Breaking Posts

6/trending/recent
Type Here to Get Search Results !

8:10:45

ಕನಿಲ ಫ್ರೆಂಡ್ಸ್ ಕ್ಲಬ್ (ರಿ.) ಕನಿಲ ಆಶ್ರಯದಲ್ಲಿ "ಉಚಿತ ಹೃದಯ ತಪಾಸಣಾ ಶಿಬಿರ" ಹಾಗೂ ಬೃಹತ್ ರಕ್ತದಾನ ಶಿಬಿರ.

ಕನಿಲ ಫ್ರೆಂಡ್ಸ್ ಕ್ಲಬ್ (ರಿ.) ಕನಿಲ ಆಶ್ರಯದಲ್ಲಿ "ಉಚಿತ ಹೃದಯ ತಪಾಸಣಾ ಶಿಬಿರ" ಹಾಗೂ ಬೃಹತ್ ರಕ್ತದಾನ ಶಿಬಿರ.
ಮಂಜೇಶ್ವರ: ಕನಿಲ ಫ್ರೆಂಡ್ಸ್ ಕ್ಲಬ್ (ರಿ.) ಕನಿಲ ಇದರ ವತಿಯಿಂದ ಉಚಿತ ಹೃದಯ ತಪಾಸನೆ ಶಿಬಿರ ಹಾಗೂ ಶರತ್ ಕುಮಾರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಕನಿಲ ಶ್ರೀ ಭಗವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ತಿಂಗಳ 6 ರಂದು ಭಾನುವಾರ ಬೆಳಗ್ಗೆ 9 ರಿಂದ ನಡೆಯಲಿದೆ. ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ ಹಾಗೂ ಬ್ಲಡ್ ಡಾನ್ಸರ್ ಮಂಗಳೂರು ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಹೃದಯ ತಪಾಸಣೆ ಶಿಬಿರದಲ್ಲಿ ಇಕೋ ಕಾರ್ಡಿಯಂ ಸ್ಕ್ಯಾನ್ ಹಾಗೂ ಇನ್ನಿತ್ತರ ತಪಾಸಣೆ ಸೇವೆ ಲಭ್ಯವಿದೆ. ಒಂದು ಕಾಲದಲ್ಲಿ ಹೊಸಂಗಡಿಯಲ್ಲಿ ಜನಮನ್ನಣೆ ಪಡೆದಿರುವ ಹೃದಯ ತಜ್ಞರಾಗಿರುವ
ಡಾ. ಅಮಿತ್ ಕಿರಣ್ ರವರು ಹೃದಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ನಡೆಸುವರು. ಹಾಗೂ ಮಂಗಳೂರಿನ ಹೆಸರಾಂತ ಹೃದಯ ತಜ್ಞರಾಗಿರುವ ಡಾ. ಮುಕುಂದ, ಮಹಿಳಾ ವೈದ್ಯೆ ಡಾ. ಮೇಘನಾ ಮುಕ್ಕುಂದ್, ಮತ್ತು ಡಾ. ರ್ಹರ್ಷಿತರವರು ಭಾಗವಹಿಸುವರು. ಈ ವೇಳೆ ಸಂಸ್ಥೆಯ ಸದಸ್ಯ ಶರತ್ ರವರ ಸ್ಮರಣಾರ್ಥ
ಬೃಹತ್ ರಕ್ತದಾನ ಶಿಬಿರವನ್ನು ಕೂಡಾ ಆಯೋಜಿಸಲಾಗಿದೆ. ಈ ಮೇಲಿನ ಶಿಬಿರಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಅದೇ ರೀತಿ ಮೇಲಿನ ಎರಡು ಶಿಬಿರಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಹೆಸರನ್ನು ನೋಂದಾಯಿಸಲು ಸಂಸ್ಥೆಯ ಪದಾಧಿಕಾರಿಗಳಾದ: ಸುನಿಲ್ ಕನಿಲ 9743700325, ಸುದೀಪ್ 8073826144, ಬಾಲಕೃಷ್ಣ ಮುಟ್ಟಂ 9901823077, ಪ್ರವೀಣ್ ಕನಿಲ 9895846093 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.