ಕೆ ಎಸ್ ಟಿ ಎ ಮಂಜೇಶ್ವರ ಉಪಜಿಲ್ಲೆ ವತಿಯಿಂದ "ಕುಟ್ಟಿಕೊರು ವೀಡ್" (ಮಗುವಿಗೊಂದು ಮನೆ) ಯೋಜನೆಗೆ ಸಬ್ಬಯ್ಯಕಟ್ಟೆಯಲ್ಲಿ ಶಂಕುಸ್ಥಾಪನೆ.
ಆಗಸ್ಟ್ 17, 2023
0
ಕೆ ಎಸ್ ಟಿ ಎ ಮಂಜೇಶ್ವರ ಉಪಜಿಲ್ಲೆ ವತಿಯಿಂದ "ಕುಟ್ಟಿಕೊರು ವೀಡ್" (ಮಗುವಿಗೊಂದು ಮನೆ) ಯೋಜನೆಗೆ ಸಬ್ಬಯ್ಯಕಟ್ಟೆಯಲ್ಲಿ ಶಂಕುಸ್ಥಾಪನೆ.
ಮಂಜೇಶ್ವರಂ: ಕೆ.ಎಸ್.ಟಿ.ಎ ಮಂಜೇಶ್ವರ ಉಪಜಿಲ್ಲೆ ನಿರ್ಮಾಣ ಮಾಡಿ ಕೊಡಲಿರುವ “ಕುಟ್ಟಿಕೊರು ವೀಡ್( ಮಗುವಿಗೊಂದು ಮನೆ)” ಯೋಜನೆಯ ಶಂಕುಸ್ಥಾಪನೆಯನ್ನು ಪೈವಳಿಕೆ ಪಂಚಾಯಿತಿನ ಸುಬ್ಬಯಕಟ್ಟೆಯಲ್ಲಿ ಉದುಮ ಶಾಸಕರಾದ ಸಿ.ಎಚ್.ಕುಂಜಂಬು ನೆರವೇರಿಸಿದರು. ಕೇರಳದ ಅತಿ ದೊಡ್ಡ ಶಿಕ್ಷಕರ ಸಂಘಟನೆ ಕೆ.ಎಸ್.ಟಿ.ಎ ಯ ರಾಜ್ಯ ಕಾರ್ಯದರ್ಶಿ ರಾಘವನ್ ಕೆ, ಪೈವಳಿಕೆ ಪಂಚಾಯಿತಿನ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ರಾಜ್ಯ ಕಾರ್ಯ ಕಾರಿ ಸಮಿತಿಯ ಪಿ.ದಿಲೀಪ್ ಕುಮಾರ್, ಜಿಲ್ಲಾ ಕಾರ್ಯದರ್ಶಿಯಾದ ಪ್ರಕಾಶನ್ ಟಿ, ಕುಡಾಲು ಮೇರ್ಕಳ ವಾರ್ಡು ಸದಸ್ಯ ಅಶೋಕ್ ಭಂಡಾರಿ,ಪೆರ್ಮುದೆ ವಾರ್ಡ್ ಸದಸ್ಯೆ ಇರ್ಶಾನ, ರಾಜ್ಯ ಸಮಿತಿಯ ಸದಸ್ಯೆ ಲಸಿತಾ, ಜಿಲ್ಲಾ ಅಧ್ಯಕ್ಷ ಶ್ಯಾಂಭಟ್, ಜಿಲ್ಲಾ ಕಾರ್ಯ ಕಾರಿ ಸಮಿತಿಯ ಸದಸ್ಯ ಮೋಹನ ಬಿ, ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷ ಬಶೀರ್, ಜಿಲ್ಲಾ ಸಮಿತಿಯ ಸದಸ್ಯರಾದ ವಿಜಯಕುಮಾರ್ ಪಾವಲ, ವನಿತಾ , ಅಶ್ರಫ್, ಉಪಜಿಲ್ಲಾ ಕಾರ್ಯದರ್ಶಿ ರವೀಂದ್ರ, ಉಪಜಿಲ್ಲಾ ಅಧ್ಯಕ್ಷ ಬೆನ್ನಿ ತೋಮ್ ಪೊನ್ನೆಯಿಲ್, ಉಪಜಿಲ್ಲಾ ಕೋಶಾಧಿಕಾರಿ ಪ್ರಕಾಶನ್ ಪಿ, ಸಿಪಿಐಎಂ ಲೋಕಲ್ ಸೆಕ್ರೆಟರಿ ಲತೀಫ್, ಕುಡಾಲ್ ಮೇರ್ಕಳ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮನಾಫ್ ಇತರರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಆರ್ ವಹಿಸಿದ್ದರು. ಗೃಹ ನಿರ್ಮಾಣ ಸಮಿತಿಯ ಕೋಶಾಧಿಕಾರಿ ವಿಜಯ ಸಿ.ಎಚ್ ಸ್ವಾಗತಿಸಿ, ಮಂಜೇಶ್ವರ ಕೆ.ಎಸ್.ಟಿ.ಎ ಉಪಾಧ್ಯಕ್ಷ ಸಂತೋಷ್ ಸಂತೋಷ್ ಕೆ.ವಿ. ಧನ್ಯವಾದ ಸಲ್ಲಿಸಿದರು.
