ಮಂಜೇಶ್ವರ: ಮಾದಕ ವಸ್ತುಗಳ ವ್ಯಾಪನದ ವಿರುದ್ಧ ರಾಜ್ಯವ್ಯಾಪಿಯಾಗಿ ಸರ್ಕಾರ ಜಾರಿಗೆ ತಂದಿರುವ “ಆಪರೇಶನ್ ತೂಫಾನ್” ಕಾರ್ಯಕ್ರಮದ ಭಾಗವಾಗಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಆಯೋಜಿಸಿದ್ದ ಶೂಟೌಟ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಯು.ಕೆ.ಸೈಫುಲ್ಲ ತಂಗಳ್ ತಮ್ಮ ಭಾಷಣದಲ್ಲಿ, ಮಾದಕ ವಸ್ತುಗಳ ವಿರುದ್ಧ ಸರ್ಕಾರದೊಂದಿಗೆ ಜನರೂ ಕೈಜೋಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಮಾದಕ ವಸ್ತುಗಳನ್ನು ಪೂರೈಕೆ ಮಾಡುವವರು ತಮ್ಮ ಕುಟುಂಬದಲ್ಲಿ ಅದರ ಬಳಕೆಯನ್ನು ಎಂದಿಗೂ ಅನುಮತಿಸುವುದಿಲ್ಲ, ಆದರೆ ಸಮಾಜದ ಯುವಕರೇ ಅದರ ಮುಖ್ಯ ಬಲಿಗಳು ಮತ್ತು ಸಾಗಾಟಗಾರರಾಗಿ ಮಾರ್ಪಡುತ್ತಾರೆ ಎಂಬುದನ್ನು ಅವರು ತಿಳಿಸಿದರು. ಇದರ ಬೇರುಗಳನ್ನು ನಿರ್ಮೂಲ ಮಾಡುವಲ್ಲಿ ಸರ್ಕಾರದ ಪ್ರಯತ್ನಗಳ ಜೊತೆಗೆ ಸಾರ್ವಜನಿಕರ ಜಾಗೃತಿಯೂ ಅಗತ್ಯವಿದೆ ಎಂದು, ಕೊಲಂಬಿಯಾದ ಕುಖ್ಯಾತ ಡ್ರಗ್ ಡೀಲರ್ ಪಾಬ್ಲೋ ಎಸ್ಕೋಬಾರ್ ಉದಾಹರಣೆಯನ್ನು ಉಲ್ಲೇಖಿಸಿ ವಿವರಿಸಿದರು. ಸಮಾಜದಾದ್ಯಂತ, ವಿಶೇಷವಾಗಿ ಯುವಕರಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಮೂಡಿಸಲು ಪ್ರತಿಯೊಬ್ಬರೂ “ತೂಫಾನ್ ವಾರಿಯರ್” ಆಗಬೇಕೆಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಸ್ವೀಕರಿಸಿದರು.
ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಯಿಷಾ ಶಹೀಮ ಫಿದಾ, ಉಪಾಧ್ಯಕ್ಷ ಶ್ರೀ ಇ ಕೆ ಇಬ್ರಾಹಿಂ ಕುಂಜಿ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹನೀಫ್, ಮೋಹನ್ ರೈ, ಸದಸ್ಯರಾದ ಅಬ್ದುಲ್ ಅಜೀಸ್ ಮರಿಕೆ, ಅಬ್ದುಲ್ ರಜಾಕ್ ಚಿಪ್ಪಾರ್, ಬೀಪಾತು ಎಸ್ ಎ, ಮೊಹಮ್ಮದ್ ಜುನೈದ್ ಎಂ ಕೆ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಹಸೀನಾ ಮತ್ತಿತರರು ಭಾಗವಹಿಸಿದರು. ಕಾರ್ಯಕ್ರಮದ ವೇಳೆ ವಿಶ್ವಕಪ್ ಫುಟ್‌ಬಾಲ್‌ನ ಭಾಗವಾಗಿ ಆಯೋಜಿಸಿದ್ದ ಭವಿಷ್ಯವಾಣಿ ಸ್ಪರ್ಧೆಯ ವಿಜೇತರನ್ನೂ ಘೋಷಿಸಲಾಯಿತು.
18 ತಂಡಗಳಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್‌ನ 125 ಕ್ಕೂ ಹೆಚ್ಚು ಯುವಕರು ಭಾಗವಹಿಸಿದ ಶೂಟೌಟ್ ಸ್ಪರ್ಧೆ ಜುಲೈ 25 ರಂದು ಉಪ್ಪಳದ ಪ್ಲೇ-ಆಫ್ ಟರ್ಫ್‌ನಲ್ಲಿ ನಡೆಯಿತು. ಲೀಗ್ ಹಾಗೂ ನಾಕ್‌ಔಟ್ ಮಾದರಿಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮೌಲಾನ ಫ್ರೆಂಡ್ಸ್ ಮಂಜೇಶ್ವರ ತಂಡವು ವಿಜೇತರಾಯಿತು. ಕಜ ಫ್ರೆಂಡ್ಸ್ ತಂಡವು ದ್ವಿತೀಯ ಸ್ಥಾನ ಪಡೆದಿತು. ವಿಜೇತರಿಗೆ ಟ್ರೋಫಿ ಮತ್ತು ಪದಕಗಳನ್ನು, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾಸರಗೋಡು ಜಿಲ್ಲೆಯ ಸಾರ್ವಜನಿಕರಿಗಾಗಿ ನಡೆಸಿದ ವಿಶ್ವಕಪ್ ಭವಿಷ್ಯವಾಣಿ ಸ್ಪರ್ಧೆಯಲ್ಲಿ ಸ್ಪೇನ್ ಅನ್ನು ವಿಜೇತರೆಂದು ಊಹಿಸಿದವರಲ್ಲಿ ನರೆ ಹಾಕಿ ಆಯ್ಕೆಯಾದ ಹಬೀದ್ ₹10,001 ಬಹುಮಾನ ಪಡೆದರು. ದ್ವಿತೀಯ ಸ್ಥಾನಕ್ಕಾಗಿ ಅರ್ಜೆಂಟೀನಾವನ್ನು ಊಹಿಸಿದವರಲ್ಲಿ ಆಯ್ಕೆಯಾದ ಫಜಲ್ ಸಿ ಎಲ್ ಹಾಗೂ ಗೋಲ್ಡನ್ ಬೂಟ್ ವಿಜೇತ ಎಂಬಾಪ್ಪೆಯನ್ನು ಊಹಿಸಿದವರಲ್ಲಿ ಆಯ್ಕೆಯಾದ ಸತೀಶ್ ಬಿ ಅವರು ತಲಾ ₹5001 ಬಹುಮಾನಗಳನ್ನು ಪಡೆದರು.