ಮಂಜೇಶ್ವರ: ಕೇರಳ ಕೃಷಿಕರ ಬ್ಯಾಂಕ್ ಎಂದು ಖ್ಯಾತಿ ಪಡೆದ ಕೇರಳ ಗ್ರಾಮೀಣ ಬ್ಯಾಂಕ್ 14 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಈ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಬ್ಯಾಂಕಿನ 14 ನೇ ಹುಟ್ಟುಹಬ್ಬವನ್ನು ಪಾವೂರು ಕೇರಳ ಗ್ರಾಮೀಣ ಬ್ಯಾಂಕಿನಲ್ಲಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಮೆನೇಜರ್ ಶ್ರುತಿ. ಸಿ. ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ನೆರವೇರಿಸಿದರು. ಕಾರ್ಯಕ್ರಮ ಮೀದಲ್ಲಿ ತ್ಯಾoಪಣ್ಣ ರೈ ಮುಟ್ಲ, ಡಾ. ಗಣೇಶ್ ಪಾವೂರು. ಇಸ್ಮಾಯಿಲ್ ಜಮಾಲ್. ಬೌತೀಶ್ ಡಿಸೋಜ. ಅಸಿಸ್ಟೆಂಟ್ ಮೆನೇಜರ್ ರಜಿನ್. ಬ್ಯಾಂಕ್ ಸಿಬ್ಬಂದಿಗಳಾದ ಸೂರಜ್ K. V. ವೀಣಾ ದಯಾನಂದ. ಹಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಭಾಗವಹಿಸಿದರು.
8:10:45