Breaking Posts

6/trending/recent
Type Here to Get Search Results !

8:10:45

ಊಮ್ಮನ್ ಚಾಂಡಿ ಬಡವರ ಕಣ್ಣೀರೊರೆಸಿದ ಮಹಾನ್ ಸಂತ: ಶಾಸಕ ಎಕೆಎಂ ಅಶ್ರಫ್.

ಊಮ್ಮನ್ ಚಾಂಡಿ ಬಡವರ ಕಣ್ಣೀರೊರೆಸಿದ ಮಹಾನ್ ಸಂತ : ಶಾಸಕ ಎಕೆಎಂ ಅಶ್ರಫ್.


ಮಂಜೇಶ್ವರ : ಮುಖ್ಯಮಂತ್ರಿಯಾಗಿ ಜನಸಂಪರ್ಕ ಕಾರ್ಯಕ್ರಮದ ಮೂಲಕ ಬಡಜನರ ಬಳಿಗೆ ತಲುಪಿ, ಅವರ ಕಣ್ಣೀರೊರೆಸಿದ ಊಮ್ಮನ್ ಚಾಂಡಿ ಕಾರುಣ್ಯಲೋಕದ ಮಹಾನ್ ಸಂತರಂತೆ ವಿರಾಜಿಸಿದವರು, ಜಗತ್ತನ್ನೇ ವಿಸ್ಮಯಗೊಳಿಸಿದ ಅವರ ಜನಸಂಪರ್ಕ ಕಾರ್ಯಕ್ರಮ ರಾಜಕೀಯ ಲೋಕದ ಅವಿಸ್ಮರಣೀಯ, ಸಮಾಜದ ಕಟ್ಟಕಡೆಯ ಜನರೆಡೆಗೆ ತಲುಪಿದ ಊಮ್ಮನ್ ಚಾಂಡಿ ಯಾವತ್ತೂ ಅಜರಾಮರ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು. ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ಜರುಗಿದ ಸರ್ವಪಕ್ಷ ಸಂತಾಪ ಸೂಚಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
Advt

ಮಂಡಲ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಶಾಫೀ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಸಂಕಬೈಲು ಸತೀಶ ಅಡಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಿ.ವಿ.ರಾಜನ್ (ಸಿಪಿಐ), ಪಿ.ಎಚ್.ಅಬ್ದುಲ್ ಹಮೀದ್ ( ಮುಸ್ಲಿಂ ಲೀಗ್), ಪ್ರಶಾಂತ್ ಕನಿಲ (ಸಿಪಿಎಂ) , ಹರಿಶ್ಚಂದ್ರ ಮಂಜೇಶ್ವರ (ಬಿಜೆಪಿ), ಅಶ್ರಫ್ ಬಡಾಜೆ (ಎಸ್ಡಿಪಿಐ) ,ಇಬ್ರಾಹಿಂ ಗೇರುಕಟ್ಟೆ (ಪಿಡಿಪಿ), ಅಶ್ರಫ್ ಉಪ್ಪಳ (ಎನ್ ಸಿಪಿ), ಅದ್ನಾನ್ (ವೆಲ್ಫೇರ್ ಪಾರ್ಟಿ), ಬಶೀರ್ ಕನಿಲ (ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ), ಅಶ್ರಫ್ ಫೈಝಿ ಕಡಂಬಾರು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕುಂಞಂಬು ನಂಬ್ಯಾರ್, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸೋಮಪ್ಪ, ಕಾಸರಗೋಡು ಜಿ.ಪಂ.ಸದಸ್ಯೆ ಕಮಲಾಕ್ಷಿ.ಕೆ, ಮಂಜೇಶ್ವರ ಗ್ರಾಮ ಪಂ.ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ, ಉಪಾಧ್ಯಕ್ಷ ಮೊಹಮ್ಮದ್ ರಫೀಕ್, ಬ್ಲಾಕ್ ಪಂಚಾಯತು ಸದಸ್ಯ ಹಮೀದ್ ಹೊಸಂಗಡಿ, ಹರ್ಷಾದ್ ವರ್ಕಾಡಿ, ಪಿ.ಎಂ ಖಾದರ್ ಹಾಜೀ, ಮುಸ್ತಫಾ ಕಡಂಬಾರ್, ಅಹ್ಮದ್ ಮನ್ಸೂರ್, ಸೈಫುಲ್ಲಾ ತಂಙಳ್, ಅಬ್ದುಲ್ಲ ಕಜೆ, ತಮೀಮ್ ಮಂಜೇಶ್ವರ, ಝಕರಿಯಾ ಶಾಲಿಮಾರ್, ಮೊಹಮ್ಮದ್ ಹನೀಫ್, ನೈನಾರ್ ಅಹ್ಮದ್, ಅಬ್ದುಲ್ ಅಝೀಝ್ ಹಾಜೀ, ಮೊಯಿದಿನ್ ಪ್ರಿಯಾ, ಕೃಷ್ಣನ್ ಅಡ್ಕತ್ತೊಟ್ಟಿ, ನಾಗೇಶ್ ಮಂಜೇಶ್ವರ, ಯೋಗೀಶ್, ಮಾಲಿಂಗ, ರಝಾಕ್, ಮುಂತಾದವರು ನುಡಿನಮನ ಸಲ್ಲಿಸಿದರು. ಇರ್ಷಾದ್ ಮಂಜೇಶ್ವರ ಸ್ವಾಗತಿಸಿ, ಗುರುವಪ್ಪ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.