Breaking Posts

6/trending/recent
Type Here to Get Search Results !

8:10:45

"ಆಟೋ ಫ್ರೆಂಡ್ಸ್ ಹೊಸಂಗಡಿ" ಆಟೋರಿಕ್ಷಾ ನಿಲ್ದಾಣ ಉದ್ಘಾಟನೆ: ಸಾರ್ವಜನಿಕರಿಗೆ ಅನುಕೂಲ.

"ಆಟೋ ಫ್ರೆಂಡ್ಸ್ ಹೊಸಂಗಡಿ" ಆಟೋರಿಕ್ಷಾ ನಿಲ್ದಾಣ ಉದ್ಘಾಟನೆ: ಸಾರ್ವಜನಿಕರಿಗೆ ಅನುಕೂಲ.
ಮಂಜೇಶ್ವರ: ಹೊಸಂಗಡಿ ಜನತೆಯ ಹಾಗೂ ಸ್ಥಳೀಯ ಸಾರ್ವಜನಿಕರ ಮತ್ತು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಆಟೋ ರಿಕ್ಷಾ ನಿಲ್ದಾಣವನ್ನ ಸ್ವತಃ ರಿಕ್ಷಾ ಚಾಲಕರು ಹಾಗೂ ಮಾಲಕರು ಸೇರಿಕೊಂಡು ಸುಮಾರು 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ "ಆಟೋ ಫ್ರೆಂಡ್ಸ್ ಹೊಸಂಗಡಿ" ಎಂಬ ನಾಮಾಂಕಿತದೊಂದಿಗೆ ಆಟೋ ರಿಕ್ಷಾ ನಿಲ್ದಾಣವನ್ನು ಇಂದು ಭವ್ಯವಾಗಿ ಉದ್ಘಾಟಿಸಲಾಯಿತು. ಹೊಸಂಗಡಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗಿರುವ ಈ ನಿಲ್ದಾಣವನ್ನು ಮಂಜೇಶ್ವರ ಶಾಸಕರಾದ ಎ.ಕೆ.ಎಂ ಅಶ್ರಫ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು "ಸಾರ್ವಜನಿಕ ಸಾರಿಗೆಯಲ್ಲಿ ಆಟೋ ರಿಕ್ಷಾಗಳ ಪಾತ್ರ ಅತ್ಯಂತ ದೊಡ್ಡದಾಗಿದೆ. ಈ ಹೊಸ ನಿಲ್ದಾಣದಿಂದಾಗಿ ಪ್ರಯಾಣಿಕರಿಗೆ ಸುವ್ಯವಸ್ಥಿತ ಸೇವೆ ಸಿಗಲಿದೆ. ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಂಡು, ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು," ಎಂದು ಅವರು ಕರೆ ನೀಡಿದರು. ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಅಶ್ವಿನಿ ಎಂ. ಎಲ್ ಮಾತನಾಡಿ, ಹೊಸಂಗಡಿ ಪೇಟೆಯಲ್ಲಿ "ಹಲವು ವರ್ಷಗಳಿಂದ ಸೂಕ್ತ ನಿಲ್ದಾಣವಿಲ್ಲದೆ ಚಾಲಕರು ಮತ್ತು ಪ್ರಯಾಣಿಕರು ಬಿಸಿಲು-ಮಳೆಯಲ್ಲಿ ಪರದಾಡುವಂತಾಗಿತ್ತು. ಈಗ ಸುಸಜ್ಜಿತ ನಿಲ್ದಾಣ ನಿರ್ಮಾಣವಾಗಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ಇದಕ್ಕೆ ಸಹಕರಿಸಿದ ಜನಪ್ರತಿನಿಧಿಗಳಿಗೆ ಮತ್ತು ಸರ್ವ ಜನತೆಗೆ ಮತ್ತು ಹಗಲು ರಾತ್ರಿ.
ದುಡಿದ ರಿಕ್ಷಾ ಚಾಲಕರ ಶ್ರಮವನ್ನು ಈ ವೇಳೆ ಶ್ಲಾಘಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಆಟೋ ರಿಕ್ಷಾ ಚಾಲಕರಾದ ಶ್ರೀಧರ ಬಿ.ಎಂ ವಹಿಸಿದರು. ಅವರು ಮಾತನಾಡಿ ನೂತನ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಸುಸಜ್ಜಿತ ಚಾವಣಿಯ ವ್ಯವಸ್ಥೆ ಮಾಡಲು ಬಾಕಿ ಇವೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಮೊತ್ತ ಬೇಕಾಗಿದ್ದು, ಸಹೃದಯಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಅಟೋ ರಿಕ್ಷಾ ಚಾಲಕರಿದ್ದಾರೆ. ಎಂದು ಅವರು ಹೇಳಿದರು. ಈ ವೇಳೆ ಮಂಜೇಶ್ವರ ಶಾಸಕರನ್ನು ಹಾಗೂ ಹಿರಿಯ ಆಟೋ ಚಾಲಕರನ್ನು ಶಾಲು ಹೊದಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ: ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಶೀರ್ ಕನಿಲ, ವಾರ್ಡ್ ಸದಸ್ಯ ಸಿದ್ದೀಕ್ ಕಜೆ, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಎ. ಐ.ಟಿ.ಯು.ಸಿ ಜಿಲ್ಲಾ ಅಧ್ಯಕ್ಷ ಮುಸ್ತಫಾ ಎಂ.ಡಿ ಕಡಂಬಾರ್, ಎಸ್.ಟಿ.ಯು ರಾಜ್ಯ ಕಾರ್ಯದರ್ಶಿ ಶರೀಫ್ ಕೊಡವಂಜಿ, ಎಸ್.ಡಿ.ಟಿ.ಯು ಕಾಸರಗೋಡು ಜಿಲ್ಲಾ ಇನ್ಚರ್ಜ್ ಇಕ್ಬಾಲ್ ಹೊಸಂಗಡಿ, ಸಾಮಾಜಿಕ ಕಾರ್ಯಕರ್ತ ಸತೀಶ್ ಅಡಪ ಸಂಕಬೈಲು, ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಸ್ಟ್ಯಾಂಡಿಂಗ್ ಕಮಿಟಿ ಚೇರ್ಮ್ಯಾನ್ ಹಮೀದ್ ಹೊಸಂಗಡಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಅಧ್ಯಕ್ಷರಾದ ಬಶೀರ್ ಕನಿಲ, ಹಿರಿಯ ಚಾಲಕ ಭಾಸ್ಕರ ಬಿ.ಎಂ ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಎ. ಐ.ಟಿ.ಯು.ಸಿ ಜಿಲ್ಲಾ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಮುಸ್ತಫಾ ಎಂ.ಡಿ ಕಡಂಬಾರ್ ಸ್ವಾಗತಿಸಿ, ರಿಕ್ಷಾ ಚಾಲಕರಾದ ನಿಸಾರ್ ಎಸ್.ಎನ್ ನಿರೂಪಿಸಿ, ಮೊಯ್ದಿನ್ ಮೂಡಂಬೈಲು ವಂದಿಸಿದರು. ಸಾರ್ವಜನಿಕರಿಗೆ ಅಟೋ ರಿಕ್ಷಾ ಚಾಲಕರು ಪಾನೀಯ ವಿತರಿಸಿ, ಸಿಹಿ ಹಂಚಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.