ಕ್ರೀಡೆಗಳು ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ: ಸುನಿತಾ ಟೀಚರ್.
ಸೆಪ್ಟೆಂಬರ್ 26, 2023
0
ಕ್ರೀಡೆಗಳು ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ: ಸುನಿತಾ ಟೀಚರ್.
ಮಂಜೇಶ್ವರ: ಸರಕಾರಿ ಪ್ರೌಢ ಶಾಲೆ ಕಡಂಬಾರ್ ನಲ್ಲಿ 2023 - 2024 ನೇ ಶೈಕ್ಷಣಿಕ ವರ್ಷದ L.P, UP, H.S ವಿಭಾಗದ ಕ್ರೀಡಾ ಕೂಟ ನಡೆಯಿತು. ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನಿತಾ ಟೀಚರ್ ರವರು "ಕ್ರೀಡೆಗಳು ವಿದ್ಯಾರ್ಥಿಗಳ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಾಯಕಾರಿಯಾಗಿದೆ" ಎಂದು ತಿಳಿಸಿದರು. ಶಾಲಾ ಪಿ.ಟಿ.ಎ ಅಧ್ಯಕ್ಷರಾದ ಫಾರೂಕ್ ರವರು ಹೋನರ್ ಓಫ್ ಗಾರ್ಡ್ ಸ್ಟಿಕರಿಸಿದರು. ಶಾಲಾ S.M.C ಚೆಯರ್ಮ್ಯಾನ್ ಮೊಯ್ದಿನ್ ಕುಂಞ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಅದ್ಯಾಪಿಕೆಯಾದ ಕನಕ ಟೀಚರ್, ವಿಜಯಲಕ್ಷ್ಮಿ ಟೀಚರ್, ನಾಗರಾಜ ಮಾಸ್ಟರ್, ಸಹನಾಜ್ ಟೀಚರ್ ಶುಭ ಹಾರೈಸಿದರು. ಹೈಸ್ಕೂಲ್ ವಿಭಾಗದ S.R.G ಕನ್ಟಿನರ್ ಮಮತ ಟೀಚರ್ ಸತ್ಯ ಪ್ರತಿಜ್ಞೆ ಹೇಳಿಕೊಟ್ಟರು. ಪ್ರತಿಯೊಂದು ಗುಂಪಿನ ವಿದ್ಯಾರ್ಥಿಗಳ ಮಾರ್ಚ್ ಪಾಸ್ಟ್ ಬಂದಂತಹ ರಕ್ಷಕರಿಗೆ, ವಿದ್ಯಾಭಿಮಾನಿಗಳಿಗೆ ಮನರಂಜನೆಯನ್ನು ನೀಡಿತು. ಶಾಲಾ ಸ್ಟಾಫ್ ಸೆಕ್ರೆಟರಿ ಅಬೂಬಕರ್ ಸ್ವಾಗತಿಸಿ, ಸ್ಟೋರ್ಟ್ ಕನ್ವೀನರ್ ರಾಜೇಶ್ ಕೊಡ್ಲಮೊಗರು ಧನ್ಯವಾದವಿತ್ತರು. ಸವಿತಾ, ಝವುರ, ಅಪ್ಸತ್, ನಿರಂಜನ್, ಸುಕನ್ಯ, ಶ್ರೀಕಲ, ಶ್ರುತಿ, ಅನೀಸ, ಗೋಪಿ, ವಿಜಯ ಕುಮಾರ್, ಅಹಮ್ಮದ್ ಅಲಿ, ಸಿಂಧೂರ, ಹಾಜಿರ, ಚಂದ್ರಾವತಿ, ಅಪರ್ಣ, ಅನೂಪ್, ರೀಜ, ನಿಶ, ಸುನಿತ, ಜೋಷಿ, ಗೀತ, ರಮ್ಲ, ಸತೀಶ್, ಪ್ರಜ್ಞ, ಮುಫೀದ, ಝಬನಾ ಬಾನು, ಕಲಾ ಬಾಲನ್, ಭವ್ಯ ಮೊದಲಾದ ಅಧ್ಯಾಪಕ, ಅಧ್ಯಾಪಿಕೆಯರು ಸಹಕರಿಸಿದರು. ನಯನ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.


