Breaking Posts

6/trending/recent
Type Here to Get Search Results !

8:10:45

ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ 12 ನೇ ವರ್ಷದ "ಹೊಸಂಗಡಿ ಮೊಸರು ಕುಡಿಕೆ ಉತ್ಸವ".

ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ 12 ನೇ ವರ್ಷದ "ಹೊಸಂಗಡಿ ಮೊಸರು ಕುಡಿಕೆ ಉತ್ಸವ".
ಹೊಸಂಗಡಿ: ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ (ರಿ.) ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 12ನೇ ವರ್ಷದ ಹೊಸಂಗಡಿ ಮೊಸರು ಕುಡಿಕೆ ಉತ್ಸವವು ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಕ್ಷೇತ್ರದಲ್ಲಿ ಜರುಗಿತ್ತು. ಬೆಳಗ್ಗೆ ಅಯ್ಯಪ್ಪ ಸ್ವಾಮಿಗೆ ಸೀಯಾಳ ಅಭಿಷೇಕ ಕಣ ಹೋಮ ಕ್ಷೇತ್ರದ ಗುರುಸ್ವಾಮಿಗಳಾದ ಶ್ರೀ ಉದಯ ಪಾವಳ ಇವರಿಂದ ದೀಪ ಪ್ರಜ್ವಲನೆ, ವಿವಿಧ ಆಟೋಟ ಸ್ಪರ್ಧೆಗಳಿಗೆ ಮನೋಹರ್ ಬಿ ಎಂ ರಿಂದ ಉದ್ಘಾಟನೆ,
ಮಧ್ಯಾಹ್ನ ಅನ್ನ ಸಂತರ್ಪಣೆ, ಮಹಿಳೆಯರಿಗಾಗಿ ಹೂವಿನಲ್ಲಿ ರಂಗೋಲಿ ಸ್ಪರ್ಧೆ ಮದರಂಗಿ ಸ್ಪರ್ಧೆ,
ಮಕ್ಕಳಿಗಾಗಿ ಕಂದಕೃಷ್ಣ ಮುದ್ದುಕೃಷ್ಣ ಬಾಲಕೃಷ್ಣ ಎಂಬ ಕೃಷ್ಣವೇಷ ಸ್ಪರ್ಧೆ, ರಾಧಾಕೃಷ್ಣ ಸ್ಪರ್ಧೆ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ ಅಧ್ಯಕ್ಷತೆ ವಹಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ಪಜ್ವ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪಾಕಶಾಸ್ತ್ರಜ್ಞರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ಭಟ್ ಎಂಡ್ ಭಟ್ ಸುದರ್ಶನ್ ಭಟ್ ಬೆದ್ರಾಡಿ ಮತ್ತು ಮನೋಹರ್ ಭಟ್ ಬೆದ್ರಾಡಿ, ಕನಿಲ ಶ್ರೀ ಭಗವತಿ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕೃಷ್ಣ ಜಿ ಮಂಜೇಶ್ವರ, ಕ್ಷೇತ್ರದ ಗುರುಸ್ವಾಮಿಗಳಾದ ಉದಯ ಪಾವಳ, ಸಂಸ್ಥೆಯ ಗೌರವಧ್ಯಕ್ಷರಾದ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಅಧ್ಯಕ್ಷರಾದ ಸಂದೀಪ್ ಶಾಂತಿನಗರ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ವೇಳೆ ಆರ್ಥಿಕವಾಗಿ ಆಸಕ್ತರಾದ ಕುಟುಂಬಗಳಿಗೆ ಕಿಟ್ ವಿತರಣೆ, ಹಾಗೂ ವಿದ್ಯಾರ್ಥಿಗಳಿಗೆ "ದಿವ್ಯಜೋತಿ" ಪ್ರೋತ್ಸಾಹ ಧನ ಸಹಾಯ ವಿತರಣೆ, ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಸಂಸ್ಥೆಯ ಪದಾಧಿಕಾರಿಗಳಾದ ನಿಶಾಂತ್ ಪೆಲಪ್ಪಾಡಿ ಸ್ವಾಗತಿಸಿ, ಸುಶಾಂತ್ ಎಸ್.ಜಿ ಚೇತನ್ ನಗರ ವಂದಿಸಿದರು. ದಿವಾಕರ ಪ್ರತಾಪನಗರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಿಂದ ಹೊಸಂಗಡಿ ವರೆಗೆ ಬೀದಿ ಮೊಸರು ಕುಡಿಕೆ ಉತ್ಸವ, ರಾತ್ರಿ ಭಜನಾ ಮಂಗಳಾಚರಣೆ,
ಶ್ರೀ ಕೃಷ್ಣ ದೇವರಿಗೆ ಆರ್ಘ್ಯ ಪ್ರಧಾನ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.ಸ್ನೇಹ ಸಂಗಮ ಬೆಜ್ಜ 18 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದಂಗವಾಗಿ ವಿವಿಧ ಸ್ಪರ್ಧೆಗಳು ಮತ್ತು ನೇತ್ರ ತಪಾಸಣಾ ಶಿಬಿರ.
