ಶಾಲಾ ಅಡುಗೆ ಕಾರ್ಮಿಕರ ಬಾಕಿ ವೇತನ ಮತ್ತು ಉತ್ಸವ ಭತ್ಯೆ ಮಂಜೂರು ಮಾಡಿ. - ಎ.ಐ.ಟಿ.ಯು.ಸಿ.
ಸೆಪ್ಟೆಂಬರ್ 03, 2023
0
ಶಾಲಾ ಅಡುಗೆ ಕಾರ್ಮಿಕರ ಬಾಕಿ ವೇತನ ಮತ್ತು ಉತ್ಸವ ಭತ್ಯೆ ಮಂಜೂರು ಮಾಡಿ. - ಎ.ಐ.ಟಿ.ಯು.ಸಿ.
ಹೊಸಂಗಡಿ: ಶಾಲಾ ಅಡುಗೆ ಕಾರ್ಮಿಕರ ಬಾಕಿ ವೇತನ ಮತ್ತು ಉತ್ಸವ ಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಶಾಲಾ ಅಡುಗೆ ಕಾರ್ಮಿಕರ ಯೂನಿಯನ್(A.I.T.U.C) ಮಂಜೇಶ್ವರ ಉಪ ಜಿಲ್ಲಾ ಸಮಾವೇಶ ಒತ್ತಾಯಿಸಿದೆ. A.I.T.U.C ಜಿಲ್ಲಾ ಖಜಾಂಚಿ ಬಿ.ವಿ.ರಾಜನ್ ಸಮಾವೇಶ ಉದ್ಘಾಟಿಸಿದರು. ಯೂನಿಯನ್ ಉಪಜಿಲ್ಲಾ ಅಧ್ಯಕ್ಷ ದಯಾಕರ ಮಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮುಖೇಶ್ ಬಾಲಕೃಷ್ಣನ್, ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ್ ಬಲ್ಲಂಗುಡೇಲ್, ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಎಂ.ಕುಂಞಿ ಕಣ್ಣನ್ ನಾಯರ್, ಪ್ರೇಮಾ ನವೀನ್, ಗೋಪಾಲಕೃಷ್ಣನ್ ಟಿ. ಮೊದಲಾದವರು ಮಾತನಾಡಿದರು. ಯೂನಿಯನ್ ಉಪ ಜಿಲ್ಲಾ ಕಾರ್ಯದರ್ಶಿ ಶೈಲಜಾ ಶೆಟ್ಟಿ ಸ್ವಾಗತಿಸಿದರು.

