Breaking Posts

6/trending/recent
Type Here to Get Search Results !

8:10:45

ಕಾಸರಗೋಡು ತುಳುನಾಡು ಭಾಗದ ಅಭಿವೃದ್ಧಿಗೆ ಸಮಗ್ರ ಅಧ್ಯಯನ

ಕಾಸರಗೋಡು ತುಳುನಾಡು ಭಾಗದ ಅಭಿವೃದ್ಧಿಗೆ ಸಮಗ್ರ ಅಧ್ಯಯನ

ಕಾಸರಗೋಡು: ತುಳುನಾಡಿನ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯಿಂದ ಕರ್ನಾಟಕ ಗಡಿ ತಲಪಾಡಿವರೆಗೆ ಹರಡುವ ಸುಮಾರು 32 ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಕುರಿತು ಅಧ್ಯಯನ ನಡೆಸಲು ಸರಕಾರೇತರ ಸಂಘಟನೆ ಮುಂದಾಗಿದೆ. ಕೇರಳದ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಸೆಂಟರ್ ಫಾರ್ ಇನ್ಫಾರ್ಮೇಶನ್ ಆಂಡ್ ಗೈಡೆನ್ಸ್ ಇಂಡಿಯಾ (CIGI) ಮತ್ತು ಮಲಬಾರ್ ಎಜುಕೇಶನ್ ಮೂವ್ಮೆಂಟ್ ಸಂಸ್ಥೆಗಳು, ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆ.ಕೆ.ಎನ್ ಕುರುಪ್ ಅವರ ನೇತೃತ್ವದಲ್ಲಿ ಈ ಹೊಸ ಉಪಕ್ರಮವನ್ನು ಕೈಗೊಂಡಿವೆ.
‘ಬಹುಭಾಷಾ ಸಂಗಮಭೂಮಿ’ ಎಂದು ಕರೆಯಲ್ಪಡುವ ಈ ಪ್ರದೇಶದಲ್ಲಿ ಸುಮಾರು 14 ಮನೆಮಾತಿನ ಭಾಷೆಗಳು ಇಂದಿಗೂ ಬಳಕೆಯಲ್ಲಿವೆ. ಶಿಕ್ಷಣ, ಮೂಲಸೌಕರ್ಯ ಮತ್ತು ತಾಂತ್ರಿಕ ಪ್ರಗತಿ ಕ್ಷೇತ್ರಗಳಲ್ಲಿ ಈ ಭಾಗ ಇನ್ನೂ ಹಿಂದುಳಿದಿರುವ ಹಿನ್ನೆಲೆ, ಪ್ರಸ್ತುತ ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸುವುದು ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ ಎಂದು ಕೆ.ಕೆ.ಎನ್ ಕುರುಪ್ ಅವರು ಗುರುವಾರ ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ತಿಳಿಸಿದ್ದಾರೆ.
ಇತಿಹಾಸದಲ್ಲಿ ಮರಾಠ ಹಾಗೂ ವಿಜಯನಗರ ಸೈನ್ಯಗಳ ದಾಳಿಗೆ ಒಳಗಾದ ಈ ಪ್ರದೇಶವು, ಕಾಲಕ್ರಮೇಣ ವಿವಿಧ ಜನಾಂಗಗಳ ವಾಸಸ್ಥಳವಾಗಿ ರೂಪಾಂತರಗೊಂಡಿದ್ದು, ಸಮ್ಮಿಶ್ರ ಸಂಸ್ಕೃತಿಯ ಪ್ರತೀಕವಾಗಿ ಬೆಳೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅವರು ಮಾತನಾಡಿ, ಪ್ರಸ್ತಾವಿತ 32 ಗ್ರಾಮಗಳ ಮಾಜಿ ಸಂಸದರು, ಶಾಸಕರು, ಪಂಚಾಯತ್ ಮಾಜಿ ಅಧ್ಯಕ್ಷರು, ಅಧಿಕಾರಿಗಳು, ಸಂಘಟನೆಗಳ ಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳ ಪರಿಣಿತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಗ್ರ ವರದಿ ತಯಾರಿಸಲಾಗುವುದು. ಆ ವರದಿಯ ಆಧಾರದಲ್ಲಿ ಮುಂದಿನ ಹಂತದಲ್ಲಿ ಸಮಾಲೋಚನಾ ಸಭೆ ನಡೆಸಿ ಅಭಿವೃದ್ಧಿ ಯೋಜನೆಗಯನ್ನು ಸಿದ್ಧಪಡಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ನಿಜಾರ್ ಮತ್ತು ಪ್ರಧಾನ ಕಾರ್ಯದರ್ಶಿ ಅಸ್ಲಾಂ ಮಾಸ್ಟರ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.