ಕಾರ್ಮಿಕರ ಕ್ಷೇಮನಿಧಿ ಸವಲತ್ತುಗಳನ್ನು ಸರಕಾರ ತ್ವರಿತಗೊಳಿಸಬೇಕು: ಎ.ಐ.ಟಿ.ಯು.ಸಿ. AITUC ಮಂಜೇಶ್ವರ ಮಂಡಲ ಸಮ್ಮೇಳನ ಮಜಿಬೈಲ್ ಬ್ಯಾಂಕ್ ಸಂಭಾಂಗಣ.
ಆಗಸ್ಟ್ 21, 2023
0
ಕಾರ್ಮಿಕರ ಕ್ಷೇಮನಿಧಿ ಸವಲತ್ತುಗಳನ್ನು ಸರಕಾರ ತ್ವರಿತಗೊಳಿಸಬೇಕು: ಎ.ಐ.ಟಿ.ಯು.ಸಿ
ಮಂಜೇಶ್ವರ: ಕೇರಳ ಸರಕಾರ ಕಾರ್ಮಿಕರಿಗೆ ಜ್ಯಾರಿಗೊಳಿಸಿದ ವಿವಿಧ ಕ್ಷೇಮನಿಧಿಗಳ ಪಿಂಚಣಿ ಹಾಗೂ ಸವಲತ್ತುಗಳನ್ನು ಹೆಚ್ಚು ಪ್ರಯೋಜನ ಕಾರಿಯಾಗಿಸಬೇಕೆಂದು ಎ.ಐ.ಟಿ.ಯು.ಸಿ ಮಂಜೇಶ್ವರ ಮಂಡಲ ಸಮ್ಮೇಳನ ಸರಕಾರವನ್ನು ಒತ್ತಾಯಿಸಿದೆ. ಮಂಡಲ ಸಮ್ಮೇಳನವನ್ನು ಎ.ಐ.ಟಿ.ಯು.ಸಿ ಜಿಲ್ಲಾ ಅಧ್ಯಕ್ಷ ಟಿ. ಕೃಷ್ಣನ್ ಉದ್ಘಾಟಿಸಿದರು. ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನಿಯಮ ತಿದ್ದುಪಡಿಗೊಳಿಸಿ ಕಾರ್ಮಿಕರಿಗೆ ದ್ರೋಹ ಮಾಡುತ್ತಿದೆ. ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಿ, ಉದ್ಯೋಗ ಕಡಿತಗೊಳಿಸಿ, ವಿವಿಧ ಸಾರ್ವಜನಿಕ ಸಂಸ್ಥೆಗಳನ್ನು ವಿಲೀನಗೊಳಿಸಿ ನಿರುದ್ಯೋಗ ಸೃಷ್ಟಿಸುತ್ತದೆ ಎಂದರು. ಎ.ಐ.ಟಿ.ಯು.ಸಿ ಮಂಡಲ ಅಧ್ಯಕ್ಷ ಗಂಗಾಧರ್ ಕೊಡ್ಡೆ ಧ್ವಜಾರೋಹಣಗೈದರು. ಗಣೇಶ್ ಕುಂಜತ್ತೂರು, ರಾಮದಾಸ್ ಕಡಂಬಾರ್, ನಳಿನಿ ಅಧ್ಯಕ್ಷೀಯ ಮಂಡಳಿ ಸಮ್ಮೇಳನವನ್ನು ನಿಯಂತ್ರಿಸಿತು. ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಗಣೇಶ್ ಕುಂಜತ್ತೂರು, ಸಂತಾಪ ಸೂಚಕ ನಿರ್ಣಯವನ್ನು ರಾಮದಾಸ್ ಮಂಡಿಸಿದರು. ಎ.ಐ.ಟಿ.ಯು.ಸಿ ಜಿಲ್ಲಾ ಖಜಾಂಚಿ ಬಿ.ವಿ ರಾಜನ್, ಎ.ಐ.ಟಿ.ಯು.ಸಿ ಹಿರಿಯ ನೇತಾರ ಎಂ. ಸಂಜೀವ ಶೆಟ್ಟಿ, ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ್ ಬಲ್ಲಂಗುಡೇಲ್, ಕೆ.ಸಿ.ಇ.ಸಿ ಜಿಲ್ಲಾ ಅಧ್ಯಕ್ಷ ರಾಮಕೃಷ್ಣ ಕಡಂಬಾರ್, ಮೋಟಾರ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್ ಅಭಿನಂದನಾ ಭಾಷಣ ಮಾಡಿದರು. ನೂತನ ಮಂಡಲ ಸಮಿತಿಗೆ ರಾಮಚಂದ್ರ ಬಡಾಜೆ ಅಧ್ಯಕ್ಷರಾಗಿಯೂ, ರಾಮಕೃಷ್ಣ ಕಡಂಬಾರ್ ಕಾರ್ಯದರ್ಶಿಯಾಗಿಯೂ, ಗೋಪಾಲಕೃಷ್ಣ ಪಜ್ವ, ಇಂದಿರಾ ವರ್ಕಾಡಿ ಉಪಾಧ್ಯಕ್ಷರಾಗಿಯೂ ಗಂಗಾಧರ್ ಕೊಡ್ಡೆ ಗಣೇಶ್ ಕುಂಜತ್ತೂರ್ ಜೊತೆ ಕಾರ್ಯದರ್ಶಿಗಳಾಗಿಯೂ, ಮುಸ್ತಫಾ ಕಡಂಬಾರ್ ಕೋಶಾಧಿಕಾರಿಯಾಗಿಯೂ ಹದಿನೈದು ಮಂದಿ ಮಂಡಲ ಸಮಿತಿಗೆ ಆಯ್ಕೆಯಾದರು.




