ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ:- ಸುರೇಂದ್ರನ್ ಬಿಂದು. ಸಾಂಸ್ಕೃತಿಕ ಕ್ಷೇತ್ರಕ್ಕೆ ಧ್ವನಿ ಬೆಳಕಿನವರ ಕೊಡುಗೆ ನಿರಂತರ:- ಮಧು ಕಾರಕಡವತ್.
ಜುಲೈ 30, 2023
0
ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ:- ಸುರೇಂದ್ರನ್ ಬಿಂದು.
ಸಾಂಸ್ಕೃತಿಕ ಕ್ಷೇತ್ರಕ್ಕೆ ಧ್ವನಿ ಬೆಳಕಿನವರ ಕೊಡುಗೆ ನಿರಂತರ:- ಮಧು ಕಾರಕಡವತ್.
ಮಂಜೇಶ್ವರ: ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ. ಅಂತೆಯೆ ನಾವು ಆ ದೇವರಿಗೆ ಪ್ರಿಯರಾಗುವಂತೆ ದುಡಿಯೋಣ. ಕೀಳರಿಮೆ ಬಿಟ್ಟು ನಮ್ಮ ವೃತ್ತಿಯನ್ನ ನಾವು ಗೌರವಿಸುವುದರ ಮೂಲಕ ಸಮಾಜದಲ್ಲಿ ಎದ್ದು ನಿಲ್ಲೋಣ. ಆಧುನಿಕತೆಯ ಬರದಲ್ಲಿ ಮಾನವೀಯತೆ ಮರೆಯದೆ ಪರಸ್ಪರ ಸಾಮರಸ್ಯದಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣ. ಎಂದು
ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಸುರೇಂದ್ರನ್ ಬಿಂದು ಹೇಳಿದರು. ಅವರು ಇಂದು ಬೆಳಗ್ಗೆ ಮಂಜೇಶ್ವರ ಬೀಚ್ ಬಳಿಯ ಅಮನ್ ಕೋಟೆಜ್ ನಲ್ಲಿ ನಡೆದ ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಮಂಜೇಶ್ವರ ಮೇಘಲ ಸಮಿತಿಯ ಕುಟುಂಬ ಸಂಗಮ - ಸೀಸನ್ 2 ಕಾರ್ಯಕ್ರಮವನ್ನು ಪ್ರಕೃತಿ ಮತೆಯಾದ ಗಿಡವನ್ನು ಮಂಜೇಶ್ವರ ಮೇಘಲ ಸಮಿತಿಯ ಹಿರಿಯ ಸದಸ್ಯರಾದ ಪ್ರವೀಣ್ ಎಸ್.ಡಿ.ಎಸ್ ರವರಿಗೆ ನೀಡುವ ಮೂಲಕ ಉದ್ಘಾಟಿಸಿ, ಮಾತನಾಡಿದರು. ನಮ್ಮ ವೃತ್ತಿಬಾಂಧವರು (ಸೌಂಡು ಪಾರ್ಟಿ) ಲಕ್ಷಾಧೀಶ್ವರರು. ಇವರಿಗೆ ಹಣದ ಅವಶ್ಯಕತೆ ಇರುವುದಿಲ್ಲ ಎಂಬ ತಪ್ಪು ಭಾವನೆಯಿಂದ ಕಳೆದ ಕೋರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರ, ಜನಪ್ರತಿನಿಧಿಗಳು ನಮ್ಮ ಹತ್ತಿರ ಸುಳಿಯಲಿಲ್ಲ. ಆದರೆ ನಾವು ಲಕ್ಷಗಟ್ಟಲೇ ಸಾಲ ಮಾಡಿ ಉದ್ಯಮದಲ್ಲಿ ತೊಡಗಿಸಿ ನಷ್ಟದ ದಾರಿಯಲ್ಲಿ ಸಾಗುತ್ತಿರುವ ಸತ್ಯ ಇವರ್ಯಾರಿಗೂ ಇಂದಿನ ತನಕ ತಿಳಿಯದಿರುವುದು ಮಾತ್ರ ದುರಂತ. ಪ್ರತಿಯೊಂದು ಸಭೆ - ಸಮಾರಂಭಗಳಿಗೆ ನಾವು ಬೇಕು, ಆದರೆ ಕಷ್ಟದ ದಿನಗಳಲ್ಲಿ ಮಾತ್ರ ನಾವು ಯಾರಿಗೂ ಬೇಡ ಎನ್ನುವಂತಾಗಿದೆ ನಮ್ಮ ಸ್ಥಿತಿ ಎಂದರು. ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ: ಟಿವಿ ಬಾಲನ್ ವಹಿಸಿದರು. ವೇದಿಕೆಯಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಜನ ಮೈತ್ರಿ ಪೊಲೀಸ್ ಮಧು ಕಾರಕಡವತ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಧ್ವನಿ ಬೆಳಕಿನವರ ಕೊಡುಗೆ ನಿರಂತರವಾಗಿದ್ದು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವಲ್ಲಿ ಅವರ ಸಹಕಾರ ಯಾರೂ ಮರೆಯುವಂತಿಲ್ಲ. ಕಲಾವಿದರಾಗಲಿ, ಜನನಾಯಕರಾಗಲಿ ವೇದಿಕೆಯಿಂದ ಜನರಿಗೆ ತಲುಪುವುದಿದ್ದರೆ ಅದು ಸೌಂಡು ಲೈಟ್ ನವರ ಸಹಕಾರದಿಂದ. ಮಳೆ ಚಳಿ ಲೆಕ್ಕಿಸದ ಅವರ ಪ್ರಾಮಾಣಿಕ ಪ್ರಯತ್ನದಿಂದ ಹಲವು ಕ್ಷೇತ್ರದಲ್ಲಿ ಇಂದು ಅದ್ಭುತ ಸಾಧನೆಯಾಗಿದೆ. ಹಳ್ಳಿ ಪಟ್ಟಣಗಳಲ್ಲಿನ ಉತ್ಸವಗಳಿಗೆ ವೈಭವದ ಮೆರುಗು ಸೃಷ್ಟಿಯಾಗಿದ್ದಲ್ಲದೆ ಪ್ರತಿ ಕಾರ್ಯಕ್ರಮದ ಯಶಸ್ಸು ಕೂಡಾ ಇವರನ್ನೇ ಅವಲಂಬಿಸಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಂಘಟನೆಯ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ: ಶಿಭು, ಕೋಶಾಧಿಕಾರಿ: ಎಸ್.ಎಸ್ ಹಂಝ, ಮಂಜೇಶ್ವರ ಮೇಘಲ ಸಮಿತಿ ಗೌರವಾಧ್ಯಕ್ಷ: ಬಿ.ಎಂ. ಯದುನಂದನ ಆಚಾರ್ಯ ಕಡಂಬಾರು, ಕಾರ್ಯದರ್ಶಿ ಅಬೂಬಕ್ಕರ್ ಆಸರ್, ಹಿರಿಯ ಸದಸ್ಯ: ಪುಂಡರೀಕ ನಾಯ್ಕ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಈ ವೇಳೆ ತಲಪಾಡಿ ಶಾರದಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 96.1% ಅಂಕ ಪಡೆದ ಶಿವಾನಿ, ಹಾಗೂ ಮಂಜೇಶ್ವರ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 80% ಅಂಕ ಪಡೆದ ತನ್ಮಯ್ ಇವರನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.ಸಂಘಟನೆಯ
ಮಂಜೇಶ್ವರ ಮೇಘಲ ಅಧ್ಯಕ್ಷ: ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ದಿವಾಕರ್ ಪ್ರತಾಪನಗರ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿ, ಸಂಘಟನೆಯ ಮಂಜೇಶ್ವರ ಮೇಘಲ ಗೌರವಾಧ್ಯಕ್ಷ: ಬಿಎಂ ಯದುನಂದನ ಆಚಾರ್ಯ ಕಡಂಬಾರು ವಂದಿಸಿದರು. ಕಾರ್ಯಕ್ರಮ ಮುಂಚಿತ ಸಂಘಟನೆಯ ಸದಸ್ಯರಿಂದ ಉತ್ಸವಾಂಗಣಕ್ಕೆ ಮೆರವಣಿಗೆ, ಬಳಿಕ ಹಿರಿಯ ಸದಸ್ಯರಾದ ಪುಂಡರೀಕ ನಾಯ್ಕ್ ಮಂಜೇಶ್ವರ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೇಶವ ಕನಿಲ ಸಾರಥ್ಯದ ಇಂಚರ ಮೆಲೋಡೀಸ್ ಮಂಜೇಶ್ವರ ಇವರಿಂದ ಸಂಗೀತ ರಸಮಂಜರಿ ನಡೆಯಿತು.ಬಳಿಕ ವಿವಿಧ ಸ್ಪರ್ಧೆಗಳು ನಡೆಯುತಿದೆ.










