ನಾಪತ್ತೆಯಾದ ಕೃಷಿಕನ ಮೃತದೇಹ ನೇಣು ಬಿಗಿದು, ದೇಹ ಸಂಪೂರ್ಣ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆ.
ಜುಲೈ 29, 2023
0
ನಾಪತ್ತೆಯಾದ ಕೃಷಿಕನ ಮೃತ ದೇಹ ನೇಣು ಬಿಗಿದು, ದೇಹ ಸಂಪೂರ್ಣ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಂಜೇಶ್ವರ: ಈ ತಿಂಗಳ 19 ರಂದು ಬೆಳಿಗ್ಗೆ ತೋಟಕ್ಕೆ ಕೆಲಸಕ್ಕೆ ತೆರಳಿದ ಕೃಷಿಕ ವರ್ಕಾಡಿ ಕೋಡಿ ನಿವಾಸಿ ಸವೀರ ಡಿ' ಸೋಜಾ (61) ನಾಪತ್ತೆಯಾಗಿದ್ದು, ಇಂದು ಬೆಳಗ್ಗೆ ಮನೆಯಿಂದ ಅಲ್ಪ ದೂರದಲ್ಲಿ ಮರದಲ್ಲಿ ನೇಣು ಬಿಗಿದು ದೇಹ ಸಂಪೂರ್ಣ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರು ದಿ. ಜೀವ್ರಿಯಲ್ ಡಿ'ಸೋಜಾ - ದಿ. ನತಲಿನಾ ಎಂಬವರ ಪುತ್ರರಾಗಿದ್ದು, ಪತ್ನಿ: ಯುಜಿನ ಕುಟಿನಾ, ಮಕ್ಕಳಾದ: ಪ್ರಕಾಶ್, ಸ್ಮಿತಾ, ಲವಿನಾ, ಅಳಿಯ: ಸುಜಿತ್ ಬಜಪೆ, ಮಂಗಳೂರು, ಏಕ ಸಹೋದರ: ಮೆರ್ಸಿನ್ ಡಿಸೋಜಾ ಮೀಯ ಪದವು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತಪಟ್ಟ ಸವೀರ ಡಿಸೋಜಾರವರು ಕೃಷಿಕರಾಗಿದ್ದು, ಮೊನ್ನೆ 19 ರಂದು ಬೆಳಗ್ಗೆ ಮನೆಯಲ್ಲಿ ಚಾ ಕುಡಿದು ತೋಟಕ್ಕೆ ತೆರಳಿದ್ದರು. ಬಳಿಕ ಮಧ್ಯಾಹ್ನ ಊಟಕ್ಕೆ ಬರದ ಹಿನ್ನೆಲೆಯಲ್ಲಿ ಮನೆ ಮಂದಿ ಹುಡುಕಾಡಿದರೂ, ಪತ್ತೆಯಾಗಿಲ್ಲ. ಬಳಿಕ ಮನೆಮಂದಿ ಮಂಜೇಶ್ವರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ, ತನಿಖೆಯನ್ನು ಕೈಗೆತ್ತಿಕೊಂಡು ತನಿಖಾಧಿಕಾರಿ ಎಸ್.ಐ ನಿಖಿಲ್ ರವರ ನೇತೃತ್ವದಲ್ಲಿ ಶ್ವಾನದಳ ಹಾಗೂ ಮುಳುಗು ತಜ್ಞರು ತಲುಪಿ ಮನೆ ಪರಿಸರದ ಕೆರೆ, ಹಾಗೂ ಬಾವಿಯಲ್ಲಿ ಹುಡುಕಾಡಿದ್ದಾರೆ ಆದರೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಸವೀರ ಡಿಸೋಜಾರನ್ನು ಕಂಡುಬಂದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ವರದಿ ಕೂಡ ಪ್ರಕಟಿಸಲಾಗಿತ್ತು. ಇಂದು ಬೆಳಗ್ಗೆ ಮನೆ ಪರಿಸರ ಪ್ರದೇಶದಲ್ಲಿ ದುರ್ಗಂಧ ಬರುತ್ತಿದ್ದು, ಪರಿಸರ ನಿವಾಸಿಗಳು ಹುಡುಕಾಡುತ್ತಿದ್ದಂತೆ ಮನೆಯಿಂದ 200 ಮೀಟರ್ ದೂರದ ಕಾಡು ಪ್ರದೇಶದಲ್ಲಿ ಮರಕ್ಕೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದದ್ದು ಕಂಡು ಬಂದಿದೆ. ತಲೆಯ ಭಾಗ ಸಂಪೂರ್ಣ ಜೀರ್ಣಿಸಿ, ತಲೆ ಬುರುಡೆ ಕಾಣುತ್ತಿದ್ದೆ. ಅಲ್ಲದೆ ನೆಲದಲ್ಲಿ ಮೃತದೇಹದ ಕೈ, ಕಾಲು, ಅವಯವಗಳು ಬಿದ್ದು ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಜೆ ಮನೆಗೆ ತಂದು ಬಳಿಕ ವರ್ಕಾಡಿ ಸೀಕ್ರೆಟ್ ಹಾರ್ಟ್ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರ ಸಾವಿಗೆ ಕಾರಣ ಏನು ಎಂಬುದಾಗಿ ತಿಳಿದು ಬಂದಿಲ್ಲ.




