ಮೀoಜ ಗ್ರಾಮ ಪಂಚಾಯತ್ ಮಟ್ಟದ "ಆಸರೆ" ಗುಂಪು ಕೃಷಿ ಉದ್ಘಾಟನೆ ಮಜಿಬೈಲುನಲ್ಲಿ.
ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತ್ ನ ಕುಟುಂಬ ಶ್ರೀ ಸಿ.ಡಿ.ಎಸ್. ಸಹಭಾಗಿತ್ವದಲ್ಲಿ ಮೂಡಂಬೈಲು ವಾರ್ಡಿನ "ಆಸರೆ" ಎಂಬ ಹೆಸರಿನ ಹರಿತ ಜೆ.ಎಲ್.ಜಿ(ಗುಂಪು ಕೃಷಿ) ಯನ್ನು ಮಜಿಬೈಲ್ ನ ಕೃಷಿಕರಾದ ಹೆನ್ರಿ ಡಿಸೋಜ ರ ಮನೆಯ ವಠಾರದಲ್ಲಿ ಇಂದು ಬೆಳಿಗ್ಗೆ ಮೀಂಜ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿಯವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಡಿ.ಎಸ್ ಚೆಯರ್ ಪರ್ಸನ್ ಶ್ರೀಮತಿ ಶಾಲಿನಿ. ಬಿ. ಶೆಟ್ಟಿ ವಹಿಸಿದ್ದರು. ಮೀಂಜ ಪಂಚಾಯತ್ ಉಪಾಧ್ಯಕ್ಷ ಶ್ರೀ ಜಯರಾಮ ಬಲ್ಲಂಗೂಡೆಲ್, ಮೂಡಂಬೈಲು ವಾರ್ಡಿನ ಸಿ. ಡಿ. ಎಸ್. ಸದಸ್ಯೆ ಲೋಲಾಕ್ಷಿ, ಮಜಿಬೈಲ್ ವಾರ್ಡಿನ ಸಿ. ಡಿ. ಎಸ್. ಸದಸ್ಯೆ ಸರಿತಾರವರು ಕೃಷಿಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸ್ಥಳೀಯ ಕೃಷಿಕರಾದ ಶ್ರೀ ವಿಶ್ವನಾಥ ಆಳ್ವ ಕರಿಬೈಲು, ಶ್ರೀ ರಮೇಶ್ ಸುವರ್ಣ, ಶ್ರೀ ಪ್ರಭಾಕರ ಶೆಟ್ಟಿ ಮಂಜಯ ಹಿತ್ಲು, ಶ್ರೀ ನಾಗೇಶ್ ಕಿನ್ನಿಮಾರು,ಶ್ರೀ ಹೆನ್ರಿ ಡಿಸೋಜ ಹಾಗೂ ಆಸರೆ ಕುಟುಂಬ ಶ್ರೀಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಆರಂಭದಲ್ಲಿ ಶ್ರೀಮತಿ ಐರಿನ್ ಜೋಸ್ಫಿನ್ ಸ್ವಾಗತಿಸಿ ಶ್ರೀಮತಿ ಸವಿತಾ ಮಜಿಬೈಲ್ ವಂದಿಸಿದರು.




