ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಮಲಯಾಳಂ ಭಾಷೆಯಲ್ಲಿ ಸಾರ್ವಜನಿಕ ಪ್ರಕಟಣೆಗಳು. ಕನ್ನಡಿಗರಿಗೆ ದ್ರೋಹ. ಬಿಜೆಪಿ ಖಂಡನೆ. ಮಂಜೇಶ್ವರ ವಿದ್ಯುತ್ ಕಚೇರಿಯಲ್ಲಿ ಕನ್ನಡ ಭಾಷೆಯಲ್ಲಿ ಮಾಹಿತಿಗಳು ಪ್ರಕಟಿಸಲು ಬಿಜೆಪಿ ಮನವಿ.
ಆಗಸ್ಟ್ 17, 2023
0
ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಮಲಯಾಳಂ ಭಾಷೆಯಲ್ಲಿ ಸಾರ್ವಜನಿಕ ಪ್ರಕಟಣೆಗಳು. ಕನ್ನಡಿಗರಿಗೆ ದ್ರೋಹ. ಬಿಜೆಪಿ ಖಂಡನೆ. ಮಂಜೇಶ್ವರ ವಿದ್ಯುತ್ ಕಚೇರಿಯಲ್ಲಿ ಕನ್ನಡ ಭಾಷೆಯಲ್ಲಿ ಮಾಹಿತಿಗಳು ಪ್ರಕಟಿಸಲು ಬಿಜೆಪಿ ಮನವಿ.
ಮಂಜೇಶ್ವರ: ಕೇರಳ ರಾಜ್ಯ ಸರಕಾರದ ಬಹುತೇಕ ಎಲ್ಲ ಕಛೇರಿಗಳಲ್ಲಿ ಮಲಯಾಳಂ ಭಾಷೆ ಬಳಕೆ ಮಾತ್ರ ಖಂಡನೀಯ, ಭಾಷಾ ಅಲ್ಪಸಂಖ್ಯಾತ ಪ್ರದೇಶ ವಾದ ಗಡಿನಾಡಿನಲ್ಲಿ ಇಂತಹ ಪ್ರವೃತ್ತಿ ಭಾಷಾ ಸಂಖ್ಯಾತರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಮಂಜೇಶ್ವರ ಆರೋಪಿಸಿದೆ. ಮಂಜೇಶ್ವರ ವಿದ್ಯುತ್ ಕಚೇರಿಯಲ್ಲಿ ಸೂಚನೆಗಳು, ನಿಬಂಧನೆಗಳನ್ನು ಮಲಯಾಳಂನಲ್ಲಿ ಮಾತ್ರ ನೀಡಿರುವ ಬಗ್ಗೆ ಬಿಜೆಪಿ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದೆ. ವಿದ್ಯುತ್ ಕಚೇರಿಯಲ್ಲಿ ಪೂರ್ಣ ಮಲಯಾಳಿ ಭಾಷೆಯಲ್ಲಿ ಮಾತ್ರ ಮಾಹಿತಿ ನೀಡಿರುವುದು ಖಂಡನೀಯ. ಕನ್ನಡ ಭಾಷೆಯಲ್ಲಿಯೂ, ಮಾಹಿತಿ ಬೋರ್ಡ್ ಗಳನ್ನು ಸ್ಥಾಪಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಬಿಜೆಪಿ ನೇತಾರ ಯಾದವ ಬಡಾಜೆ ಯವರು ಇಂದು ಬೆಳಗ್ಗೆ
ಮಂಜೇಶ್ವರ ವಿದ್ಯುತ್ ಕಚೇರಿಗೆ ತೆರಳಿ A.E ಯವರನ್ನು ಭೇಟಿಯಾಗಿ ಮನವಿ ನೀಡಿದರು. ಮಲೆಯಾಳಂ ಭಾಷೆಯ ಪ್ರಕಟಣೆಗಳು ಎಲ್ಲ ಸರಕಾರಿ ಕಚೇರಿಯಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಆರೋಪಿಸಿದೆ. ಇನ್ನು ಮುಂದೆ ಕಚೇರಿಗಳಲ್ಲಿ ಕನ್ನಡ ಭಾಷೆಗೆ ಮಾನ್ಯತೆ ನೀಡಬೇಕೆಂದು ಬಿಜೆಪಿ ಅಗ್ರಹಿಸಿದೆ.

