ಕೇಂದ್ರ ಸರ್ಕಾರ ಎಲ್ಲಾ ವಲಯದಲ್ಲಿ ವಿಫಲವಾಗಿದೆ. ಯುವ ಜನತೆಗೆ ಸರಿಯಾಗಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. - ಕಾಂ. ವಿ. ಪಿ.ರಾಜನ್.
ಆಗಸ್ಟ್ 06, 2023
0
ಕೇಂದ್ರ ಸರ್ಕಾರ ಎಲ್ಲಾ ವಲಯದಲ್ಲಿ ವಿಫಲವಾಗಿದೆ. ಯುವ ಜನತೆಗೆ ಸರಿಯಾಗಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. - ಕಾಂ. ವಿ. ಪಿ.ರಾಜನ್.
ಮಂಜೇಶ್ವರ: ಸಿ. ಐ.ಟಿ.ಯು ಮಿಂಜ ಪಂಚಾಯತ್ ಸಮಿತಿ ನೇತೃತ್ವದಲ್ಲಿ "ಕೋಮುವಾದದ ವಿರುದ್ಧ ವರ್ಗ ಐಕ್ಯ "ಎಂಬ ವಿಷಯದಲ್ಲಿ ಸೆಮಿನಾರ್ ಕಾರ್ಯಕ್ರಮ ಮೀಯಪದವಿನಲ್ಲಿ ನಡೆಯಿತು. ಸಿ.ಐ.ಟಿ.ಯು ಜಿಲ್ಲಾ ಸಮತಿ ಸದಸ್ಯರಾದ ಕಾಂ. ವಿ.ಪಿ. ರಾಜನ್ ಉದ್ಘಾಟಿಸಿ ಮಾತನಾಡಿದರು. ಅವರು ಮಾತನಾಡಿ ಕೇಂದ್ರ ಸರ್ಕಾರ ಎಲ್ಲಾ ವಲಯದಲ್ಲಿ ವಿಪಲವಾಗಿದ್ದು ಯುವಜನತೆಗೆ ಸರಿಯಾಗಿ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕಾರ್ಮಿಕರ ಕೆಲಸ ಸ್ಥಿರತೆ ಇಲ್ಲದ ಪರಿಸ್ಥಿತಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನಸಮಾನ್ಯರ ಅಗತ್ಯವಸ್ತುಗಳ ಬೆಲೆ ಏರಿಕೆ ಯಾಗಿದೆ. ಗ್ಯಾಸ್ ಬೆಲೆ ಕೂಡ ಗಗನಕ್ಕೇರಿದೆ. ಸಬ್ಸಿಡಿ ಹಣ ಸರ್ಕಾರ ಜನರಿಗೆ ಕೊಡುತ್ತಿಲ್ಲ. ರೈತರು ಕೂಡ ಕೇಂದ್ರ ಸರ್ಕಾರದ ನೀತಿಯಿಂದ ಅತೃಪ್ತರಾಗಿದ್ದಾರೆ. ಕ್ರೀಡಾ ಪಟುಗಳು ಅದರಲ್ಲೂ ಮಹಿಳಾ ಕ್ರೀಡಾಪಟುಗಳು ಬಿಜೆಪಿ ಎಂ.ಪಿಯಿಂದ ಲೈಂಗಿಕ ಶೋಷಣೆಗೆ ಒಳಗಾದದ್ದು ಅವರನ್ನೂ ಸಂಸರಕ್ಷಿಸುವ ಕೆಲಸಮಾಡುತ್ತಿದ್ದ ಮಣಿಪುರ ಹೊತ್ತಿ ಉರಿಯುತ್ತಿದೆ. ಅಲ್ಲಿ ಸ್ತ್ರೀಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಬಿಜೆಪಿ ಆರ್.ಎಸ್.ಎಸ್ ಸಹಾಯದಲ್ಲಿ ಅಲ್ಲಿ ಕಲಾಪ ನಡೆಯುತ್ತದೆ ಪೊಲೀಸ್ ಅಸ್ತ್ರಗಳು ಕಲಾಪಗಾರರ ಕೈಸೇರಿದೆ. ಸ್ತ್ರೀಯರನ್ನು ಅತ್ಯಾಚಾರ ಮಾಡಿ ನಗ್ನವಾಗಿ ಮೆರವಣಿಗೆ ಮಾಡಿದ ಘಟನೆ ಭಾರತ ತಲೆ ತಗ್ಗಿಸುವಂತಾಗಿದೆ. ಈ ರೀತಿಯ ಬಿಜೆಪಿ ಸರ್ಕಾರದ ನೀತಿಯ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ಜನತೆಯಲ್ಲಿ ಜಾಗ್ರತೆ ಮೂಡಿಸಲು ಹೋರಾಟ ನಡೆಸಲು ಮುಂದಾಗಬೇಕು ಎಂದು ಅವರು ಕರೆಯಿತ್ತರು. ಕಾಂ. ಅನಿಲ್ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಪ್ರಶಾಂತ್ ಕನಿಲ, ಬಾಳಪ್ಪ ಬಂಗೇರ, ಲೋಕೇಶ್ ಚಿಗುರುಪಾದೆ, ಜನಾರ್ಧನ ಮೊದಲಾದ ನೇತಾರರು ಭಾಗವಹಿಸಿದ್ದರು. ಆಗೋಸ್ಟ್ 14 ರಂದು ರೈತ ಸಂಘ ಸಿ. ಐ. ಟಿ.ಯು, ಕೆ.ಎಸ್.ಕೆ. ಟಿ.ಯು ನೇತೃತ್ವದಲ್ಲಿ ನಡೆಯುವ ನೈಟ್ ವಿಜಿಲ್ ಕಾರ್ಯಕ್ರಮ ವಿಜಯಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆರಂಭದಲ್ಲಿ ಸತೀಶ್ ಎಲಿಯಾಣ ಸ್ವಾಗತಿಸಿದರು.


