Breaking Posts

6/trending/recent
Type Here to Get Search Results !

8:10:45

ಸಿಪಿಐ ಪಕ್ಷದ ಹಿರಿಯ ನೇತಾರ, ಪ್ರಗತಿಪರ ಕೃಷಿಕ, ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾಗಿದ್ದ ಫೆಲಿಕ್ಸ್' ಡಿ ಸೋಜಾ ನಿಧನ.

ಸಿಪಿಐ ಪಕ್ಷದ ಹಿರಿಯ ನೇತಾರ, ಪ್ರಗತಿಪರ ಕೃಷಿಕ, ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾಗಿದ್ದ ಫೆಲಿಕ್ಸ್' ಡಿ ಸೋಜಾ ನಿಧನ.
ಮಂಜೇಶ್ವರ: ಪ್ರಗತಿಪರ ಕೃಷಿಕರೂ, ಸಿಪಿಐ ಪಕ್ಷದ ಹಿರಿಯ ನೇತಾರರೂ, ಮಜಿಬೈಲು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದ ಮಜಿಬೈಲ್ ಪಜಿಂಗಾರು ನಿವಾಸಿ ಫೆಲಿಕ್ಸ್ ಡಿ' ಸೋಜಾ (78) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ನಿನ್ನೆ ರಾತ್ರಿ ಸ್ವ - ಗೃಹದಲ್ಲಿ ನಿಧನರಾದರು.
                                 Advt
ಮೃತರು ಹೊಸಂಗಡಿ - ಮೀಯಪದವು ರಸ್ತೆಯ ನಡುವೆ ಪಜಿಂಗಾರ್ ಎಂಬಲ್ಲಿ ತನ್ನ 80 ಸೆಂಟ್ಸ್ ಜಾಗವನ್ನು ರಸ್ತೆ ನಿರ್ಮಿಸಲು ನೀಡಿದ್ದರು. ಮೃತರು ಪತ್ನಿ ಐರನ್' ಡಿಸೋಜ ಮಕ್ಕಳಾದ ಅಲ್ವಿನ್, ಲ್ಯಾನ್ಸಿ, ಸ್ಟ್ಯಾನಿ ಉಷಾ ಅಳಿಯಂದಿರು ಸೊಸೆಯಂದಿರಾದ ರೀಟಾ, ಸೆನ್ರ, ಸಿಂತಿಯಾ, ಡೆನ್ನಿಸ್ (ಪೋಸ್ಟ್ ಮ್ಯಾನ್ ಮೂಡಂಬೈಲ್ ), ಪ್ರಾನ್ಸಿಸ್ (ಮಸ್ಕತ್), ಐರಿನ್, ಸೆಲಿನ್, ಲೀನಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿದ್ದು ಇವರ ಸೇವೆಯನ್ನು ಮನಗಂಡು ಮಿಂಜ ಕೃಷಿ ಭವನದ ವತಿಯಿಂದ ಸನ್ಮಾನಿತರಾಗಿದ್ದರು. ಮೃತರ ಅಂತ್ಯಕ್ರಿಯೆ ಇಂದು ಬೆಳಗ್ಗೆ 11 ಗಂಟೆಗೆ ಮೀಯಪದವು ಚರ್ಚ್ ನಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತರ ನಿಧನಕ್ಕೆ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಸಿಪಿಐ ಪಕ್ಷ ಗಾಢವಾದ ಸಂತಾಪ ಸೂಚಿಸಿದ್ದಾರೆ
.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.