Breaking Posts

6/trending/recent
Type Here to Get Search Results !

8:10:45

ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ನಲುವತ್ತು ಬಿಲ್ಲಿಯ ಹಿರಿಯ ಸದಸ್ಯರೂ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಮಜಿಬೈಲ್ ಮೇಗಿನಮನೆ ನಾರಾಯಣ ಬೆಲ್ಚಾಡ (94) ನಿಧನ.

ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ನಲುವತ್ತು ಬಿಲ್ಲಿಯ ಹಿರಿಯ ಸದಸ್ಯರೂ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಮಜಿಬೈಲ್ ಮೇಗಿನಮನೆ ನಾರಾಯಣ ಬೆಲ್ಚಾಡ (94) ನಿಧನ.
ಮಂಜೇಶ್ವರ: ಮಜಿಬೈಲ್ ಬಳಿಯ ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ನಲುವತ್ತು ಬಿಲ್ಲಿಯ ಹಿರಿಯ ಸದಸ್ಯರೂ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಮಜಿಬೈಲ್ ಮೇಗಿನಮನೆ ನಿವಾಸಿ ನಾರಾಯಣ ಬೆಲ್ಚಾಡ (94) ವಯೋಸಹಜ ಅಸೌಖ್ಯದಿಂದ ಇಂದು ಸಂಜೆ ಸ್ವ - ಗೃಹದಲ್ಲಿ ನಿಧನರಾದರು. ದಿ. ಕುಞಿಪ್ಪ - ದಿ. ಪುತ್ತಮ್ಮ ದಂಪತಿಯ ಪುತ್ರರಾಗಿರುವ ನಾರಾಯಣ ಬೆಲ್ಚಾಡರು ಮಕ್ಕಳಾದ: ವಿಜಯಕುಮಾರ್, ಶರ್ಮಿಳಾ, ದಾಕ್ಷಾಯಿಣಿ, ಉದಯಕುಮಾರ್, ಕೃಷ್ಣಕುಮಾರ್, ಅಳಿಯಂದಿರಾದ: ವಸಂತ ಮುಟ್ಟಂ, ಪುಷ್ಪರಾಜ್ ಕೆ. ಐಲ್, ಸೊಸೆಯಂದಿರಾದ ಮೀನಾಕ್ಷಿ, ಪ್ರಿಯ, ವೈಶಿಕ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ಪತ್ನಿ ಶಶಿಪ್ರಭಾ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಕ್ಷೇತ್ರದ ಪ್ರತಿಯೊಂದು ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಹಿರಿಯ ವ್ಯಕ್ತಿತ್ವದವರಾಗಿದ್ದು, ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ 10 ಗಂಟೆಗೆ ಮನೆ ಪರಿಸರದಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಶ್ರೀ ಪಾಡಾಂಗರೆ ಭಗವತೀ ಸೇವಾ ಸಮಿತಿ , ಶ್ರೀ ಭಗವತೀ ತೀಯಾ ಸೇವಾ ಸಮಿತಿ, ಶ್ರೀ ಭಗವತೀ ಮಹಿಳಾ ಸಂಘ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.