Breaking Posts

6/trending/recent
Type Here to Get Search Results !

8:10:45

ಬಿಲ್ಲವ ಸೇವಾ ಸಂಘ, ಯುವ ವೇದಿಕೆ, ಮಹಿಳಾ ವೇದಿಕೆ ವತಿಯಿಂದ ಕುಂಬಳೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 169 ನೇ ಜನ್ಮದಿನಾಚರಣೆ ಹಾಗೂ 14 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಿಲ್ಲವ ಸೇವಾ ಸಂಘ, ಯುವ ವೇದಿಕೆ, ಮಹಿಳಾ ವೇದಿಕೆ ವತಿಯಿಂದ ಕುಂಬಳೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 169 ನೇ ಜನ್ಮದಿನಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ.
ಕುಂಬಳೆ: ಬಿಲ್ಲವ ಸೇವಾ ಸಂಘ, ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಕುಂಬಳೆ ಇದರ ಜಂಟಿ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಅವರ 169 ನೇ ಜನ್ಮದಿನವು ಈ ತಿಂಗಳ 31ರಂದು ಗುರುವಾರ ನಡೆಯಲಿದ್ದು, ಅಂದು ಬೆಳಿಗ್ಗೆ 09:00 ಗಂಟೆಗೆ ಸರಿಯಾಗಿ ಕುಂಬಳೆ ಶೇಡಿಕಾವು ಶ್ರೀ ಶಂಕರ ನಾರಾಯಣ ದೇವರ ಸನ್ನಿಧಿಯಲ್ಲಿ ಬಂಬಾಣ ಬ್ರಹ್ಮ ಶ್ರೀ ಶಂಕರನಾರಾಯಣ ಕಡಮಣ್ಣಯರ ನೇತೃತ್ವದಲ್ಲಿ 14 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಾಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಬೆಳಗ್ಗೆ ಬಿಡುಗಡೆಗೊಳಿಸಲಾಯಿತ್ತು. ಸಮಿತಿಯ ಅಧ್ಯಕ್ಷರಾದ ಗಣೇಶ್ ಪೂಜಾರಿ ಕುಂಬಳೆ ಯವರು ಬಿಲ್ಲವ ಸಮಾಜದ ಪ್ರಮುಖರಾದ ಗೋಪಾಲಕೃಷ್ಣ ಪೂಜಾರಿ ಯವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಬಿಡುಗಡೆಗೊಳಿಸಿದರು.
ಈ ವೇಳೆ ಸಮಿತಿಯ ಕಾರ್ಯದರ್ಶಿ ಸತೀಶ್ ಕುಂಬಳೆ, ಶಶಿ ಕುಂಬಳೆ, ಜಗದೀಶ್ ಪೇರಲ್, ಪದ್ಮನಾಭ ಕೋಟೆಕಾರ್, ನವೀನ್ ಪೂಜಾರಿ ಕೋಟೆಕಾರ್, ಮಹಿಳಾ ವೇದಿಕೆಯ ಕಮಲ ಕಾಂತಪ್ಪ ಪೂಜಾರಿ ಕಂಚಿಕಟ್ಟೆ, ಹೇಮಲತಾ ನಾರಾಯಣ ಪೂಜಾರಿ ಕೋಟೆಕಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.