Breaking Posts

6/trending/recent
Type Here to Get Search Results !

8:10:45

ಶ್ರೀ ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ "ಶ್ರೀ ಮಂಗಳ ಗೌರಿ ವ್ರತ" ಪೂಜೆ.

ಶ್ರೀ ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ "ಶ್ರೀ ಮಂಗಳ ಗೌರಿ ವ್ರತ" ಪೂಜೆ.
ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಇಂದು "ಮಂಗಳಗೌರಿ ವ್ರತ" ಪೂಜೆಯು ಕ್ಷೇತ್ರದಲ್ಲಿ ನಡೆಯಿತು.
ಈ ವೇಳೆ ಮಹಿಳಾ ಸಂಘದ ಪಧಾಧಿಕಾರಿಗಳು, ಸದಸ್ಯರು ಕ್ಷೇತ್ರದ ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಗುರು ಸೇವಾ ಪರಿಷತ್ ನ ಪಾಧಧಿಕಾರಿಗಳು, ಸದಸ್ಯರು ಭಗವದ್ಭಕ್ತರು ಭಾಗವಹಿಸಿದ್ದರು. ಮಂಗಳಗೌರಿ ವೃತಾಚರಣೆಯ ಕಥೆ.(ಆಧ್ಯಾತ್ಮಿಕ ವಿಚಾರದಿಂದ ಆಯ್ದ ಭಾಗ)👇🏻 ಧರ್ಮಪಾಲ ಎಂಬ ಒಬ್ಬ ವೈಶ್ಯನಿಗೆ ಬಹಳ ಕಾಲದ ನಂತರ ಮದುವೆಯಾಗುತ್ತದೆ. ಆದರೆ, ಮದುವೆಯಾದ ನಂತರ ಮಕ್ಕಳು ಆಗಲಿಲ್ಲ ಎಂಬ ಕೊರಗು ಆತನನ್ನು ಕಾಡುತ್ತಾ ಇರುತ್ತದೆ. ವಿಶೇಷವಾಗಿ ಭಗವಂತನನ್ನು ಪ್ರಾರ್ಥನೆ ಮಾಡಿ ಪೂಜಿಸಿದ ನಂತರವೂ ಫಲ ಸಿಗದೇ ಇದ್ದಾಗ, ಯಾತ್ರೆಗೆ ಹೊರಡುತ್ತಾನೆ, ಯಾತ್ರೆಯ ಮದ್ಯದಲ್ಲಿ ಅನೇಕ ಕ್ಷೇತ್ರಗಳಿಗೆ ತೆರಳಿ ಸಾಧುಗಳಿಗೆ ಸೇವೆ ಸಲ್ಲಿಸುತ್ತಾನೆ. ಆಗ ಅಲ್ಲಿರುವ ಸಾಧುಗಳು ಅವನನ್ನು ಅನುಗ್ರಹಿಸಿ ಹೇಳುತ್ತಾರೆ, ನಿನ್ನ ಈ ವ್ರತ ಆಚರಣೆ ಮತ್ತು ನಿಷ್ಠೆಯಿಂದ ನಾವು ಸಂತೃಷ್ಟರಾಗಿದ್ದೇವೆ. ನಿನ್ನ ಮನಸ್ಸಿನಲ್ಲಿ ಏನಾದರೂ ಕೊರಗು ಇದ್ದರೆ ಹೇಳು ಎಂದು ಕೇಳುತ್ತಾರೆ. ಆಗ ತನಗೆ ಮಕ್ಕಳಾಗಿಲ್ಲ ಎಂಬ ಸಂಗತಿಯನ್ನು ಸಾಧುಗಳಿಗೆ ಹೇಳುತ್ತಾನೆ. ಆಗ ಅವನ ಮುಖಛರ್ಯೆ ಮತ್ತು ಹಿನ್ನಲೆಯನ್ನು ಗಮನಿಸಿದ ಸಾಧುಗಳು, ಮಕ್ಕಳು ಆಗುವಂತಹ ಪರಿಸ್ಥಿತಿ ಇಲ್ಲ, ಆದರೂ ನಮ್ಮ ತಪೋ ಬಲದಿಂದ ಹೀಗೊಂದು ಆಯ್ಕೆಯನ್ನು ನೀಡಬಹುದು. ಒಂದು ಅಲ್ಪ ಆಯುಷ್ಯನಾದಂತಹ ಮಗ ಅಥವಾ ಕಣ್ಣಿಲ್ಲದಂತ ಮಗ ಹುಟ್ಟುತ್ತಾನೆ. ಆದರೆ ನಿನಗೆ ಯಾವುದು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕೇಳುತ್ತಾರೆ. ಕುರುಡುನಾದಂತಹ ಮಗನನ್ನು ಕಟ್ಟಿಕೊಂಡು ತಾನು ಯಾವ ಸುಖವನ್ನು ಪಡೆಯಲು ಸಾಧ್ಯವಿಲ್ಲ ಎಂದು ಭಾವಿಸಿ ಅಲ್ಪಆಯುಷ್ಯ ಮಗನೇ ಸಾಕು ಎಂದು ಯೋಚಿಸಿ, ಅಲ್ಪಆಯುಷ್ಯ ಮಗನನ್ನೇ ಕೇಳುತ್ತಾನೆ. ಸಾಧುಗಳ ಅನುಗ್ರಹದಿಂದ ಆತನಿಗೆ ಅಲ್ಪಆಯುಷ್ಯ ಮಗ ಜನಿಸುತ್ತಾನೆ. ಮಗ 16 ವರ್ಷಕ್ಕೆ ಬೆಳೆಯುವ ತನಕವೂ, ತಂದೆಯಾಗಿ ಮಗನ ಏನು ಸಂತೋಷವನ್ನು ಪಡೆಯಬೇಕೋ ಅದೆಲ್ಲವನ್ನು ಪಡೆಯುತ್ತಾನೆ. ಕಾಲ ಕಳೆಯುತ್ತಿದ್ದಂತೆ, ಮಗನ ಅಲ್ಪಆಯುಷ್ಯದ ನೆನಪಾಗಿ ದುಃಖ ಕಾಡಲು ಶುರುವಾಗುತ್ತದೆ. ಕೊನೆಗೆ, ಈ ಹೊತ್ತಿಗೆ ಇವನಿಗೆ ಮದುವೆ ಮಾಡಿದರೆ ಸರಿ ಎಂದು ಯೋಚಿಸಿ, 18 ವಯಸ್ಸು ದಾಟುವುದರಲ್ಲೇ ಯೋಗ್ಯವಾದಂತಹ ಹುಡುಗಿಯನ್ನ ನೋಡಿ ಮದುವೆ ಮಾಡಿಸುತ್ತಾನೆ. ಮದುವೆಯಾಗುವ ಸಂದರ್ಭದಲ್ಲಿ ಹುಡುಗಿಗೆ ಈ ವಿಚಾರವನ್ನು ಮೊದಲೇ ತಿಳಿಸಿರುತ್ತಾರೆ. ಮದುವೆಯಾದ ನಂತರ ಮಗನ ಪತ್ನಿಯು ಕುಲದೈವರಾದಂತಹ ಪಾರ್ವತಿ ಪರಮೇಶ್ವರನಲ್ಲಿ ಗಂಡನ ಆಯುಷ್ಯದ ಪ್ರಾರ್ಥಿಸುತ್ತಾ 5 ವರ್ಷಗಳ ಕಾಲ ನಿರಂತರ ಪೂಜೆ ಸಲ್ಲಿಸುತ್ತಾಳೆ. ಇನ್ನೇನು ಗಂಡನ ಪ್ರಾಣ ಹೋಗುವ ಕಾಲದಲ್ಲಿ ಆಕೆಗೆ ಭಗವಂತನ ದರ್ಶನ ಆಗುತ್ತದೆ. ನಿನ್ನ ಗಂಡನ ಆಯಸ್ಸು ಮುಗಿದಿದೆ ಎಂದು ಭಗವಂತ ಹೇಳುವಾಗ, ನಾನು ಇಷ್ಟು ವರ್ಷ ಮಾಡಿದ ವ್ರತ, ಪೂಜೆ, ಧರ್ಮ ನಾನು ಇಟ್ಟ ಶ್ರದ್ಧೆ ಸತ್ಯವಾಗಿದ್ದರೆ, ನನ್ನ ಗಂಡನಿಗೆ ಇನ್ನಷ್ಟು ಆಯುಸ್ಸನ್ನು ಕೊಡಬೇಕು. ನಿನ್ನನ್ನು ನಂಬಿದವರನ್ನು ಯಾವುತ್ತು ಕೈಬಿಡಿಲ್ಲ ಎಂಬ ಮಾತನ್ನು ನಡೆಸಿಕೊಡಬೇಕು ಎಂದು ಕೇಳಿಕೊಂಡು, ಬೇಕಾದರೆ, ತನ್ನ ಆಯುಸ್ಸನ್ನು ತಾನು ದಾನ ಮಾಡಲಿಕ್ಕೆ ಸಿದ್ಧನಿದ್ದೇನೆ ಎಂದು ಅವಳು ಹೇಳಿ ಭಂಗವಂತನಲ್ಲಿ ಅಂಗಲಾಚುತ್ತಾಳೆ. ಆಕೆಯ ಬೇಡಿಕೆಗೆ ಒಲಿದ ಭಗವಂತನು ಗಂಡನ ಆಯುಸ್ಸನ್ನು ವೃದ್ಧಿಗೊಳಿಸುತ್ತಾನೆ.ಪಾರ್ವತಿಯನ್ನು ಮಂಗಳ ಗೌರಿ ವ್ರತದ ದಿನದಂದು ಇಡೀ ಶ್ರಾವಣ ತಿಂಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಮಂಗಳಗೌರಿ ವ್ರತವನ್ನು ಆಚರಿಸುವುದರಿಂದ ಮತ್ತು ಪಾರ್ವತಿ ದೇವಿಯನ್ನು ಶ್ರದ್ದೆಯಿಂದ ಪೂಜಿಸುವುದರಿಂದ ಅಖಂಡ ಸೌಭಾಗ್ಯವನ್ನು ಪಡೆಯುತ್ತಾರೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಈ ಉಪವಾಸವನ್ನು ಇಟ್ಟುಕೊಳ್ಳುತ್ತಾರೆ. ತಾಯಿ ಪಾರ್ವತಿಯ ಇನ್ನೊಂದು ಹೆಸರೂ ಸಹ ಗೌರಿ, ಇದು ಅವಳ ಗೌರವಾರ್ಥ ವ್ರತವಾದ ಕಾರಣದಿಂದಾಗಿರುತ್ತದೆ. ಮಾತೆ ಪಾರ್ವತಿಯು ಭಕ್ತರನ್ನು ಬಹುಬೇಗನೆ ಸಂತೋಷಪಡುತ್ತಾಳೆ. ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರಿಗೆ ಈ ಉಪವಾಸವು ತುಂಬಾ ಮಂಗಳಕರವಾಗಿದೆ. ಎಂದು "ಮಂಗಳ ಗೌರಿ ವೃತದ" ಕಥೆ ಸಾರುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.