ಮಂಜೇಶ್ವರ: ಮಜಿಬೈಲು ನಾಟೆಕಲ್ಲು ನಿವಾಸಿ ಮಾಧವ (78) ಎಂಬವರು ಅಲ್ಪಕಾಲದ ಅಸೌಕ್ಯದಿಂದ ಬಳಲುತ್ತಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಹಲವು ವರ್ಷಗಳಿಂದ ಹೊಸಂಗಡಿ ಪೇಟೆಯಲ್ಲಿ ಟೆಂಪೋ ಚಾಲಕರಾಗಿದ್ದರು. ಮೃತರು ಪತ್ನಿ: ಪ್ರೇಮಾ, ಮಕ್ಕಳಾದ: ದಿನೇಶ್ (ಬಸ್ ನಿರ್ವಾಹಕ), ಯತೀಶ್ (ಗಲ್ಫ್), ಜಗದೀಶ್ (ಬಸ್ ನಿರ್ವಾಹಕ), ಸೊಸೆಯಂದಿರಾದ: ಕವಿತಾ, ಸರಿತಾ, ಹಾಗೂ ಏಕ ಸಹೋದರಿ ಲಕ್ಷ್ಮಿಯವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಕ್ಕೆ ರಾಮತ್ತಮಜಾಲ್ ಸಾರ್ವಜನಿಕ ರುಧ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.
8:10:45
