Breaking Posts

6/trending/recent
Type Here to Get Search Results !

8:10:45

ಕಾಸರಗೋಡಿನ ನಿವೃತ್ತ ಸಹಾಯಕ ಅಬಕಾರಿ ಇನ್ಸ್‌ಪೆಕ್ಟರ್ ಕೆ. ರಘುರಾಮ ಪಾರೆಕಟ್ಟೆ ನಿಧನ

ಕಾಸರಗೋಡಿನ ನಿವೃತ್ತ ಸಹಾಯಕ ಅಬಕಾರಿ ಇನ್ಸ್‌ಪೆಕ್ಟರ್ ಕೆ. ರಘುರಾಮ ಪಾರೆಕಟ್ಟೆ ನಿಧನ

ಕಾಸರಗೋಡು: ಮೀಪುಗುರಿ ಪಾರೆಕಟ್ಟೆ ನಿವಾಸಿಯಾಗಿದ್ದು, ಪ್ರಸ್ತುತ ಕೂಡ್ಲು ಗಂಗೆ ರಸ್ತೆಯ “ಶ್ರೀ ಶೈಲ” ನಿವಾಸದಲ್ಲಿ ವಾಸವಾಗಿದ್ದ ಕಾಸರಗೋಡಿನ ನಿವೃತ್ತ ಸಹಾಯಕ ಅಬಕಾರಿ ಇನ್ಸ್‌ಪೆಕ್ಟರ್ ಕೆ. ರಘುರಾಮ (81) ಅವರು ವಯೋಸಹಜ ಅನಾರೋಗ್ಯದಿಂದ ಏಪ್ರಿಲ್ 17, 2026ರಂದು ನಿಧನರಾದರು.
ಅವರು ಪತ್ನಿ ಕೆ. ವಿಜಯಲಕ್ಷ್ಮಿ. ಪುತ್ರಿಯರಾದ ನಮಿತಾ ಶೈಲೇಂದ್ರ (ಮೈಸೂರು), ರಾಣಿ ವೇಣುಪ್ರಸಾದ್ (ಬಜ್ಪೆ), ಪುತ್ರ ಮಂಜುಪ್ರಸಾದ್ ಕೆ., ಸೊಸೆ ಅಂಬಿಕಾ ಡಿ.ಕೆ. (ಕುಂದಾಪುರ), ಸಹೋದರ ನಿವೃತ್ತ ಸೈನಿಕ ಕೆ. ತುಕರಾಮ ಪಾರೆಕಟ್ಟೆ ಹಾಗೂ ಸಹೋದರಿಯರು, ಬಂಧುಬಳಗವನ್ನು ಅಗಲಿದ್ದಾರೆ.
ಕೆ. ರಘುರಾಮ ಅವರ ನಿಧನಕ್ಕೆ ಕೇರಳ ರಾಜ್ಯ ಕೋಟೆಯವರ (ಕೋಟೆಗಾರರ) ಸೇವಾ ಸಂಘ (ರಿ.), ಕೂಡ್ಲು ಹಾಗೂ ರಾಮರಾಜ ಕ್ಷತ್ರಿಯ (ಕೋಟೆಯಾರ್) ಸೇವಾ ಸಂಘ (ರಿ.), ಕಾಸರಗೋಡು–ಕೂಡ್ಲು ಉಪಸಂಘ, ಶ್ರೀ ರಾಮನಾಥ ದೇವಸ್ಥಾನ ಬಂದಡ್ಕ ಹಾಗೂ ಶ್ರೀ ರಾಮನಾಥ ದೇವರ ಮನೆ, ನುಳ್ಳಿಪಾಡಿ (ಹೊಸ ಬಸ್ ನಿಲ್ದಾಣ ಸಮೀಪ) ಸಂತಾಪ ಸೂಚಿಸಿದ್ದಾರೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು – ಕೇರಳ ರಾಜ್ಯ ಘಟಕದ ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ.), ಕುಂದಾಪುರದ ಕಾರ್ಯಕಾರಿ ಸಮಿತಿ ಸದಸ್ಯ ಶಿವರಾಮ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.