ಶ್ರೀಮತ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಮಂಗಳೂರಿನ ಖ್ಯಾತ ಕನ್ನಡಕ ವಿತರಕರಾದ ನಾಯಕ್ ಆಪ್ಟಿಕಲ್ಸ್ ಇವರ ಸಹಕಾರದೊಂದಿಗೆ "ಉಚಿತ ಕಣ್ಣಿನ ಪರೀಕ್ಷಾ ಶಿಬಿರ".
ಸೆಪ್ಟೆಂಬರ್ 11, 2023
0
ಶ್ರೀಮತ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಮಂಗಳೂರಿನ ಖ್ಯಾತ ಕನ್ನಡಕ ವಿತರಕರಾದ ನಾಯಕ್ ಆಪ್ಟಿಕಲ್ಸ್ ಇವರ ಸಹಕಾರದೊಂದಿಗೆ "ಉಚಿತ ಕಣ್ಣಿನ ಪರೀಕ್ಷಾ ಶಿಬಿರ".
ಮಂಜೇಶ್ವರ: ಶ್ರೀಮತ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಂಘ ಮಂಜೇಶ್ವರ ಇವರ ಆಶ್ರಯದಲ್ಲಿ ಮಂಗಳೂರಿನ ಖ್ಯಾತ ಕನ್ನಡಕ ಇತರಕರಾದ ನಾಯಕ್ ಆಪ್ಟಿಕಲ್ಸ್ ಇವರ ಸಹಕಾರದೊಂದಿಗೆ ಉಚಿತ ಕಣ್ಣಿನ ಪರೀಕ್ಷಾ ಶಿಬಿರವು ಶ್ರೀ ವಿಭುದೇಂದ್ರ ಕಲಾಮಂಟಪ ದಲ್ಲಿ ನಡೆಯಿತು. ದೇವಸ್ಥಾನದ ಅಧ್ಯಕ್ಷರಾದ ಗಣಪತಿ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು ಈ ವೇಳೆ ಪದಾಧಿಕಾರಿಗಳಾದ ನಿತಿನ್ ಚಂದ್ರ ಪೈ, ಪ್ರಶಾಂತ ಪೈ, ರಾಜೇಶ್ ಪೈ, ಜಿ.ಎಸ್. ಬಿ ಸಂಘದ ಅಧ್ಯಕ್ಷ ಪ್ರಸಾದ್ ಪ್ರಭು, ದೇವದಾಸ್ ವಿ. ಪ್ರಭು, ರಾಹುಲ್ ಕಾಮತ್, ಅನಂತ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. ಉಚಿತ ಕಣ್ಣಿನ ಪರೀಕ್ಷಾ ಶಿಬಿರದಲ್ಲಿ ಸುಮಾರು 225 ಜನರು ಭಾಗವಹಿಸಿದ್ದು, 150 ಕ್ಕೂ ಅಧಿಕ ಮಂದಿಗೆ ಉಚಿತ ಕನ್ನಡಗಳನ್ನು ವಿತರಿಸಲಾಯಿತು. ಮತ್ತು 30 ಮಂದಿಗೆ ಕೆ. ಎಂ. ಸಿ ಅತ್ತಾವರ ಆಸ್ಪತ್ರೆಯಲ್ಲಿ ಕಣ್ಣಿನ ಸರ್ಜರಿಗೆ ಉಚಿತ ಕಾರ್ಡುಗಳನ್ನು ನೀಡಲಾಯಿತು. ಶಿಬಿರದಲ್ಲಿ ಭಾಗವಹಿಸಿದವರಿಗೆ ಜಿ.ಎಸ್.
ಬಿ ಸಂಘದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು. ಪುಂಡಲಿಕ ಮಾಸ್ಟರ್ ಧನ್ಯವಾದ ಸಮರ್ಪಿಸಿದರು.




