Breaking Posts

6/trending/recent
Type Here to Get Search Results !

8:10:45

ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿವಾರ್ಷಿಕ ಮಹಾಸಭೆ.

ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ
ವಾರ್ಷಿಕ ಮಹಾಸಭೆ.
ಮಂಜೇಶ್ವರ:- ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿ
ವಾರ್ಷಿಕ ಮಹಾಸಭೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗಡೆ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ 46 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದ ನೂತನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಗೌರವಾಧ್ಯಕ್ಷರಾಗಿ: ಹೈಮೇಶ್ ಬಿ.ಎಂ ಕಟ್ಟೆಬಜಾರ್, ಶೇಷಪ್ಪ ಸಾಲಿಯಾನ್ ವಾಮಂಜೂರು ಚೆಕ್ ಪೋಸ್ಟ್, ಅಧ್ಯಕ್ಷರಾಗಿ: ಯಾದವ ಬಡಾಜೆ, ಪ್ರಧಾನ ಕಾರ್ಯದರ್ಶಿಯಾಗಿ: ಕಮಲಾಕ್ಷ ತೂಮಿನಾಡು, ಕೋಶಾಧಿಕಾರಿಯಾಗಿ: ಅಶೋಕ್ ದೇವಾಡಿಗ ಕುಚ್ಚಿಕಾಡ್, ಪ್ರಧಾನ ಸಂಚಾಲಕರಾಗಿ: ಪದ್ಮನಾಭ ಕಡಪ್ಪರ, ನವೀನ್ ರಾಜ್ ಕೆ.ಜೆ, ಸಂಘಟನಾ ಕಾರ್ಯದರ್ಶಿಯಾಗಿ: ಹರೀಶ್ ಶೆಟ್ಟಿ ಮಾಡ, ಅವಿನಾಶ್ ಹೆಗ್ಡೆ, ಲೆಕ್ಕ ಪರಿಶೋಧಕರಾಗಿ: ರಮೇಶ್ ಕಟ್ಟೆಬಜಾರ್ ಆಯ್ಕೆಯಾದರು. ಕಾರ್ಯಕ್ರಮದ ಯಶಸ್ವಿಗಾಗಿ ಇತರ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಈ ಬಾರಿಯ 46 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ ತಿಂಗಳ 14 ರಿಂದ 17 ರವರೆಗೆ ವಿವಿಧ, ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಯಿತು. ಬಳಿಕ ನೂತನ ಸಮಿತಿಯ ಅಧಿಕಾರ ಹಸ್ತಾಂತರ ಕ್ಷೇತ್ರದ ಸನ್ನಿಧಿಯಲ್ಲಿ ನಡೆಯಿತು. ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ ವಂದಿಸಿದರು. 46 ನೇ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಸಿಯಲ್ಪಡುವ ಗಣಪತಿಯ ವಿಗ್ರಹ ರಚನೆಯ ಮುಹೂರ್ತ ನಾಳೆ (22-07-2026 ನೇ ಬುಧವಾರ ಬೆಳಗ್ಗೆ) 8.00 ಗಂಟೆಗೆ ಸರಿಯಾಗಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.