ಮಂಜೇಶ್ವರ: ಸ್ನೇಹ ಸಂಗಮ ಬೆಜ್ಜ ಇದರ 18ನೇ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಕಾರ್ಯಕ್ರಮಗಳು ಬೆಜ್ಜ ಕಮ್ಯುನಿಟಿ ಹಾಲ್ ಪರಿಸರದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಮಂಗಳೂರಿನ ಪ್ರಸಿದ್ಧ ವೈದ್ಯಕೀಯ ಸಂಸ್ಥೆಗಳಾದ ಏನಪೋಯ ವೈದ್ಯಕೀಯ ಕಾಲೇಜು ಹಾಗು ಪ್ರಸಾದ್ ನೇತ್ರಾಲಯಗಳ ವತಿಯಿಂದ ಉಚಿತ ಸಾಮಾನ್ಯ ಪರೀಕ್ಷೆ ಹಾಗು ನೇತ್ರ ತಪಾಸಣೆಗಳು ನಡೆದವು. ಉತ್ಸವದ ಅಂಗವಾಗಿ ಭಗವದ್ಗೀತಾ ಕಂಠಪಾಠ ಹಾಗೂ ಮುದ್ದುಕೃಷ್ಣ ವೇಷ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು. ಅತಿಥಿಗಳಾಗಿ ಮುಂಬೈ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರು, ಮಜಿಬೈಲು ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಉದಯ ಶೆಟ್ಟಿ ಕರಿಬೈಲು, ವಿಠ್ಠಲ ಶೆಟ್ಟಿ ಮಾಗಂದಡಿ, ಉದ್ಯಮಿ ಮೋಹನ್ ಹೆಗ್ಡೆ ಬೆಜ್ಜ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಕಿಶನ್ ಹೆಗ್ಡೆ ಬೆಜ್ಜ ಸ್ವಾಗತಿಸಿ, ದೇವಿಪ್ರಸಾದ್ ಶೆಟ್ಟಿ ಬೆಜ್ಜ ನಿರೂಪಿಸಿದರು. ಶಿಬಿರದಲ್ಲಿ ಆಯ್ಕೆಯಾದ ಸುಮಾರು 85 ರಷ್ಟು ಮಂದಿಗೆ ಉಚಿತ ಕನ್ನಡಕಗಳ ವಿತರಣೆ ಅಕ್ಟೋಬರ್ 1ರಂದು ಬೆಜ್ಜ ಶ್ರೀ ಧೂಮಾವತೀ ಬಂಟ ದೈವಗಳ ಕ್ಷೇತ್ರದಲ್ಲಿ ನಡೆಯಲಿದೆ. ಧರ್ಮ ಸಾಮಾರಸ್ಯದ ಸಂದೇಶದೊಂದಿಗೆ ಅಜ್ಜಿಮೂಲೆಯಲ್ಲಿ 33ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ.
