ಪ್ರಬುದ್ಧ ರಂಗ ಕಲಾವಿದ ಸುರೇಶ್ ಮಂಜೇಶ್ವರ್ ರಿಗೆ ಮಾತೃ ವಿಯೋಗ.
ಆಗಸ್ಟ್ 24, 2023
0
ಪ್ರಬುದ್ಧ ರಂಗ ಕಲಾವಿದ ಸುರೇಶ್ ಮಂಜೇಶ್ವರ್ ರಿಗೆ ಮಾತೃ ವಿಯೋಗ.
ಮಂಜೇಶ್ವರ: ಪ್ರಬುದ್ಧ ರಂಗ ಕಲಾವಿದ ಸುರೇಶ್ ಮಂಜೇಶ್ವರ್ ರವರ ತಾಯಿ ನಾಗಮ್ಮ (70) ಇಂದು ಸಂಜೆ 6.10 ಕ್ಕೆ ಸ್ವ - ಗೃಹದಲ್ಲಿ ನಿಧನರಾದರು.
ಮೃತರು ಮಂಜೇಶ್ವರ ಹೊಸಬೆಟ್ಟು ನಿವಾಸಿ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ನಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪ್ರಧಾನ ಅರ್ಚಕರಾಗಿದ್ದ ದಿ.ತಿಮ್ಮಪ್ಪ ಕಾಂಜವರ ಧರ್ಮಪತ್ನಿ ಯಾಗಿದ್ದಾರೆ. ಮೃತರು ಮಕ್ಕಳಾದ ಪದ್ಮನಾಭ ತಲಪ್ಪಾಡಿ, ತಾರನಾಥ, ಸುರೇಶ್ ಮಂಜೇಶ್ವರ್ (ಪ್ರಬುದ್ಧ ರಂಗ ಕಲಾವಿದ), ದೇವದಾಸ್, ಗಿರೀಶ್, ಜಯಲಕ್ಷ್ಮಿ (ಮಾಲಕರು: ಶಾರದಾ ಪ್ರಿಂಟಿಂಗ್ ಪ್ರೆಸ್ ಹೊಸಂಗಡಿ.), ಅಳಿಯ ಕೃಷ್ಣ .ಜಿ ಮಂಜೇಶ್ವರ (ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ) ಸೊಸೆಯಂದಿರಾದ ವಿಜಯಶ್ರೀ, ಶಕುಂತಲಾ, ಸುಜಾತ, ರಮಿತಾ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ರಾತ್ರಿ 10:00 ವೇಳೆ ಮನೆ ಪರಿಸರದಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಲಕುಮಿ ತಂಡ ಮಂಗಳೂರು, ಹೊಸಬೆಟ್ಟು ಫ್ರೆಂಡ್ಸ್ ಸರ್ಕಲ್, ಶಾರದಾ ಕಲಾ ಆರ್ಟ್ಸ್ ಮಂಜೇಶ್ವರ, ಐಸಿರಿ ಕಲಾವಿದರು ಮಂಜೇಶ್ವರ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಗಾಢವಾದ ಸಂತಾಪ ಸೂಚಿಸಿದ್ದಾರೆ.
