ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ವಿದ್ಯಾರ್ಥಿಗಳಿಗೆ ಪಠ್ಯೋಪಕರಣ ವಿತರಣೆ.
ಜುಲೈ 30, 2023
0
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ವಿದ್ಯಾರ್ಥಿಗಳಿಗೆ ಪಠ್ಯೋಪಕರಣ ವಿತರಣೆ
ಮಂಜೇಶ್ವರ: ಹಿಂದಿನ ಎಲ್ಲಾ ವರುಷಗಳಲ್ಲಿ ನೀಡುತ್ತಾ ಬಂದಂತೆ ಪ್ರಸ್ತುತ ವರುಷದಲ್ಲೂ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ನೂತನವಾಗಿ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯೋಪಕರಣಗಳನ್ನು ವಿತರಿಸಲಾಯಿತು. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿನ ಒಂಬತ್ತು ವಿದ್ಯಾಲಯಗಳ 450 ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಲಾಯಿತು. ವಿವಿಧ ಶಾಲೆಗಳಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಬಿ.ವಿ ರಾಜನ್, ಬ್ಯಾಂಕಿನ ಕಾರ್ಯದರ್ಶಿ ರಾಜನ್ ಪಿ.ನಾಯರ್, ಬ್ಯಾಂಕ್ ಸಿಬ್ಬಂದಿ ಶ್ರೀಧರ ಆರ್.ಕೆ ಮುಖ್ಯೋಪಾಧ್ಯಾಯರಿಗೂ, ಶಾಲಾ ಅಧಿಕೃತರಿಗೂ ಪಠ್ಯೋಪಕರಣಗಳನ್ನು ಹಸ್ತಾಂತರಿಸಿದರು. ವಿವಿಧ ವಿದ್ಯಾಲಯಗಳ ಮುಖ್ಯೋಪಾಧ್ಯಾಯರುಗಳು ಸೇವಾ ಸಹಕಾರಿ ಬ್ಯಾಂಕಿಗೆ ರಕ್ಷಕ- ಶಿಕ್ಷಕ ಸಂಘದ ವತಿಯಿಂದ ಕೃತಜ್ಞತೆ ಸಮರ್ಪಿಸಿದರು.



