ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ "ಓಣಂ ಸಂತೆ - 2023" ಕುಂಜತ್ತೂರಿನಲ್ಲಿ ಉದ್ಘಾಟನೆ..
ಆಗಸ್ಟ್ 22, 2023
0
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ "ಓಣಂ ಸಂತೆ - 2023" ಕುಂಜತ್ತೂರಿನಲ್ಲಿ ಉದ್ಘಾಟನೆ.
ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಮತ್ತು ಕನ್ಸೂಮರ್ ಫೆಡ್ ವತಿಯಿಂದ ಓಣಂ ಹಬ್ಬದ ಕಾಲದಲ್ಲಿ ಬೆಲೆ ಏರಿಕೆಯನ್ನು ತಡೆಗಟ್ಟಲು "ಓಣಂ ಸಂತೆ - 2023" ಯನ್ನು ಕುಂಜತ್ತೂರಿನಲ್ಲಿ ಆಯೋಜಿಸಲಾಗಿದೆ. ಕುಂಜತ್ತೂರು ಬಸ್ ನಿಲ್ದಾಣ ಸಮೀಪದ ಆಯಿಷಾ ಆಲಿಸ್ ಬಿಲ್ಡಿಂಗ್ ನಲ್ಲಿ ಓಣಂ ಸಂತೆ ಆರಂಭಗೊಂಡಿತು. ಬ್ಯಾಂಕ್ ಅಧ್ಯಕ್ಷರಾದ ಬಿ.ವಿ ರಾಜನ್ ಮೋನು ಕುಚ್ಚಿಕಾಡ್ ರವರಿಗೆ ಸಾಮಗ್ರಿ ನೀಡುವ ಮೂಲಕ ಓಣಂ ಸಂತೆ ಉದ್ಘಾಟಿಸಿದರು. ಬ್ಯಾಂಕ್ ಆಡಳಿತ ಸಮಿತಿ ಉಪಾಧ್ಯಕ್ಷರಾದ ಯೋಗೀಶ್ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಬ್ಯಾಂಕ್ ಆಡಳಿತ ಸಮಿತಿ ನಿರ್ದೇಶಕರಾದ ಡಾ| ಕೆ.ಎ ಖಾದರ್, ಸುರೇಖಾ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕ್ ಕಾರ್ಯದರ್ಶಿ ರಾಜನ್ ನಾಯರ್ ಸ್ವಾಗತಿಸಿ, ಬ್ಯಾಂಕ್ ಸಿಬ್ಬಂದಿ ಶ್ರೀಧರ್ ಆರ್.ಕೆ ವಂದಿಸಿದರು. ಈ ಬಾರಿಯ ಓಣಂ ಸಂತೆಯಲ್ಲಿ ಸಬ್ಸಿಡಿ ದರದಲ್ಲಿ 13 ನಿತ್ಯೋಪಯೋಗಿ ಸಾಮಗ್ರಿಗಳು ಹಾಗೂ ಸಬ್ಸಿಡಿ ರಹಿತ 23 ಸಾಮಗ್ರಿಗಳು ಮಾರಾಟಕ್ಕಿವೆ. ಈ ಸೌಲಭ್ಯ ಪಡೆಯುವ ಗ್ರಾಹಕರು ಕಡ್ಡಾಯವಾಗಿ ರೇಷನ್ ಕಾರ್ಡ್ ತೋರಿಸಿ ಪಡೆದುಕೊಳ್ಳಬಹುದಾಗಿದೆ.


