Breaking Posts

6/trending/recent
Type Here to Get Search Results !

8:10:45

ಮಂಜೇಶ್ವರ ಶ್ರೀ ಕೀರ್ತೆಶ್ವರ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ನಿಧಿ ಸಂಗ್ರಹಣೆಗೆ ಚಾಲನೆ.

ಮಂಜೇಶ್ವರ ಶ್ರೀ ಕೀರ್ತೆಶ್ವರ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ನಿಧಿ ಸಂಗ್ರಹಣೆಗೆ ಚಾಲನೆ.
ಮಂಜೇಶ್ವರ: ಇಂದಿನ ಕಾಲಘಟ್ಟದಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ಅನೇಕ ದೈವ, ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಊರಿನ ಅಭಿವೃದ್ಧಿಯನ್ನು ಕಂಡಿದೆ. ಅನೇಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಈ ಬಾರಿ ಕೀರ್ತೆಶ್ವರ ದೇವರ ಆಲಯವು ಜೀರ್ಣೋದ್ಧಾರಗೊಂಡು, ಸದಾಶಿವ ದೇವರು ಪ್ರತಿಷ್ಠಾಪನೆಗೊಂಡು ಬ್ರಹ್ಮಕಲಶೋತ್ಸವ ನೋಡುವ ಸೌಭಾಗ್ಯ ನಮಗೊದಗಿ ಬರಲಿದೆ. ಇದು ನಮ್ಮ ಸುಯೋಗ ಎಂದು ಬ್ರಹ್ಮ ಶ್ರೀ ವೇದಮೂರ್ತಿ ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳವರು ನುಡಿದರು.
ಅವರು ಮಂಜೇಶ್ವರ ಶ್ರೀ ಕೀರ್ತೆಶ್ವರ ಸದಾಶಿವ ದೇವಸ್ಥಾನದ "ಜೀರ್ಣೋದ್ಧಾರ ಕಾರ್ಯಕ್ರಮದ ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ನಿಧಿ ಸಂಗ್ರಹಣೆಗೆ ಚಾಲನೆ" ಕಾರ್ಯಕ್ರಮವನ್ನು ಇಂದು ಬೆಳಗ್ಗೆ ಕ್ಷೇತ್ರದಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು.
ಎಲ್ಲರೂ ಜೀರ್ಣೋದ್ಧಾರದ ಕಾರ್ಯಕ್ಕೆ ತಮ್ಮಿಂದಾದ ಸೇವೆಯನ್ನು ಸಮರ್ಪಣಾ ಮನೋಭಾವದಿಂದ ದೇವರಿಗೆ ಸಮರ್ಪಿಸಿದರೆ ನಮ್ಮ ಜೀವನದಲ್ಲಿ ದೈವ, ದೇವರುಗಳ ಅಭಯಹಸ್ತವಿರುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ನಡೆಯುವ ಜೀರ್ಣೋದ್ಧಾರ ಕಾರ್ಯ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಪ್ರಗತಿಯ ಹಾದಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿ,
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ರಮದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿ
ಬಳಿಕ ನಿಧಿ ಸಂಗ್ರಹಣೆಗೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಅಧ್ಯಕ್ಷರಾದ ತುಕಾರಾಮ ಕುಂಬಳೆ ವಹಿಸಿದ್ದರು.
ವೇದಿಕೆಯಲ್ಲಿ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಲ್ಚಪ್ಪಾಡ, ತಮ್ಮ ದೈವದ ಪಾತ್ರಿ ತಿಮಿರಿ ಬೆಲ್ಚಪ್ಪಾಡ, ತಮ್ಮ ದೈವದ ಅರ್ಚಕ ಬೀರು ಚೌಟ, ಮುಂಡತ್ತಾಯ ದೈವದ ಪಾತ್ರಿ ಮಂಜು ಬೆಲ್ಚಪ್ಪಾಡ,
ಸಮಾಜದ ಗುರಿಕಾರರಾದ ಸುನಿಲ್ ಗುರಿಕಾರ, ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಯಾನಂದ ಬಂಗೇರ, ಕ್ಷೇತ್ರದ ಪುತ್ತೂರು ತಾಲೂಕು ಗಾಣಿಗ ಸಂಘ ಸಮಿತಿ ಅಧ್ಯಕ್ಷ ಹರಿ ರಾಮಚಂದ್ರ, ಉಳ್ಳಾಲ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಎಚ್. ಪ್ರಕಾಶ್, ರಮೇಶ್ ಉಳ್ಳಾಲ, ಕ್ಷೇತ್ರದ ಅರ್ಚಕರಾದ ರವೀಶ್ ಭಟ್, ಕ್ಷೇತ್ರದ ಆಡಳಿತ ಮೊಕ್ತೆಸರ ಲಕ್ಷ್ಮಣ ಐಲ, ಉದಯ ಪೂಜಾರಿ ಹೊಸಹಿತ್ಲು, ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವನಾಥ ಪೊಯ್ಯಕಂಡ, ಹಾಗೂ ವಲಯ ಸಮಿತಿ ಅಧ್ಯಕ್ಷರುಗಳು ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ನಟಿಬೈಲ್ ಸ್ವಾಗತಿಸಿ, ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ನಿರೂಪಿಸಿ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಶ್ ಅಂಜರೆ ವಂದಿಸಿದರು. ಛಾಯಾಚಿತ್ರ: ಸೌಪರ್ಣಿಕಾ ಮಾಡ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.