Breaking Posts

6/trending/recent
Type Here to Get Search Results !

8:10:45

ರೈಲುಗಳಿಗೆ ನಾಮಕರಣಕ್ಕೆ ಮುಂಚಿತವಾಗಿ ತುಳುನಾಡು ಪ್ರದೇಶದ ರೈಲ್ವೇ ಅವಗಣನೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಪರಿಶೀಲ ನಡೆಸಬೇಕು: ಬಿ. ವಿ ರಾಜನ್.

ರೈಲುಗಳಿಗೆ ನಾಮಕರಣಕ್ಕೆ ಮುಂಚಿತವಾಗಿ ತುಳುನಾಡು ಪ್ರದೇಶದ ರೈಲ್ವೇ ಅವಗಣನೆ ಬಗ್ಗೆ ನಳಿನ್ ಕುಮಾರ್ ಕಟೀಲು ಪರಿಶೀಲನೆ ನಡೆಸಬೇಕು: ಬಿ.ವಿ ರಾಜನ್.
ಮಂಜೇಶ್ವರ: ವಲವಕ್ಕೋಡ್ ರೈಲ್ವೆ ಡಿವಿಷನಿನ ವ್ಯಾಪ್ತಿಯಲ್ಲಿ ಮತ್ತು ಕೊಂಕಣ್ ರೈಲು ಲೈನಿನಲ್ಲಿ ಓಡುತ್ತಿರುವ ಹಲವಾರು ರೈಲುಗಳಿಗೆ (9) ಹೊಸ ನಾಮಕರಣದ ನಿರ್ದೇಶನವನ್ನು ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಮುಂದಿಟ್ಟು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ಕೆಲವು ವಾರ್ತಾ ಮಾಧ್ಯಮಗಳು ವರದಿ ಮಾಡಿರುತ್ತದೆ. ರೈಲಿನಂತಹ ಸಾರ್ವಜನಿಕ ವಾಹನಗಳಿಗೆ ನಾಮಕರಣ ಮಾಡುವಾಗ ಇತರ ಎಲ್ಲಾ ಸಂಸತ್ ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸಿ ಚರ್ಚಿಸುವ ಆವಶ್ಯಕತೆಯಿದೆ. ಅದು ಮಾತ್ರವಲ್ಲ ಒಲವಕ್ಕೋಡ್ ಡಿವಿಷನಿನ ವ್ಯಾಪ್ತಿಯಲ್ಲಿರುವ ತುಳುನಾಡು ಪ್ರದೇಶದ ರೈಲು ನಿಲ್ದಾಣಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಹಲವು ದಶಕಗಳಿಂದ
ಮಂಜೇಶ್ವರ, ಉಪ್ಪಳ, ಕುಂಬಳೆ ರೈಲು ನಿಲ್ದಾಣಗಳ ಸ್ಥಿತಿ ಯಾವುದೇ ಅಭಿವೃದ್ಧಿಯಿಲ್ಲದೆ ಯಥಾ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಈ ನಿಲ್ದಾಣಗಳಲ್ಲಿ ಪ್ರಮುಖ ರೈಲುಗಳಿಗೆ ನಿಲುಗಡೆ ಸಹ ರೈಲ್ವೆ ಇಲಾಖೆ ನೀಡುತ್ತಿಲ್ಲ. ನಳಿನ್ ಕುಮಾರ್ ಕಟೀಲರ ಸಂಸತ್ ಸದಸ್ಯತನದ ಕಾಲಘಟ್ಟದಲ್ಲಿ ತೊಕ್ಕೂಟ್ಟಿನಂತಹ ರೈಲು ನಿಲ್ದಾಣವೇ ಇಲ್ಲವಾಗಿ ಹೋಯಿತು. ಒಂದು ವೇಳೆ ತೊಕ್ಕೊಟ್ಟು ನಿಲ್ದಾಣ ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಂತೆ ದೊಡ್ಡ ಮಟ್ಟಿನಲ್ಲಿ ಅಭಿವೃದ್ಧಿ ಪಡಿಸುತ್ತಿದ್ದರೆ ಅತ್ಯಧಿಕ ಆದಾಯ ದೊರಕುವ ರೈಲು ನಿಲ್ದಾಣವಾಗಿ ಮಾರ್ಪಾಡುಗೊಳ್ಳುತ್ತಿತ್ತು. ಪ್ರಸ್ತುತ ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ಹಲವಾರು ಮೆಡಿಕಲ್ ಕಾಲೇಜುಗಳಿರುವ ಮುಡಿಪುವಿಗೆ ಹೋಗಿ ಬರುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ತೊಕ್ಕೊಟ್ಟು ರೈಲು ನಿಲ್ದಾಣ ಉಳಿಸಿ ಅಭಿವೃದ್ಧಿಗೊಳಿಸಿದ್ದರೆ ಅದೊಂದು ಆದಾಯವಾಗುತಿತ್ತು. ಈ ಅಭಿಪ್ರಾಯವನ್ನು ಮಂದಿಡಲು ಸಹ ನಳಿನ್ ಕುಮಾರ್ ಕಟೀಲ್ ತಯಾರಾಗಲಿಲ್ಲ.
ಮಂಗಳೂರಿಗೆ ಒಂದು ಪ್ರತ್ಯೇಕ ರೈಲ್ವೆ ಡಿವಿಷನ್ ಎಂಬ ಬೇಡಿಕೆ ಈಗ ಸುದ್ದಿಯೇ ಇಲ್ಲ. ಒಲವಕ್ಕೋಡ್ ರೈಲ್ವೇ ಡಿವಿಷನಿನಲ್ಲಿ ಓಡುತ್ತಿರುವ ರೈಲುಗಳ ಕಂಪಾರ್ಟ್ ಮೆಂಟ್ (ಬೋಗಿಗಳು) ಓಬಿರಾಯನ ಕಾಲಘಟ್ಟದಂತೆ ಇರುವುದನ್ನು ನವೀಕರಿಸಿ ಸುಂದರವಾಗಿಸುವಂತಹ ಬೇಡಿಕೆಯನ್ನು ಅವರು ಮುಂದಿಡಲು ಪ್ರಯತ್ನಿಸುತ್ತಿಲ್ಲ. ಈಗ ಓಡುತ್ತಿರುವ ವಂದೇ ಭಾರತ್ ರೈಲು ಮಂಗಳೂರು ತನಕ ಓಡುತ್ತಿರುವ ಒತ್ತಾಯವೋ ಈಗ ವಾಪಾಸು ಕೇರಳಕ್ಕೆ ಮಂಜೂರಾಗಿರುವ ಎರಡನೇ ವಂದೇ ಭಾರತ್ ರೈಲನ್ನು ಮಂಗಳೂರಿನ ತನಕ ವಿಸ್ತರಿಸಬೇಕೆನ್ನುವ ಬೇಡಿಕೆಯನ್ನು ಸಹ ಅವರು ಮುಂದಿಡುತ್ತಿಲ್ಲ. ಕೆಲವು ವರುಷಗಳ ಹಿಂದೆ ಓಡಾಟ ನಿಲ್ಲಿಸಿದ
ಕಣ್ಣೂರು- ಬೈಂದೂರು (ಕೊಲ್ಲೂರು) ಪ್ಯಾಸೆಂಜರ್ ರೈಲನ್ನು ಪುನರ್ ಸ್ಥಾಪಿಸಬೇಕೆಂದು ಸಮಸ್ತ ನಾಗರಿಕರು ಒತ್ತಾಯಿಸಿದರೂ ಕೇಂದ್ರವನ್ನು ಆಳುತ್ತಿರುವ ಪಕ್ಷದ ಪ್ರಭಾವೀ ಸಂಸತ್ ಸದಸ್ಯನೆಂಬ ನೆಲೆಯಲ್ಲಿ ಸರಕಾರಕ್ಕೆ ಒತ್ತಡ ತಂದು ಯಶ್ವಸಿಯಾಗಲು ಅವರು ಮುಂದಾಗದಿರುವುದು ದೌರ್ಭಾಗ್ಯಕರವಾಗಿದೆ. ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿಯ ಪ್ರತಿ ತಿಂಗಳ ಸಭೆಯಲ್ಲಿ ಈ ಎಲ್ಲಾ ಆವಶ್ಯಗಳನ್ನು ಮುಂದಿಟ್ಟು ಒತ್ತಾಯಿಸಿದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ. ಮಾತ್ರವಲ್ಲ ಕಾಸರಗೋಡು ಲೋಕಸಭಾ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್ ಸಹ ಈ ಸಮಸ್ಯೆಗಳೆಲ್ಲಾ ತನಗೂ ಸಂಬಂಧ ಪಟ್ಟದೆಂಬುದನ್ನು ತಿಳಿದು ಕೊಳ್ಳದೆ ಇರುವುದು ಖೇದಕರವಾಗಿದೆಯೆಂದು
ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸದಸ್ಯ ಬಿ.ವಿ ರಾಜನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.