ಕುಂಬ್ಡಾಜೆ: ಧಾರ್ಮಿಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಸನಾತನೀಯ ಹಿಂದೂ ಧರ್ಮದ ಆಚರಣೆಯಾಗಿದ್ದರೂ ಏತಡ್ಕ ಸಮೀಪದ ವರುಂಬುಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಈ ಅಚರಣೆಯನ್ನು ಹಿಂದು ಮುಸ್ಲಿಂ ಕ್ರೈಸ್ತ ಬಾಂಧವರೆಲ್ಲಾ ಒಗ್ಗೂಡಿ ಧರ್ಮ ಸಾಮಾರಸ್ಯದ ಸಂದೇಶದೊಂದಿಗೆ ಆಚರಿಸುತ್ತಿರುವುದು ವಿಶೇಷತೆಯಾಗಿದೆ. ಇಲ್ಲಿನ ಅಜ್ಜಿಮೂಲೆಯ ಜೈಗುರುದೇವ್ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ಬಿನ ನೇತೃತ್ವದಲ್ಲಿ ಕಳೆದ 33 ವರ್ಷಗಳಿಂದ ಯಶಸ್ವಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಕೇವಲ ಹಿಂದು ಧರ್ಮದವರು ಮಾತ್ರವಲ್ಲದೆ ಕ್ರೈಸ್ತರು ,ಮುಸ್ಲಿಂ ಬಾಂಧವರು ವಿವಿಧ ಸ್ಪರ್ಧೆ ಹಾಗೂ ಧಾರ್ಮಿಕ ಸಭೆಯಲ್ಲಿ ಸಕ್ರಿಯವಾಗಿರುವುದು ಈ ನಾಡಿನ ಸೌಹರ್ದತೆಯ ಪ್ರತೀಕವಾಗಿದೆ. ವರ್ಷಂಪ್ರತಿಯಂತೆ ಈ ಬಾರಿಯೂ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಚುಟುಕು ಸಾಹಿತಿ ನರಸಿಂಹ ಭಟ್ ಕಟ್ಟದಮೂಲೆ ಉದ್ಘಾಟಿಸಿದರು. ಬಳಿಕ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷ್ಣ ಭಟ್ ಅಜ್ಜಿಮೂಲೆ ಅಧ್ಯಕ್ಷತೆವಹಿಸುವರು. ಡಾ.ಶ್ರಿನಿಧಿ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕುಂಬ್ಡಾಜೆ ಗ್ರಾ.ಪಂ.ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ಬದಿಯಡ್ಕ ಗ್ರಾ.ಪಂ.ಸದಸ್ಯ ಹಮೀದ್ ಪಳ್ಳತ್ತಡ್ಕ, ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಕೃಷ್ಣಶರ್ಮ ಜಿ, ಕೃಷಿ ಕ್ಷೇಮ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ನಂಬ್ಯಾರ್,ನರಸಿಂಹ ಭಟ್, ಚಂದ್ರಶೇಖರ ಮಾಸ್ತರ್ , ಮಂಜುನಾಥ ಮಾಸ್ತರ್ ಮೊದಲಾದವರು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಅಜ್ಜಿಮೂಲೆ ಪ್ರದೇಶದ ರಸ್ತೆ ಅಭಿವೃದ್ಧಿ ,ಸೇತುವೆ ನಿರ್ಮಾಣ ಮೊದಲಾದ ನಾಡಿನ ಪ್ರಗತಿಯ ಕೆಲಸ ಕಾರ್ಯಕ್ಕಾಗಿ ಶ್ರಮಿಸುತ್ತಿರುವ ಜೋನಿ ಕ್ರಾಸ್ತಾ ವರುಂಬೋಡಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೇಷ್ಮಾ ಹಾಗೂ ಅಕ್ಷತಾ ಪ್ರಾರ್ಥನೆಗೈದರು.ಜೋನಿ ಕ್ರಾಸ್ತಾ ಸ್ವಾಗತಿಸಿ ರಾಜೇಶ್ ಅಜ್ಜಿಮೂಲೆ ವಂದಿಸಿದರು.ಜಯ ಮಣಿಯಂಪಾರೆ ನಿರೂಪಿಸಿದರು. ರಾತ್ರೆ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ - ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಐಲ ಮೈದಾನ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ 30 ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಐಲ ಮೈದಾನದಲ್ಲಿ ನಡೆಯಿತು. ಬೆಳಗ್ಗೆ ಐಲ ಕ್ಷೇತ್ರದಲ್ಲಿ ಪ್ರಾರ್ಥನೆ, ಪುಟಾಣಿಗಳಿಂದ ದೀಪ ಪ್ರಜ್ವಲನೆ, ಬಳಿಕ ಕುಡಿಕೆ ಮರ ಏರುವುದು, ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ ಮಧ್ಯಾಹ್ನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಕುಡಿಕೆ ಮರ ಹತ್ತುವ ಸ್ಪರ್ಧೆಯಲ್ಲಿ ಶ್ರೀ ಭಗವತೀ ಮೆಣಸಿನಪಾರೆ ನೀರ್ಚಾಲು ವಿಜೇತರಾದರು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಶಿವರಾಮ ಪಕಳ ಅಧ್ಯಕ್ಷತೆ ವಹಿಸಿದರು ಡಾಕ್ಟರ್ ಪ್ರವೀಣ್ ಕುಮಾರ್, ಶ್ರೀಮತಿ ಪದ್ಮಾವತಿ ಟೀಚರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಈ ವೇಳೆ ಸ್ಥಳೀಯ ಹಿರಿಯರಾದ ನಿವೃತ್ತ ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದ ಸಿಬ್ಬಂದಿ ನಾರಾಯಣ ಸಾಲಿಯಾನ್,
ಶ್ರೀಮತಿ ಕಲ್ಯಾಣಿ ಐಲ, ಶ್ರೀಮತಿ ಗಿರಿಜಾ ಕಲ್ಲುಹಿತ್ತಿಲು ಇವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.