Breaking Posts

6/trending/recent
Type Here to Get Search Results !

8:10:45

ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ: ಚಂದ್ರಶೇಖರ ಶೆಟ್ಟಿ ಬಾಕ್ರಬೈಲ್ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ.

ಬಿ.ಜೆ.ಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ: ಚಂದ್ರಶೇಖರ ಶೆಟ್ಟಿ ಬಾಕ್ರಬೈಲ್ ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ.
ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲದ ಪ್ರಸ್ತುತ ಉಪಾಧ್ಯಕ್ಷರೂ ಹಾಗೂ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಬಾಕ್ರಬೈಲ್ ನಿವಾಸಿ ಚಂದ್ರಶೇಖರ .ಎನ್ ಶೆಟ್ಟಿ ಯವರು ತಮ್ಮ ಮಂಡಲದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಇಂದು ಸಂಜೆ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಮ್ ರಿಗೆ ರಾಜೀನಾಮೆ ಪತ್ರವನ್ನು ನೀಡುವ ಮೂಲಕ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನು ಮುಂದೆ ಪಕ್ಷದ ಕಾರ್ಯಕರ್ತನಾಗಿ ದುಡಿಯಲು ತೀರ್ಮಾನಿಸಿದ್ದಾರೆ. ಇವರು ನೀಡಿದ
ರಾಜೀನಾಮೆ ಪತ್ರದಲ್ಲಿ "R.S.S ಸ್ವಯಂಸೇವಕನಾಗಿ ನಂತರ ದಿವಂಗತ ಸಂಕಯ್ಯ ಭಂಡಾರಿಯವರ ಕಾಲದಿಂದಲೇ ಬಿಜೆಪಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದು ಸುಮಾರು 35 ವರ್ಷದಿಂದ ಕೆಲಸಮಾಡುತ್ತಿದ್ದೇನೆ. ಪ್ರಸ್ತುತ ಬಿಜೆಪಿ ಮಂಡಲ ಉಪಾಧ್ಯಕ್ಷನಾಗಿ ಜೊತೆಗೆ ಶಕ್ತಿಕೇಂದ್ರದ ಪ್ರಮುಖ ಹಾಗೂ ಬೂತ್ ಇನ್ ಚಾರ್ಜ್ ಸ್ಥಾನಮಾನವಿದ್ದು ನನಗೆ ನನ್ನ ವ್ಯವಹಾರ ಹಾಗೂ ಇನ್ನಿತರ ಕಾರಣಗಳಿಂದ ಸದ್ಯ ಪಾರ್ಟಿ ಜವಾಬ್ದಾರಿ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ಸಮಯದಿಂದ ಪಾರ್ಟಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕೇವಲ ಹೆಸರಿಗೆ ಮಾತ್ರ ಪಾರ್ಟಿ ಜವಾಬ್ದಾರಿ ಸ್ಥಾನದಲ್ಲಿರುವುದು ನನಗೆ ಸರಿಯಾಗುವುದಿಲ್ಲ. ಹಾಗಾಗಿ ಪಾರ್ಟಿ ಜವಾಬ್ದಾರಿ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ರವರಿಗೆ ರಾಜೀನಾಮೆ ಪತ್ರ ಕೊಟ್ಟಿದ್ದೇನೆ. ಇದುವರೆಗೆ ಪಾರ್ಟಿ ಸಿದ್ದಾಂತಕ್ಕೆ ಚ್ಯುತಿ ಬಾರದಂತೆ ಕೆಲಸಮಾಡಿದ್ದು ಆ ಬಗ್ಗೆ ನನಗೆ ಹೆಮ್ಮೆ ಇದೆ. ಬಿಜೆಪಿಯಲ್ಲಿ ವಿವಿಧ ಸ್ಥಾನಮಾನದಲ್ಲಿ ಕೆಲಸ ಮಾಡಲು ಅವಕಾಶ ಇತ್ತ ಪಾರ್ಟಿ ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಪಾರ್ಟಿ ನೇತಾರರಿಗೆ ಅಭಿನಂಧನೆಗಳು. ಸಂಘದ ಹಿರಿಯರು, ಗುರುಗಳಾದ ಮಹಾಲಿಂಗ ಭಟ್ ಪಜ್ವ ಇವರಿಗೂ ವಂದನೆಗಳು. RSS ಸೇರಲು ಕಾರಣಕರ್ತರಾದ ದಿವಂಗತ ಪ್ರಭಾನಂದ ಸಾಮಾನಿ ತಲೆಕ್ಕಿ ಮತ್ತು ವಸಂತ ಭಂಡಾರಿ ಕಯ್ಯ ಇವರಿಗೂ ವಂದನೆಗಳು." ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.ಚಂದ್ರಶೇಖರ ಶೆಟ್ಟಿಯವರು ಈ ಮೊದಲು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯಲ್ಲಿ ಎರಡು ಸಲ ಪ್ರಧಾನ ಕಾರ್ಯದರ್ಶಿಯಾಗಿಯೂ, ಬಳಿಕ ಎರಡು ಸಲ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ ಬಿಜೆಪಿಯನ್ನ ವರ್ಕಾಡಿ ಪಂಚಾಯತ್ ಮಟ್ಟದಲ್ಲಿ ಬೆಳೆಸಿ, ಮಂಡಲ ಸಮಿತಿ ಹಾಗೂ ಜಿಲ್ಲಾ ಸಮಿತಿ, ರಾಜ್ಯ ಸಮಿತಿಯ ನೇತಾರರ ಹೆಮ್ಮೆಗೆ ಪಾತ್ರರಾಗಿದ್ದರು. ತಮ್ಮ ಅವಧಿಯಲ್ಲಿ ನಡೆಯುತ್ತಿದ್ದ ವಿವಿಧ ಚುನಾವಣೆಯ ವೇಳೆ ವರ್ಕಾಡಿ ಪಂಚಾಯತ್ ನ ಎಲ್ಲಾ ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರೊಂದಿಗೆ ಹಗಲು ರಾತ್ರಿ ದುಡಿದಿದ್ದರು. ಅಲ್ಲದೆ ಇವರ ಜತೆ ಪಕ್ಷದ ಬೆಳವಣಿಗೆಗೆ ಕಾರ್ಯಕರ್ತರು ಕೂಡಾ ಸ್ನೇಹಮಯಿ ಒಡನಾಟದಿಂದ ಕಾರ್ಯ ನಿರ್ವಹಿಸುತ್ತಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.