Breaking Posts

6/trending/recent
Type Here to Get Search Results !

8:10:45

ಜ್ವರ ಭಾದಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಜಿಬೈಲ್ ಪಟ್ಟತ್ತಮೊಗರು ನಿವಾಸಿ ಬಾಲಕಿ ಆತ್ಮಿ (4) ನಿಧನ.

ಜ್ವರ ಭಾದಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಜಿಬೈಲ್ ಪಟ್ಟತ್ತಮೊಗರು ನಿವಾಸಿ ಬಾಲಕಿ ಆತ್ಮಿ (4) ನಿಧನ.
ಮಂಜೇಶ್ವರ: ಹೊಸಂಗಡಿ ಬಳಿಯ ಮಜಿಬೈಲು, ಪಟ್ಟತ್ತಮೊಗರು ಕುದುರು ನಿವಾಸಿ ಛಾಯಾಗ್ರಾಹಕ ದೀಕ್ಷಿತ್ ರೈ ಯ ಪುತ್ರಿ ಆತ್ಮಿ (4) ಇಂದು ಮುಂಜಾನೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನಲಾದಳು. ಕೊಡ್ಡೆ ಅಂಗನವಾಡಿಗೆ ತೆರಳುತ್ತಿದ್ದ ಬಾಲಕಿಗೆ ಕಳೆದ ಎರಡು ದಿನದ ಹಿಂದೆ ಜ್ವರ ಬಾಧಿಸಿತ್ತು. ಬಳಿಕ ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಿನ್ನೆ ಬೆಳಗ್ಗೆ ಜ್ವರ ಹೆಚ್ಚಾದ ಕಾರಣ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಬಾಲಕಿ ಅಸು ನೀಗಿದ್ದಾಳೆ. ಮೃತ ಬಾಲಕಿ ತಂದೆ, ತಾಯಿ ಶಿಲ್ಪಾ, ಏಕ ಸಹೋದರಿ ಧನ್ವಿಯನ್ನು ಅಗಲಿದ್ದಾಳೆ. ಮೃತಳ ಅಂತ್ಯ ಕ್ರಿಯೆ ಇಂದು ಬೆಳಗ್ಗೆ ಮನೆ ಪರಿಸರದಲ್ಲಿ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.