್ಯದರ್ಶಿ ಶೋಭಾ ನಾಯ್ಕಪ್, ಬಿ.ಎಂ.ಎಸ್ ಮಂಜೇಶ್ವರ ವಲಯ ಅಧ್ಯಕ್ಷರಾದ ರವಿ ಎಂ.ಕೆ ಮಿತ್ತ ಕೊಲ್ಯೂರ್, ಕುಂಬಳೆ ವಲಯ ಅಧ್ಯಕ್ಷ ವೇಣುಗೋಪಾಲ್ ಮುಗು, ಬದಿಯಡ್ಕ ವಲಯ ಅಧ್ಯಕ್ಷ ಶಿವರಾಮ ಪೆರ್ಲ, ಬದಿಯಡ್ಕ ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ವಾಣಿನಗರ, ಕುಂಬಳೆ ವಲಯ ಕಾರ್ಯದರ್ಶಿ ಶಶಿಧರ ಕುಂಟಗೇರಡ್ಕ, ಪುತ್ತಿಗೆ ಪಂಚಾಯತ್ ಸದಸ್ಯ ಜನಾರ್ದನ ಕಣ್ಣೂರ್, ಮೊದಲಾದವರು ಉಪಸ್ಥಿತರಿದ್ದರು. ರವಿ ಅನಂತಪುರ ಕಾರ್ಯಕ್ರಮ ನಿರೂಪಿಸಿದರು, ವೇಣುಗೋಪಾಲ್ ಮುಗು ಸ್ವಾಗತಿಸಿ, ಶಿವರಾಮ ಪೆರ್ಲ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.