ಹೊಸಂಗಡಿ ರಮ್ಯ ಜ್ಯುವೆಲ್ಲರಿಯ ಅಕ್ಕ ಸಾಲಿಗ ಪುಂಡಲೀಕ ಆಚಾರ್ಯ (70) ನಿಧನ.
ಆಗಸ್ಟ್ 06, 2023
0
ಹೊಸಂಗಡಿ ರಮ್ಯ ಜ್ಯುವೆಲ್ಲರಿಯಲ್ಲಿ ಅಕ್ಕ ಸಾಲಿಗರಾಗಿದ್ದ ಪುಂಡಲೀಕ ಆಚಾರ್ಯ (70) ನಿಧನ.
ಮಂಜೇಶ್ವರ: ಹೊಸಂಗಡಿ ಪಿರಾರಮೂಲೆ ನಿವಾಸಿ
ಪುಂಡಲೀಕ ಆಚಾರ್ಯ (70) ಇಂದು ಸಂಜೆ ಸ್ವ - ಗೃಹದಲ್ಲಿ ಹೃದಯಾಘಾತಗೊಂಡು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾದರು. ಮೃತರು ದಿ. ತಿಮ್ಮಯ್ಯ ಆಚಾರ್ಯ - ದಿ. ರಾಧಮ್ಮ ದಂಪತಿಯ ಪುತ್ರನಾಗಿದ್ದು, ಪತ್ನಿ: ಕುಸುಮ, ಮಕ್ಕಳಾದ: ಹರ್ಷಿತಾ, ರಕ್ಷಿತ್, ದೀಕ್ಷಿತ, ಅಳಿಯಂದಿರಾದ: ಹರಿಪ್ರಸಾದ್ ಆಚಾರ್ಯ ಕಾಸರಗೋಡು, ಯತೀಂದ್ರ ಆಚಾರ್ಯ ಬೆಂಗಳೂರು, ಸಹೋದರ - ಸಹೋದರಿಯರಾದ: ಆನಂದ ಆಚಾರ್ಯ ಪ್ರತಾಪನಗರ, ವಿಜಯ ಕುಂಟಾರು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಈ ಹಿಂದೆ ಹೊಸಂಗಡಿ ರಮ್ಯ ಜ್ಯುವೆಲ್ಲರಿಯಲ್ಲಿ 20 ವರ್ಷಗಳಿಂದ ಅಕ್ಕ ಸಾಲಿಗ ವೃತ್ತಿ ಮಾಡುತ್ತಿದ್ದು, ಬಳಿಕ ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಓಜ ಸಾಹಿತ್ಯ ಕೂಟದ ಹಿರಿಯ ಸದಸ್ಯರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆ ನಾಳೆ (07 - 08 - 2023 ಸೋಮವಾರ) ಬೆಳಗ್ಗೆ ಹೊಸಂಗಡಿ ರಾಮತ್ತಮಾಜಾಲಿನಲ್ಲಿರುವ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ. ಮೃತರ ನಿಧನಕ್ಕೆ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಓಜ ಸಾಹಿತ್ಯ ಕೂಟ, ಶ್ರೀ ಗುರುಸೇವಾ ಪರಿಷತ್ ಗಾಢವಾದ ಸಂತಾಪ ಸೂಚಿಸಿದ್ದಾರೆ.

