Breaking Posts

6/trending/recent
Type Here to Get Search Results !

8:10:45

ಕೇರಳದಲ್ಲಿ ಸೇಡಿನ ರಾಜಕರಣದಿಂದ ರಾಜ್ಯದಲ್ಲಿ ಅರಾಜಕ ಸ್ಥಿತಿ. - ಕಾಂಗ್ರೆಸ್.

ಸೇಡಿನ ರಾಜಕಾರಣದಿಂದ ಕೇರಳ ರಾಜ್ಯದಲ್ಲಿ ಅರಾಜಕ ಸ್ಥಿತಿ. - ಕಾಂಗ್ರೆಸ್.
ಮಂಜೇಶ್ವರ: ಕೇರಳ ಪಿಣರಾಯಿ ಸರಕಾರ ಪೋಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿ ಕೆ ಪಿ ಸಿ ಸಿ ಅಧ್ಯಕ್ಷರಾದ ಶ್ರೀ ಕೆ.ಸುಧಾಕರನ್ ಮತ್ತು ವಿಪಕ್ಷ ನಾಯಕರಾದ ವಿ.ಡಿ.ಸತೀಶನ್ ರ ವಿರುದ್ದ ಸುಳ್ಳು ಕೇಸನ್ನು ಹಾಕಿದ್ದಾರೆ. ಕೇರಳ ಪೋಲೀಸನ್ನು ಕೈಗೊಂಬೆಯಂತೆ ಮಾಡಿ ಪೋಲೀಸ್ ಸೇನೆಯನ್ನೇ ನಿಷ್ಕ್ರಿಯ ಮಾಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೋಲೀಸ್ ಇಲಾಖೆಗೆ ಈಗ ರಾಜಕೀಯ ವಿರೋಧಿಗಳನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಮತ್ತು ಧ್ವನಿ ವರ್ಧಕಗಳ ಮೇಲೆ ಕೇಸ್ ಹಾಕುವಂತಹ ಗತಿ ಕೇಡು ಬಂದಿದೆ. ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸ್ ಹಾಕಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಬೆಳಗ್ಗೆ ನಡೆದ ಮಂಜೇಶ್ವರ ಪೋಲೀಸ್ ಸ್ಟೇಷನ್ ಮಾರ್ಚ್ ಉದ್ಘಾಟಿಸಿದ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ ಶೇಣಿ ಹೇಳಿದರು.
ಡಿಸಿಸಿ ಅಧ್ಯಕ್ಷರನ್ನು ಎಸ್ ಪಿ ಆಫೀಸ್ ಮಾರ್ಚ್ ವೇಳೆ ಹಲ್ಲೆಗೈದ ಪೋಲೀಸ್ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಮುಖ್ಯ ಭಾಷಣ ಮಾಡಿದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಿ ಎಂ ಕೆ ಮೊಹಮ್ಮದ್ ಮಾತನಾಡಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬ ಸಮೇತ ಹೋಗುವ ಅಮೆರಿಕ ಪ್ರವಾಸದ ದುಂದು ವೆಚ್ಚದ ಹೊರೆಯನ್ನು ಬಡವರ ಮೇಲೆ ಅಧಿಕ ತೆರಿಗೆಯನ್ನು ಹಾಕುವ ಮೂಲಕ ಕೊಳ್ಳೆ ಹೊಡೆಯುತ್ತಿದ್ದಾರೆ ಮತ್ತು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತಿದ್ದಾರೆ ಎಂದು ಹೇಳಿದರು. ಪಿ. ಸೋಮಪ್ಪ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷರಾದ ಇಕ್ಬಾಲ್ ಕಳಿಯೂರು, ಪಿ ಎಂ ಖಾದರ್ ಹಾಜಿ,ಫ್ರಾನ್ಸಿಸ್ ಡಿಸೋಜ,ಮಹಿಳಾ ಕಾಂಗ್ರೆಸ್ ನೇತಾರೆ ಪ್ರಶಾಂತಿ, ನೇತಾರರಾದ ಹರ್ಷಾದ್ ವರ್ಕಾಡಿ,ಮೊಹಮ್ಮದ್ ಮಜಲ್,ಶೀನ ಕೆದುಂಬಾಡಿ, ಮೊಹಮ್ಮದ್ ಬಿ ಕೆ, ಮೊಹಮ್ಮದ್ ಜೆ, ಸತ್ಯನ್ ಸಿ ಉಪ್ಪಳ, ಅಲ್ಮೇಡಾ ಡಿಸೋಜ, ಬಾಬು ಬಂದಿಯೋಡು, ಕಲೀಲ್ ಬಜಾಲ್, ನವೀನ್ ಶೆಟ್ಟಿ, ಆರಿಫ್ ಮಚಂಪಾಡಿ, ನಾಗೇಶ್ ಮಂಜೇಶ್ವರ,ಹನೀಫ್ ಪಡಿಂಚಾರ್, ಯೋಗೇಶ್ ಉದ್ಯಾವರ, ಮೂಸಾ ಡಿ ಕೆ, ಹಮೀದ್ ಕಣಿಯೂರು, ಯಾಕೂಬ್ ಕೋಡಿ, ಉಮ್ಮರ್ ಬೆಜ್ಜ,ಅಝೀಝ್ ಕಲ್ಲೂರ್, ಗಣೇಶ್ ಪಾವೂರು ನೌಶಾದ್ ಬೋರ್ಕಳ, ನೇತ್ತೃತ್ವ ವಹಿಸಿದರು. ದಿವಾಕರ್ ಎಸ್ ಜೆ ಸ್ವಾಗತಿಸಿ, ಜಗದೀಶ್ ಮೂಡಂಬೈಲು ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.