ಸರ್ದಾರ್ ಪಟೇಲ್ ಸಾಂಸ್ಕೃತಿಕ ಸಂಘದ ವತಿಯಿಂದ ಎರಡನೇ ವರ್ಷದ ಸಂಭ್ರಮದ ರಕ್ಷಾ ಬಂಧನ ಆಚರಣೆ.
ಸೆಪ್ಟೆಂಬರ್ 01, 2023
0
ಸರ್ದಾರ್ ಪಟೇಲ್ ಸಾಂಸ್ಕೃತಿಕ ಸಂಘದ ವತಿಯಿಂದ ಎರಡನೇ ವರ್ಷದ ಸಂಭ್ರಮದ ರಕ್ಷಾ ಬಂಧನ ಆಚರಣೆ.
ಕುಂಬಳೆ: ಭಾರತದ ಸಂವಿಧಾನದ ಆಶಯಗಳು ಮತ್ತು ಸನಾತನ ಧರ್ಮದ ವಿವಿಧ ಮೌಲ್ಯಗಳ ರಕ್ಷಣೆಗೋಸ್ಕರ ಹಾಗೂ ಸಾಮಾಜಿಕ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿರುವ ಕಾಸರಗೋಡಿನ ಸಮಾನ ಮನಸ್ಕರಾ ಸಂಘಟನೆಯಾದ ಸರ್ದಾರ್ ಪಟೇಲ್ ಸಾಂಸ್ಕೃತಿಕ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಕುಂಬಳೆ ಗ್ರಾಮ ಪಂಚಾಯತಿನ ಕುಂಟೆಗರಡ್ಕದಲ್ಲಿರುವ ಕುಪ್ಪೆ ಪಂಜುರ್ಲಿ ದೈವ ಕ್ಷೇತ್ರದ ಸಮೀಪದಲ್ಲಿರುವ ರಾಜೀವ ಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ರಕ್ಷಾಬಂಧನದ ಸಂದೇಶವನ್ನು ಪ್ರೊಫೆಸರ್ ಶ್ರೀನಾಥ್ ರವರು ಸಾರಿದರು. ಅವರು ಮಾತನಾಡಿ ಪುರಾಣಗಳಲ್ಲಿ, ಇತಿಹಾಸದಲ್ಲಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಕ್ಷಾಬಂಧನದ ಮಹತ್ವ ಮತ್ತು ಭಾರತೀಯ ಸಂಸ್ಕೃತಿಯ ಜೊತೆಗೆ ಭಾವೈಕ್ಯತೆಯ ರಕ್ಷಣೆ ಆಗಬೇಕು. ಎಂಬುದನ್ನು ಒತ್ತು ನೀಡಲು ಮನವರಿಕೆ ಮಾಡಿದರು, ಮುಖ್ಯ ಭಾಷಣಗಾರರಾಗಿ ಬಂದಿದ್ದ ಎಣ್ಮಕಜೆ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಸಾಮಾಜಿಕ ಧಾರ್ಮಿಕ ಮುಂದಾಳು ಸೋಮಶೇಖರ್ ಜೆ.ಎಸ್ ರವರು ಮಾತನಾಡಿ, ನಮ್ಮ ದೇಶವನ್ನು ಕಾಡುತ್ತಿರುವ ಜನಾಂಗವಾದ ಕೋಮುವಾದ ಮತ್ತು ಭಯೋತ್ಪಾದನೆಯಿಂದ ರಕ್ಷಿಸಲು ನಾವೆಲ್ಲರೂ ಪಣತೊಡಬೇಕೆಂದು ಸಾಂಸ್ಕೃತಿಕ ಸಂಘದ ಕಾರ್ಯಕ್ರಮದಲ್ಲಿ ಸೇರಿದ ಜನರಲ್ಲಿ ಆಗ್ರಹಿಸಿದರು. ಪರಿಸರದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹೋದರ - ಸಹೋದರಿಯ ಭಾವೈಕ್ಯದ ರಕ್ಷೆಯನ್ನು ಕಟ್ಟಿ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಪ್ರಭು ಕುಂಬಳೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಧಾರ್ಮಿಕ ಮುಖಂಡರುಗಳಾದ ಲೋಕನಾಥ್ ಶೆಟ್ಟಿ ಉಜಾರು, ರವಿ ಪೂಜಾರಿ ಕೋಟೆಕಾರು, ಚಂದ್ರ ಕಾಜೂರು, ಮೋಹನ್ ರೈ ಪೈವಳಿಕೆ, ಕೇಶವ ಪುತ್ತಿಗೆ, ರವಿರಾಜ್ ಕುಂಟೆಂಗೆರಡ್ಕ ಭಾಗವಹಿಸಿ ರಕ್ಷಾಬಂಧನದ ಸಂದೇಶವನ್ನು ನೀಡಿದರು. ದಿಲೀಪ್ ರಾಜ ಪೂಜಾರಿ, ದಯಾನಂದ ಬಾಡೂರು, ಬಾಲಕೃಷ್ಣ ಬಾಡೂರು ವಂದೇ ಮಾತರಂ ಹಾಡಿ, ಸ್ವಾಗತಿಸಿ, ಪೃಥ್ವಿರಾಜ್ ಶೆಟ್ಟಿ ಸರ್ದಾರ್ ಪಟೇಲ್ ಸಾಂಸ್ಕೃತಿಕ ಸಂಘದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು, ಮನುರಾಜ್, ಅನೀಶ್, ಪ್ರಮೋದ್ ರಾಜ್, ರಾಜೇಶ್ ಮುಂತಾದವರು ಸಹಕರಿಸಿದರು ದಯಾನಂದ ಬಾಡೂರು ಅವರು ಧನ್ಯವಾದವಿತ್ತರು.



