ಮಣಿಪುರ ಗಲಭೆಯ ವಿರುದ್ಧ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನ್ಯಾಯ ಸಮ್ಮುಚ್ಚಯದ ಮುಂಭಾಗ ಪ್ರತಿಭಟನೆ.
ಕಾಸರಗೋಡು: ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಮಣಿಪುರದ ಗಲಭೆಯ ವಿರುದ್ಧ ಕಾಸರಗೋಡು ನ್ಯಾಯ ಸಮುಚ್ಛಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. Advt
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸೋಮೇಶ್ ಸ್ವಾಗತಿಸಿ, ಉದಯ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ರಾಘವನ್ ಉದ್ಘಾಟಿಸಿದರು. ಮಹಿಳಾ ಘಟಕದ ಇಂದಿರಾ ಮಾತನಾಡಿದರು. ಸರಕಾರಿ ವಕೀಲರುಗಳಾದ ದಿನೇಶ್ ಕುಮಾರ್, ಪ್ರಕಾಶ್ ಅಮ್ಮನಾಯ, ಲೋಹಿಯಾ ಆಕ್ಷನ್ ಚಂದ್ರಮೋಹನ್, ಸತೀಶ್ ಕುಮಾರ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಘಟಕದ ಕೋಶಾಧಿಕಾರಿ ರಂಜಿತ ಧನ್ಯವಾದವಿತ್ತರು.




.jpg)
.jpg)