Breaking Posts

6/trending/recent
Type Here to Get Search Results !

8:10:45

A+ ವಿದ್ಯಾರ್ಥಿಗಳಿಗೆ ವರ್ಕಾಡಿ ಪ್ರತಿಭಾ ಪುರಸ್ಕಾರ. 20 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪುರಸ್ಕಾರ ನೀಡಲಿರುವ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ.

A+ ವಿದ್ಯಾರ್ಥಿಗಳಿಗೆ ವರ್ಕಾಡಿ ಪ್ರತಿಭಾ ಪುರಸ್ಕಾರ. 20 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪುರಸ್ಕಾರ ನೀಡಲಿರುವ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ.

ಮಂಜೇಶ್ವರ: ಕಾಸರಗೋಡು ಜಿಲ್ಲಾ ಪಂಚಾಯತಿನ ವರ್ಕಾಡಿ ಡಿವಿಜನ್ ಗೊಳಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು, 2025-26ನೇ ಶೈಕ್ಷಣಿಕ ವರ್ಷದ SSLC ಹಾಗೂ Plus Two ಅಂತಿಮ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿಯೂ A+ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ "ಪ್ರತಿಭಾ ಪುರಸ್ಕಾರ ಹಾಗೂ ಸ್ವರ್ಣ ಪದಕ" ನೀಡಿ ಗೌರವಿಸಲಾಗುವುದು. ಇಂದು
2026 ಜುಲೈ 13 ರಂದು ಸೋಮವಾರ ಅಪರಾಹ್ನ 1.30 ಕ್ಕೆ ಸರಿಯಾಗಿ 
ಕೊಡ್ಲಮೊಗರು ಶ್ರೀ ವಾಣಿವಿಜಯ ಪ್ರೌಢಶಾಲೆಯ ಪರಿಸರದಲ್ಲಿ ಜರಗುವ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದು, ಕಾಸರಗೋಡು ಸಂಸದ ಶ್ರೀ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಾಹಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಜನಪ್ರತಿನಿಧಿಗಳು, ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶೇಕಡಾ 100 ಫಲಿತಾಂಶ ತಂದುಕೊಟ್ಟ ಶಾಲೆಗಳಿಗೆ ಪ್ರಶಂಶಾ ಪತ್ರ ನೀಡಿ ಗೌರವಿಸಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.