ಉಪ್ಪಳ ಕೋಡಿಬೈಲ್ ಕರವೂರು ನಿವಾಸಿ ಇಲೆಕ್ಸ್ಟ್ರಿಶಿಯನ್ ಪದ್ಮನಾಭ (61) ನಿಧನ.
ಜುಲೈ 29, 2023
0
ಉಪ್ಪಳ ಕೋಡಿಬೈಲ್ ಕರವೂರು ನಿವಾಸಿ ಇಲೆಕ್ಸ್ಟ್ರಿಶಿಯನ್ ಪದ್ಮನಾಭ (61) ನಿಧನ.
ಉಪ್ಪಳ: ಕೋಡಿಬೈಲ್ ಕರವೂರು ನಿವಾಸಿ ದಿ. ಸೋಮಪ್ಪರವರ ಪುತ್ರ ಪದ್ಮನಾಭ (61) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ನಿನ್ನೆ ಅಪರಾಹ್ನ 3 ಗಂಟೆಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ವೃತ್ತಿಯಲ್ಲಿ ಇಲೆಕ್ಸ್ಟ್ರಿಯನ್ ರಾಗಿದ್ದು, ಉಪ್ಪಳ, ಕೈಕಂಬ ಆಸುಪಾಸಿನ ಭಾಗದಲ್ಲಿ ಖ್ಯಾತಿಯನ್ನು ಹೊಂದಿದ್ದರು. ಮೃತರು ತಾಯಿ: ಜಾನಕಿ, ಮಕ್ಕಳು, ಸೊಸೆ, ಅಳಿಯಂದಿರು ಹಾಗೂ ಸಹೋದರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಪತ್ನಿ: ವೇದಾವತಿ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ನಿನ್ನೆ ರಾತ್ರಿ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.
