Breaking Posts

6/trending/recent
Type Here to Get Search Results !

8:10:45

ಕಾಸರಗೋಡಿನಲ್ಲಿ ವಸಿಷ್ಠ ಪೀಠ ಪ್ರಶಸ್ತಿ ಪ್ರದಾನ ಸಮಾರಂಭ

ಕಾಸರಗೋಡಿನಲ್ಲಿ ವಸಿಷ್ಠ ಪೀಠ ಪ್ರಶಸ್ತಿ ಪ್ರದಾನ ಸಮಾರಂಭ
ಕಾಸರಗೋಡು: ನೀರ್ಚಾಲು ಸಮೀಪದ ಕಿಳಿಂಗಾರು ನೆಡುಮನೆಯಲ್ಲಿ ವಸಿಷ್ಠ ಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಭವ್ಯವಾಗಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಮಾನವ ಹಕ್ಕು ಆಯೋಗದ ಸದಸ್ಯ ಡಾ. ಟಿ. ಶ್ಯಾಮ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೈದಿಕ ವಿದ್ವಾಂಸರಾದ ವೇದಮೂರ್ತಿ ಮಿತ್ತೂರು ಸದಾಶಿವ ಭಟ್ ಅವರಿಗೆ ವಸಿಷ್ಠ ಪೀಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಕೆ.ವಿ. ಶ್ರೀರಾಮ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು. ಜೊತೆಗೆ ಪ್ರತಿಭಾವಂತ ವೈದಿಕ ವಿದ್ಯಾರ್ಥಿ ಸುಶಾಂತ್ ಶ್ರೀಕಾಂತ್ ಭಟ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಿರಿಯ ಕವಿ ಡಾ. ರಮಾನಂದ ಬನಾರಿ ಹಾಗೂ ವೇದಮೂರ್ತಿ ಹಿರಣ್ಯ ವೆಂಕಟೇಶ ಭಟ್ ಅಭಿನಂದನಾ ಭಾಷಣ ಮಾಡಿದರು. ಧಾರ್ಮಿಕ ಮುಂದಾಳು ದೇಲಂಪಾಡಿ ಗಣೇಶ ತಂತ್ರಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಳ್ಳತ್ತಡ್ಕ ಸುಬ್ರಹ್ಮಣ್ಯ ಭಟ್, ಪತ್ತಡ್ಕ ಗಣಪತಿ ಭಟ್ ಹಾಗೂ ಕಾಂಚನ ಗಂಗಾ ಸೇರಿದಂತೆ ಹಲವರು ಭಾಗವಹಿಸಿದ್ದರು. ವೇದಮೂರ್ತಿ ನೆಡುಮನೆ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಭಟ್ ನೆಡುಮನೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.